
ನವದೆಹಲಿ(ನ.13): ಮಾರುತಿ ಸುಜುಕಿ ಸಂಸ್ಥೆ ಪ್ರಸಿದ್ದ ಜಿಪ್ಸಿ ಶೀಘ್ರದಲ್ಲೇ ಗುಡ್‌ಬೈ ಹೇಳಲಿದೆ. 2018ರ ಡಿಸೆಂಬರ್‌ನಲ್ಲಿ ಕಾರಿನ ಬುಕಿಂಗ್ ಅಂತ್ಯಗೊಳ್ಳಲಿದೆ. ಇಷ್ಟೇ ಅಲ್ಲ ಮಾರ್ಚ್ 2019ಕ್ಕೆ ಮಾರುತಿ ಜಿಪ್ಸಿ ನಿರ್ಮಾಣ ಕೂಡ ನಿಲ್ಲಿಸಲಿದೆ.
1985ರಲ್ಲಿ ಮಾರುತಿ ಜಿಪ್ಸಿ ಭಾರತದ ರಸ್ತೆಗಿಳಿದಿತ್ತು. 1. 0 ಲೀಟರ್ ಎಂಜಿನ್‌ನಿಂದ 1.3 ಲೀಟರ್ ಎಂಜಿನ್‌ಗೆ ಅಪ್‌ಗ್ರೇಡ್ ಹೊಂದಿದ್ದ ಜಿಪ್ಸಿ ವಿನ್ಯಾಸದಲ್ಲಾಗಲಿ ಇತರ ಯಾವುದೇ ಬಿಡಿ ಭಾಗಗಳಲ್ಲಿ ಬದಲಾವಣೆಯಾಗಿಲ್ಲ.
ನೂತನ ಜಿಪ್ಸಿ BS4 ಎಂಜಿನ್ ಹೊಂದಿದೆ. ಆದರೆ ಎಬಿಎಸ್ ಹಾಗೂ ಏರ್‌ಬ್ಯಾಗ್ ಹೊಂದಿಲ್ಲ. ಕನಿಷ್ಠ ಸುರಕ್ಷತೆ ಇಲ್ಲದೆ ವಾಹನಗಳನ್ನ ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಇದೀಗ ಜಿಪ್ಸಿ ಸುರಕ್ಷತೆ ಹಾಗೂ ಎಮಿಶನ್ ಟೆಸ್ಟ್‌ಲ್ಲೂ ವೈಫಲ್ಯ ಅನುಭವಿಸಿದೆ. ಹೀಗಾಗಿ 2019ರ ಮಾರ್ಚ್‌ನಲ್ಲಿ ಜಿಪ್ಸಿ ಕಣ್ಮರೆಯಾಗಲಿದೆ.
ನೂತನ ಜಿಪ್ಸಿ ಬೆಲೆ 7.5 ಲಕ್ಷ ರೂಪಾಯಿ. ಭಾರತೀಯ ಸೇನೆ, ಪೊಲೀಸ್, ಆಫ್ ರೋಡ್ ಡ್ರೈವ್ ಹಾಗೂ ಹಿಲ್ ಸ್ಟೇಶನ್ ಪ್ರದೇಶಗಳನ್ನ ಮಾರುತಿ ಜಿಪ್ಸಿ ಹೆಚ್ಚಾಗಿ ಬಳಕೆಯಾಗುತ್ತಿದೆ. 80bhp ಪೀಕ್ ಪವರ್ ಹಾಗೂ 103 nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಜಿಪ್ಸಿ, ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ವಾಹನ. 33 ವರ್ಷಗಳ ಕಾಲ ಭಾರತೀಯ ಕಾರು ಪ್ರಿಯರಲ್ಲಿ ಕ್ರೇಜ್ ಹುಟ್ಟಿಸಿದ ಜಿಪ್ಸಿ ಇದೀಗ ಓಟ ನಿಲ್ಲಿಸಲಿದೆ. ಇನ್ನು 4 ತಿಂಗಳಲ್ಲಿ ಜಿಪ್ಸಿ ಇತಿಹಾಸ ಪುಟ ಸೇರಲಿದೆ.