ಮಾರುತಿ ಬ್ರೆಜಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ನಾಲ್ಕು SUV ಕಾರು!

By Suvarna News  |  First Published Aug 16, 2020, 7:33 PM IST

ಭಾರತದಲ್ಲಿ ಮಾರುತಿ ಬ್ರೆಜಾ ಅತ್ಯಂತ ಯಶಸ್ವಿ SUV ಕಾರು. ಇದಕ್ಕೆ ಪ್ರತಿಸ್ಪರ್ಧಿಯಾಗಿ ಈಗಾಗಲೇ ಹಲವು ಕಾರುಗಳು ಮಾರುಕಟ್ಟೆಯಲ್ಲಿದೆ. ಇಷ್ಟೇ ಅಲ್ಲ ತೀವ್ರ ಪೈಪೋಟಿ ನೀಡುತ್ತಿದೆ. ಇದೀಗ ಮತ್ತೆ 4 SUV ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ.


ನವದೆಹಲಿ(ಆ.16):  SUV ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿ ಪ್ರತಿ ಆಟೋಮೇಕರ್ ಕಂಪನಿಗಳು ಹೊಸ ಹೊಸ SUV ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲೂ ಸಬ್ ಕಾಂಪಾಕ್ಟ್ SUV ಕಾರುಗಳಲ್ಲಿ ಭಾರಿ ಪೈಪೋಟಿ ಇದೆ. ಇದರಲ್ಲಿ ಮಾರುತಿ ಬ್ರೆಜಾ ಕಾರು ಹೆಚ್ಚು ಯಶಸ್ವಿಯಾಗಿದೆ. ಇದಕ್ಕೆ ಪೈಪೋಟಿಯಾಗಿ ಟಾಟಾ ನೆಕ್ಸಾನ್, ಮಹೀಂದ್ರ XUV300, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತ ಹಲವು ಕಾರುಗಳು ಮಾರುಕಟ್ಟೆಯಲ್ಲಿ ಇದೀಗ ಈ ಪೈಪೋಟಿ ಲಿಸ್ಟ್‌ಗೆ ಮತ್ತೆ 4 ಕಾರುಗಳು ಸೇರಿಕೊಳ್ಳುತ್ತಿದೆ.

ಭಾರತೀಯ ಗ್ರಾಹಕರಿಗೆ ಟೊಯೋಟಾ ಕೊಡುಗೆ; ಬಿಡುಗಡೆಯಾಗುತ್ತಿದೆ ಅರ್ಬನ್ ಕ್ರೂಸರ್ SUV

Latest Videos

undefined

ಕಿಯಾ ಸೊನೆಟ್


ಕಿಯಾ ಮೋಟಾರ್ಸ್ ಕಂಪನಿಯ ಕಿಯಾ ಸೊನೆಟ್ ಕಾರು ಆಗಸ್ಟ್ 7 ರಂದು ಅನಾವರಣಗೊಂಡಿದೆ. ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗಲಿದೆ. ಮಾರುತಿ ಬ್ರೆಜಾ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಿರುವ ಕಿಯಾ ಸೊನೆಟ್ ಕಾರಿನ ಬೆಲೆ 7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಟೊಯೋಟಾ ಅರ್ಬನ್ ಕ್ರೂಸರ್


ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಮಾರುತಿ ಬ್ರೆಜಾ ಕಾರನ್ನು ಟೊಯೋಟಾ ಅರ್ಬನ್ ಕ್ರೂಸರ್ ಕಾರಾಗಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಬಲೆನೋ ಕಾರನ್ನು ಗ್ಲಾಂಝಾ ಕಾರಾಗಿ ಟೊಯೋಟಾ ಬಿಡುಗೆ ಮಾಡಿದೆ. 

ನಿಸಾನ್ ಮ್ಯಾಗ್ನೈಟ್


ನಿಸಾನ್ ಇಂಡಿಯಾ  ಕೂಡ ಬ್ರೆಜಾ ಪ್ರತಿಸ್ಪರ್ಧಿಯಾಗಿ ಮ್ಯಾಗ್ನೈಟ್ ಕಾರು ಬಿಡುಗಡೆ ಮಾಡುತ್ತಿದೆ. .  ಹೆಚ್ಚು ಸ್ಟೈಲಿಶ್,  ಬಿ-ಎಸ್ ಯುವಿಗೆ ನಿಸಾನ್ ಮ್ಯಾಗ್ನೈಟ್ ಎಂಬ ಹೆಸರಿಡಲಾಗಿದೆ.  ಈ ವರ್ಷದ ಅಂತ್ಯದಲ್ಲಿ ಕಾರು ಬಿಡುಗಡೆ ಮಾಡಲಾಗುತ್ತಿದೆ. ಮ್ಯಾಗ್ನೆಟಿಕ್ ವಿನ್ಯಾಸ ಮತ್ತು ಗುಣಲಕ್ಷಣಗಳಿಂದ ಗ್ರಾಹಕರನ್ನು ಆಕರ್ಷಿಸಲಿದ್ದರೆ, ಭಾರತದಲ್ಲಿ ಹೊಸ ಯುಗವನ್ನು ಆರಂಭಿಸಲಿದೆ ಅನ್ನೋ ವಿಶ್ವಾಸದಲ್ಲಿದೆ. 

ರೆನಾಲ್ಟ್ HBC


ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ರೀತಿಯ ಕಡಿಮೆ ಬೆಲೆಯಲ್ಲಿ ರೆನಾಲ್ಟ್ HBC ಕಾರು ಬಿಡುಗಡೆಯಾಗುತ್ತಿದೆ. ಕ್ವಿಡ್ ರೀತಿಯಲ್ಲೇ ಭಾರತದಲ್ಲಿ HBC ಕಾರು ಹೊಸ ಸಂಚಲನ ಮೂಡಿಸಲಿದೆ. ಜೊತೆಗೆ ಬ್ರೆಜಾಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

click me!