ಉದ್ಯಮಿಗಳ ಜೊತೆ BMW ಕಾರಿನಲ್ಲಿ ನಾಗಣ್ಣ ಪ್ರಯಾಣ-ಬೆಚ್ಚಿ ಬಿದ್ದ ಮಾಲೀಕ!

Published : Nov 12, 2018, 10:12 PM IST
ಉದ್ಯಮಿಗಳ ಜೊತೆ BMW ಕಾರಿನಲ್ಲಿ ನಾಗಣ್ಣ ಪ್ರಯಾಣ-ಬೆಚ್ಚಿ ಬಿದ್ದ ಮಾಲೀಕ!

ಸಾರಾಂಶ

ಲಕ್ಸುರಿ ಹಾಗೂ ದುಬಾರಿ BMW ಕಾರಿನಲ್ಲಿ ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದು ಅಂದುಕೊಂಡ ಉದ್ಯಮಿಗಳಿಬ್ಬರಿಗೆ ಶಾಕ್ ಎದುರಾಗಿದೆ. ಅಷ್ಟಕ್ಕೂ ಉದ್ಯಮಿಗಳಿಗೆ ಎದುರಾದ ಸಂಕಷ್ಟ ಏನು? ಇಲ್ಲಿದೆ.

ತಿರುಪ್ಪುರ್(ನ.12): ಕಾರಿನಲ್ಲಿ ಪ್ರಯಾಣಿಸುವಾಗ ಒಂದಿಬ್ಬರು ಜೊತೆಗಿದ್ದರೆ ಪ್ರಯಾಣ ಸುಖಕರವಾಗಿರುತ್ತೆ. ಆದರೆ ಮಧುರೈ ತಿರುಪ್ಪುರ್ ಉದ್ಯಮಿಗಳಿಬ್ಬರಿಗೆ ಮೂರನೇ ಆತಿಥಿ ಆಗಮನ ಸಂಕಷ್ಟಕ್ಕೆ ಸಿಲುಕಿಸಿದೆ. ಅಷ್ಟಕ್ಕೂ ತಿರುಪ್ಪುರ್ ಉದ್ಯಮಿಗಳು ತಮ್ಮ BMW ಕಾರಿನ ಪ್ರಯಾಣದಲ್ಲಿ ಆಗಮಿಸಿದ ಅತಿಥಿ ನಾಗರ ಹಾವು.

ತಿರಪ್ಪುರ್‌ನಿಂದ ಮಧುರೈಗೆ ವೇಗವಾಗಿ ತೆರಳುತ್ತಿದ್ದ ವೇಳೆ ರಸ್ತೆ ನಡುವಿನಲ್ಲಿದ್ದ ನಾಗರ ಹಾವಿನ ಮೇಲೆ ಕಾರು ಹರಿದಿದೆ. ಹಾವಿನ ಮೇಲಿನಿಂದ ಕಾರು ಚಲಿಸಿದ ಕಾರಣ ಉದ್ಯಮಿಗಳಿಬ್ಬರು ಹೆಚ್ಚು ಯೋಚನೆ ಮಾಡದೆ ಪ್ರಯಾಣ ಮುಂದುವರಿಸಿದ್ದಾರೆ.

ಕೆಲ ದೂರ ಪ್ರಯಾಣಿಸದ ಉದ್ಯಮಿಗಳಿಬ್ಬರಿಗೆ ತಮ್ಮ BMW ಕಾರಿನಲ್ಲಿ ಅದೇ ನಾಗರಹಾವು ಕಾಣಿಸಿಕೊಂಡಿದೆ. ಬೆಚ್ಚಿ ಬಿದ್ದ ಉದ್ಯಮಿಗಳು ಕಾರು ನಿಲ್ಲಿಸಿ ತುರ್ತು ಸೇವೆಗೆ ಕರೆ ಮಾಡಿ ಸಹಾಯ ಕೋರಿದ್ದಾರೆ. ಆದರೆ ಅದೆಷ್ಟೇ ಹುಡುಕಿದರೂ ಹಾವು ಮಾತ್ರ ಪತ್ತೆಯಾಗಲಿಲ್ಲ.

ಹಾವು ಕಾರಿನಿಂದ ಇಳಿದ ಹೋಗಿರಬಹುದೆಂದು ಭಾವಿಸಿ ಮತ್ತೆ ಪ್ರಯಾಣ ಮಾಡಿದ್ದಾರೆ. ಆದರೆ ಕೆಲ ಹೊತ್ತಲ್ಲೇ ಮತ್ತೆ ಹಾವು ಬುಸುಗುಟ್ಟೋ ಶಬ್ದ ಕೇಳಿಸಿದೆ. ಹೀಗಾಗಿ ತಮ್ಮ ಪ್ರಯಾಣ ಮೊಟಕುಗೊಳಿಸಿ ಸನಿಹದ BMW ಸರ್ವೀಸ್ ಸ್ಟೇಶನ್‌ಗೆ ತೆರಳಿದ್ದಾರೆ. ಸರ್ವೀಸ್ ಸ್ಟೇಶನ್‌ನಲ್ಲಿ ಹಾವು ಹಿಡಿಯುವವರು ಬಂದು ಹಾವನ್ನ ಹಿಡಿದಿದ್ದಾರೆ. 


 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ