ಮಾರುತಿ ಬಲೆನೊ ಕಾರಿ ಇದೀಗ ಟೊಯೊಟಾ ಗ್ಲಾಂಝಾ ಕಾರಾಗಿ ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಟೀಸರ್ ಬಿಡುಗಡೆಯಾಗಿದೆ. ಟೊಯೊಟಾ ಗ್ಲಾಂಝಾ ಕಾರಾಗಿ ಬದಲಾಗಿರುವ ಬಲೆನೊ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದಹೆಲಿ(ಮೇ.17): ಮಾರುತಿ ಬಲೆನೊ ಕಾರು ಇದೀಗ ಟೊಯೊಟಾ ಗ್ಲಾಂಝಾ ಕಾರಾಗಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಬಲೆನೊ ಕಾರನ್ನು ಉತ್ಪಾದನೆ ಮಾಡುತ್ತಿರುವ ಟೊಯೊಟಾ, ಜುಲೈನಲ್ಲಿ ನೂತನ ಕಾರು ಬಿಡುಗಡೆ ಮಾಡಲಿದೆ. ಇದೀಗ ಟೊಯೊಟಾ ಗ್ಲಾಂಝಾ ಕಾರಿನ ಟೀಸರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕಳ್ಳರ ಮಾಸ್ಟರ್ ಪ್ಲಾನ್- ಶೋ ರೂಂನಿಂದ ಹ್ಯುಂಡೈ ಕ್ರೆಟಾ ಕಳ್ಳತನ!
ಟೀಸರ್‌ನಲ್ಲಿ ನೂತನ ಗ್ಲಾಂಝಾ ಕಾರನ್ನು ತೋರಿಸಲಾಗಿದೆ. ನೂತನ ಟೊಯೊಟಾ ಗ್ಲಾಂಝಾ ಕಾರು ಹಾಗೂ ಮಾರುತಿ ಬಲೆನೊ ಕಾರಿನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಮುಂಭಾಗದಲ್ಲಿ ಬಲೆನೊ ಕಾರಿನ ಗ್ರಿಲ್ ಬದಲು ಟೊಯೊಟಾ ಕಾರಿನ ಗ್ರಿಲ್ ಬಳಲಸಾಗಿದೆ. ಇನ್ನು ಕಂಪನಿ ಲೋಗೋ ಬದಲಾಗಿದೆ.
ಇದನ್ನೂ ಓದಿ: ಕಾರು ರಿಪೇರಿಗೆ ಡೀಲರ್ ಮೊತ್ತ 3 ಲಕ್ಷ- ಲೋಕಲ್ ಗ್ಯಾರೇಜ್‌ನಲ್ಲಿ 1000 ರೂ.ಗೆ ರೆಡಿ!
ಗ್ಲಾಂಝಾ ಕಾರು 1.2 ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 82 Bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. 2017ರಲ್ಲಿ ನಡೆಸಿದ ಒಪ್ಪಂದದ ಪ್ರಕಾರ ಮಾರುತಿ ಸಂಸ್ಥೆಯ ಕೆಲ ಕಾರುಗಳನ್ನು ಹಾಗೂ ಟೊಯೊಟಾ ಹಾಗೂ ಟೊಯೊಟಾ ಕಾರಗಳನ್ನು ಮಾರುತಿ ಸಂಸ್ಥೆ ಬಿಡುಗಡೆ ಮಾಡಲು ಸಹಿ ಹಾಕಿದೆ.