ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ, ಸುಲಭ ಸಾಲ, ಕಡಿಮೆ ಕಂತು!

By Suvarna News  |  First Published Jul 9, 2020, 3:13 PM IST

ಕೊರೋನಾ ವೈರಸ್ ನಡುವೆ ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗಾಗಿ ಹಲವು ಆಫರ್ ಘೋಷಿಸಿದೆ. ಸಾಮಾಜಿಕ ಅಂತರ, ಸಾರಿಗೆ ವ್ಯವಸ್ಥೆ ಸ್ಥಗಿತ ಸೇರಿದಂತೆ ಹಲವು ಕಾರಣಗಳಿಂದ ಜನರು ಕಾರು ಖರೀದಿಗೆ ಒಲವು ತೋರುತ್ತಿದ್ದಾರೆ. ಇದೀಗ ಗ್ರಾಹಕರ ಅನುಕೂಲಕ್ಕೆ ಮಾರುತಿ ಸುಜುಕಿ, ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. 


ನವದೆಹಲಿ(ಜು.09): ಗ್ರಾಹಕರಿಗಾಗಿ ಭಾರತೀಯ ಆಟೋಮೇಕರ್ ಭರ್ಜರಿ ಆಫರ್ ನೀಡುತ್ತಿದೆ. ಇದೀಗ ಮಾರುತಿ ಸುಜುಕಿ ಹಾಗೂ ಆಕ್ಸಿಕ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ. ನೂತನ ಒಪ್ಪಂದದ ಪ್ರಕಾರ ಸುಲಭ ಸಾಲ ಸೌಲಭ್ಯವನ್ನು ಮಾರುತಿ ಸುಜುಕಿ ನೀಡುತ್ತಿದೆ. ಇಷ್ಟೇ ಅಲ್ಲ ಅತೀ ಕಡಿಮೆ ತಿಂಗಳ ಕಂತು, ಅತೀ ಕಡಿಮೆ ದಾಖಲೆ ಪತ್ರ, ಅತೀ ಕಡಿಮೆ ಬಡ್ಡಿ ಸೇರಿದಂತೆ ಹಲವು ಸೌಲಭ್ಯ ನೀಡುತ್ತಿದೆ.

ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!

Latest Videos

undefined

ಪ್ರತಿ ಲಕ್ಷ ರೂಪಾಯಿ ಸಾಲಕ್ಕೆ ಕೇವಲ 899 ರೂಪಾಯಿ ಪ್ರತಿ ತಿಂಗಳ ಕಂತು. (ಊದಾಹರಣೆಗೆ ನಿಮ್ಮ ಕಾರಿನ ಸಾಲ  2 ಲಕ್ಷ ರೂಪಾಯಿ ಇದ್ದರೆ ಪ್ರತಿ ತಿಂಗಳ EMI 1,798 ರೂಪಾಯಿ ಆಗಲಿದೆ) ಆರಂಭಿಕ  3 ತಿಂಗಳ ಬಳಿಕ ಪ್ರತಿ ಲಕ್ಷಕ್ಕೂ 1,250 ರೂಪಾಯಿ. ಈ ಆಫರ್ ಜುಲೈ 31ರ ವರೆಗೆ ಮಾತ್ರ ಲಭ್ಯವಿದೆ. 

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲರ ಸುರಕ್ಷತೆ ನಮಗೆ ಮುಖ್ಯ. ಕೊರೋನಾದಿಂದ ಜನರು ಕಾರು ಖರೀದಿಗೆ ಒಲವು ತೋರುತ್ತಿದ್ದಾರೆ. ಸುರಕ್ಷಿತ ಪ್ರಯಾಣ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪ್ರತಿ ಕುಟುಂಬಕ್ಕೆ ಕಾರು ಅಗತ್ಯವಾಗಿ ಪರಿಣಮಿಸಿದೆ. ಹೀಗಾಗಿ ಗ್ರಾಹಕರಿಗೆ ಸುಲಭ ಸಾಲ, ಕಡಿಮೆ ತಿಂಗಳ ಕಂತು ಸೇರಿದಂತೆ ಹಲವು ಯೋಜನೆಯನ್ನು ಆಕ್ಸಿಕ್ ಬ್ಯಾಂಕ್ ಜೊತೆಗೂಡಿ ನೀಡುತ್ತಿದ್ದೇವೆ ಎಂದು ಮಾರುತಿ ಸುಜುಕಿ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾತ್ಸವ್ ಹೇಳಿದ್ದಾರೆ.

ಮಾರುತಿ ಸುಜುಕಿ ಸೆಲೆರಿಯೋ CNG ಕಾರು ಬಿಡುಗಡೆ!

ಅತೀ ಕಡಿಮೆ ದಾಖಲೆ ಪತ್ರ, ಸುಲಭ ಸಾಲ ನೀಡುಲ ಆಕ್ಸಿಸ್ ಬ್ಯಾಂಕ್ ಸಿದ್ಧವಾಗಿದೆ. ಇಷ್ಟೇ ಅಲ್ಲ ಗ್ರಾಹಕರು ಸಾಲಕ್ಕೆ ಅಲೆದಾಡಬೇಕಿಲ್ಲ. ತಕ್ಷಣವೇ ಸಾಲ ಸೌಲಭ್ಯ ಸಿಲಿದೆ. ಎಂದು ಆಕ್ಸಿಸ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರಯಾಲ್ ಮೊಂಡಾಲ್ ಹೇಳಿದ್ದಾರೆ.

click me!