ಮಾರುತಿ ಬಲೆನೋ, ಹ್ಯುಂಡೈ ಐ20 ಸೇರಿದಂತೆ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಬೆಲೆ, ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಡಿ.15): ಜಿನೆವಾ ಮೋಟಾರು ಶೋ 2018ರಲ್ಲಿ ಪರಿಚಯಿಸಲಾದ ಟಾಟಾ ಅಲ್ಟ್ರೋಜ್ ಕಾರು ಒಂದೇ ವರ್ಷದಲ್ಲಿ ಅನಾವರಣಗೊಂಡಿದೆ. ಹ್ಯಾಚ್ ಬ್ಯಾಕ್ ಕಾರಿನಲ್ಲಿ ಹಲವು ವಿಶೇಷತೆಗಳೊಂದಿಗೆ ನೂತನ ಅಲ್ಟ್ರೋಜ್ ಬಿಡುಗಡೆಗೆ ಸಜ್ಜಾಗಿದೆ. 2020ರ ಜನವರಿ 22 ರಂದು ಅಲ್ಟ್ರೋಝ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಅಲ್ಟ್ರೋಝ್ ಕಾರಿನ ಬುಕಿಂಗ್ ಆರಂಭಗೊಂಡಿದೆ.
ಇದನ್ನೂ ಓದಿ: ಕಾರು ಖರೀದಿಗೆ ಇದು ಸೂಕ್ತ ಕಾಲ, ಸಿಗಲಿದೆ ಭರ್ಜರಿ ಡಿಸ್ಕೌಂಟ್!
undefined
ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಲೇಸರ್ ಕಟ್ ಕ್ರೀಸಸ್, ಲೇಸರ್ ಕಟ್ ಅಲೋಯ್ ವ್ಹೀಲ್, ಸ್ಪೋರ್ಟಿ ಬಂಪರ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿವೆ. ಕಾರಿನ ಒಳಭಾಗದಲ್ಲಿ ಡ್ಯುಯೆಲ್ ಟೋನ್ ಇಂಟೀರಿಯರ್, ಆ್ಯಂಬಿಯೆಂಟ್ ಲೈಟಿಂಗ್, ಡ್ಯುಯೆಲ್ ಟೋನ್ ರೂಫ್ ಸೇರಿದಂತೆ ಹಲವು ಫೀಚರ್ಸ್, ಇತರ ಕಾರುಗಳಿಗಿಂತ ಭಿನ್ನವಾಗಿದೆ.
ಇದನ್ನೂ ಓದಿ: ಬಲೆನೊ, ಐ20 ಕಾರಿನ ಪ್ರತಿಸ್ಪರ್ಧಿ; ಟಾಟಾ ಅಲ್ಟ್ರೋಜ್ ಕಾರಿನ ವಿಡಿಯೋ ಬಹಿರಂಗ!
ಅಲ್ಟ್ರೋಝ್ ಕಾರು 3,990 mm ಉದ್ದ, 1,755 mm ಅಗಲ, 1,523 mm ಎತ್ತರ 2,501 mm ವ್ಹೀಲ್ ಬೇಸ್ ಹೊಂದಿದೆ. ಈ ಕಾರಿನಲ್ಲಿ ಹಿಂಬದಿ ಪ್ರಯಾಣಿಕರಿಗೂ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಕುಳಿತು ಪ್ರಯಾಣಿಸಬಹುದು. ಕಾರಣ 341 ಬೂಟ್ ಸ್ಪೇಸ್ ಹಾಗೂ 165 mm ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ.
ಅಲ್ಟ್ರೋಝ್ 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿವೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 86 PS ಪರವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.5 ಲೀಟರ್ ಡೀಸೆಲ್ ಎಂಜಿನ್ 90 PS ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
ಮಾರುತಿ ಬಲೆನೋ, ಹ್ಯುಂಡೈ ಐ20, ಹೊಂಡಾ ಜಾಝ್ ಸೇರಿದಂತೆ ಹ್ಯಾಚ್ ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಟಾಟಾ ಅಲ್ಟ್ರೋಝ್ ಕಾರಿಗೆ 5.5 ಲಕ್ಷ ರೂಪಾಯಿಂದ ಗರಿಷ್ಠ 8.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: