ಎಲೆಕ್ಟ್ರಿಕ್ ಕಾರಿನಿಂದ ಮಾರುದ್ದ ದೂರ ಡೀಲರ್ಸ್, ಅನುಭವ ಬಿಚ್ಚಿಟ್ಟ ಗ್ರಾಹಕ!

By Suvarna News  |  First Published Aug 24, 2020, 4:58 PM IST

ವಿಶ್ವವೇ ಎಲೆಕ್ಟ್ರಿಕ್ ಕಾರಿನತ್ತ ಚಿತ್ತ ಹರಿಸಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಬಹುತೇಕ ರಾಷ್ಟ್ರದ ಸರ್ಕಾರಗಳು ಎಲೆಕ್ಟ್ರಿಕ್ ಕಾರಿಗೆ ಹೆಚ್ಚಿನ  ಒತ್ತು ನೀಡುತ್ತಿದೆ. ಆದರೆ ಕೆಲ ಡೀಲರ್ಸ್‌ಗೆ ಎಲೆಕ್ಟ್ರಿಕ್ ಕಾರಿನಿಂದ ತಮಗೆ ಆದಾಯ ಕಡಿಮೆ, ಎಲೆಕ್ಟ್ರಿಕ್ ಕಾರಿನ ಕುರಿತು ಹೆಚ್ಚಿನ ಮಾಹಿತಿ ಪಡೆಯದೇ ಇರುವುದು ಎದ್ದುಕಾಣುತ್ತಿದೆ. ಹೀಗೆ ಕಾರು ಖರೀದಿಸಲು ಬಂದ ಗ್ರಾಹಕನಿಗೆ ಪ್ರಶ್ನೆಗಳ ಸುರಿಮಳೆ ಗೈದ ಡೀಲರ್ ಮಾಹಿತಿ ಇಲ್ಲಿದೆ.


ಬ್ರಿಸ್ಬೇನ್(ಆ.24):  ನಿರ್ವಹಣಾ ವೆಚ್ಚ ಕಡಿಮೆ, ಇಂಧನ ವೆಚ್ಚ ಉಳಿತಾಯ, ಮಾಲಿನ್ಯ ರಹಿತ ಸೇರಿದಂತೆ ಹಲವು ಕಾರಣಗಳಿಂದ ಎಲೆಕ್ಟ್ರಿಕ್ ಕಾರು ಅತ್ಯಂತ ಉಪಯುಕ್ತ. ಈ ಎಲ್ಲಾ ಲೆಕ್ಕಾಚಾರ ಮಾಡಿದ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಿವಾಸಿ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದಾರೆ. ಇದಕ್ಕಾಗಿ ಬ್ರಿಸ್ಬೇನ್ ಹೊರವಲದಲ್ಲಿರುವ ಡೀಲರ್ ಬಳಿ ತೆರಳಿ ಟೆಸ್ಟ್ ಡ್ರೈವ್‌ಗೆ ಮನವಿ ಮಾಡಿದ್ದಾನೆ. ಆದರೆ ಕಾರು ಖರೀದಿಗೆ ಮುಂದಾದ ಗ್ರಾಹಕನಿಗೆ ಡೀಲರ್ ಸಿಬ್ಬಂದಿಗಳ ಪ್ರಶ್ನೆಗೆ ಸುಸ್ತಾಗಿ ಹೋಗಿದ್ದಾನೆ.

ಬರುತ್ತಿದೆ ಕಿಯಾ ಸೋಲ್ ಎಲೆಕ್ಟ್ರಿಕ್ ಕಾರು: ಹ್ಯುಂಡೈ ಕೋನಾ, MG Zs ಕಾರಿಗೆ ಪೈಪೋಟಿ!..

Tap to resize

Latest Videos

undefined

ಹ್ಯುಂಡೈ ಐಯೊನಿಕ್ ಎಲೆಕ್ಟ್ರಿಕ್ ಕಾರು ಖರೀದಿಸಲು ಬ್ರಿಸ್ಬೇನ್ ಹೊರವಲಯದ ಡೀಲರ್ ಬಳಿ ತೆರಳಿದ ಗ್ರಾಹಕನನ್ನು ಆರಂಭದಲ್ಲೇ ಸಿಬ್ಬಂದಿಗಳು ಅಸಡ್ಡೆಯಿಂದ ನೋಡಿದ್ದಾರೆ. ಟೆಸ್ಟ್ ಡ್ರೈವ್‌ಗಾಗಿ ಕಾಯುತ್ತಿದ್ದ ವೇಳೆ ನೀವು ಎಲೆಕ್ಟ್ರಿಕ್ ಕಾರು ಯಾಕೆ ಖರೀದಿಸುತ್ತೀರಿ, ಇದರ ಬೆಲೆ ಹೆಚ್ಚು, ಚಾರ್ಜಿಂಗ್ ಕಷ್ಟ. ದುಬಾರಿ ಬೆಲೆ ಕಾರಿಗಿಂತ ಪೆಟ್ರೋಲ್ ಕಾರು ಖರೀದಿ ಸುಲಭ ಎಂದು ಸೂಚಿಸಿದ್ದಾರೆ.

ಮೊದಲ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರು ಅನಾವರಣ; ಕೇವಲ 30 ಕಾರು ಮಾತ್ರ ಲಭ್ಯ!...

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಹಕ ಎಲ್ಲಾ ಲೆಕ್ಕಾಚಾರ ಮಾಡಿದರೆ ಆರಂಭಿಕ ಹಂತದಲ್ಲಿ ಎಲೆಕ್ಟ್ರಿಕ್ ಕಾರು ದುಬಾರಿ ಎನಿಸಬಹುದು. ಆದರೆ ಬಳಿಕ ನಮಗೆ ನೆರವಾಗಲಿದೆ. ಇಂಧನ ಹಣ ಉಳಿತಾಯವಾಗಲಿದೆ. ನಿರ್ವಹಣೆ ವೆಚ್ಚ ಉಳಿತಾಯವಾಗಲಿದೆ ಎಂದಿದ್ದಾನೆ. ಮತ್ತೆ ಸಿಬ್ಬಂದಿಗಳು ಪೆಟ್ರೋಲ್ ಅಥವಾ ಡೀಸೆಲ್ ಕಾರು ಖರೀದಿಸಿ ಎಂದು ಒತ್ತಾಯಿಸಿದ್ದಾರೆ. ಈ ಘಟನೆಯನ್ನು ಬ್ರಿಸ್ಬೇನ್ ನಿವಾಸಿ ಹಂಚಿಕೊಂಡಿದ್ದಾರೆ.

ಹಲವು ಡೀಲರ್‌ಗೆ ಎಲೆಕ್ಟ್ರಿಕ್ ಕಾರಿನ ಕುರಿತು ಮಾಹಿತಿ ಇಲ್ಲ. ಇಷ್ಟೇ ಅಲ್ಲ ಪೆಟ್ರೋಲ್ ಹಾಗೂ ಡೀಸೆಲ್ ವಾಹನ ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಕಾರು ಸರ್ವೀಸ್ ಸೇರಿದಂತೆ ಇತರ ಮೂಲಗಳಿಂದಲೂ ಆದಾಯ ಹರಿದು ಬರಲಿದೆ ಅನ್ನೋದು ಅವರ ಲೆಕ್ಕಾಚಾರ. 

click me!