Vehicle Built from Scrap: ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್!

By Suvarna News  |  First Published Dec 22, 2021, 2:23 PM IST

*ಕಾರು ಬಿಡಿ ಭಾಗಗಳಿಂದ ಹೊಸ ವಾಹನ ನಿರ್ಮಾಣ
*ಟ್ವೀಟ್‌ ಮಾಡಿ ಶಹಬಾಸ್‌ ಎಂದ ಆನಂದ ಮಹೀಂದ್ರಾ
*ದತ್ತಾತ್ರಯ ಲೋಹಾರ್ ನಿರ್ಮಿಸಿದ  ಮಾಡೆಲ್‌ ಈಗ ವೈರಲ್‌


Auto Desk: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಸ್ಕ್ರ್ಯಾಪ್ ಮೆಟಲ್ (Scrap Metal) ಬಳಸಿ ನಿರ್ಮಿಸಿದ ನಾಲ್ಕು ಚಕ್ರದ ವಾಹನದಿಂದ (4 Wheeler) ಇಂಪ್ರೇಸ್‌ ಆಗಿದ್ದಾರೆ.  ಯೂಟ್ಯೂಬ್ ಚಾನೆಲ್ ಹಿಸ್ಟೋರಿಕಾನೊ ಈ ಬಗ್ಗೆ ವರದಿ ಮಾಡಿದ್ದು ದತ್ತಾತ್ರಯ ಲೋಹಾರ್ ( Dattatraya Lohar) ಅವರು ತಮ್ಮ ಮಗನ ಆಸೆಗಳನ್ನು ಪೂರೈಸಲು ವಾಹನವನ್ನು ನಿರ್ಮಿಸಿದರು ಎಂದು ಹೇಳಿದೆ.  ನಾಲ್ಕು ಚಕ್ರದ ವಾಹನವನ್ನು ಕೇವಲ ₹60,000 ಹೂಡಿಕೆಯಲ್ಲಿ ತಯಾರಿಸಲಾಗಿದೆ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಿಕ್-ಸ್ಟಾರ್ಟ್ (Kick Start) ಕಾರ್ಯವಿಧಾನವನ್ನು ಇದರಲ್ಲಿ ಬಳಸಲಾಗಿದೆ. 

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು 45-ಸೆಕೆಂಡ್‌ಗಳ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ಹಾಗೂ ಇದು ದತ್ತಾತ್ರಯ ಲೋಹರ್ ಅವರು ನಿರ್ಮಿಸಿದ ವಾಹನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ. ವಿಡಿಯೋದಲ್ಲಿ ವಾಹನವನ್ನು ಕಿಕ್‌ ಬಳಸಿ ಸ್ಟಾರ್ಟ್‌ ಮಾಡಿರುವುದನ್ನು ನೀವು ನೋಡಬಹುದು.

Tap to resize

Latest Videos

undefined

 

This clearly doesn’t meet with any of the regulations but I will never cease to admire the ingenuity and ‘more with less’ capabilities of our people. And their passion for mobility—not to mention the familiar front grille pic.twitter.com/oFkD3SvsDt

— anand mahindra (@anandmahindra)

 

"ಇದು ಸ್ಪಷ್ಟವಾಗಿ  ಯಾವುದೇ  ಮೋಟಾರ್‌ ವೆಹಿಕಲ್  ನಿಯಮಗಳನ್ನು ಪಾಲಿಸುವುದಿಲ್ಲ, ಆದರೆ ನಮ್ಮ ಜನರ ಜಾಣ್ಮೆ ಮತ್ತು 'More With Less' ಸಾಮರ್ಥ್ಯಗಳನ್ನು ಮೆಚ್ಚುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ" ಎಂದು ಮಹೀಂದ್ರಾ ಟ್ವೀಟ್‌ನಲ್ಲಿ ಬರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 15,000 ಕ್ಕೂ ಹೆಚ್ಚು 'ಲೈಕ್‌ಗಳು' ಮತ್ತು ಸಾಕಷ್ಟು ಕಾಮೆಂಟ್‌ಗಳ ಮೂಲಕ  ಮಹೀಂದ್ರಾ ಅವರ ಟ್ವೀಟ್‌ನೊಂದಿಗೆ ದತ್ತಾತ್ರಯ ಲೋಹಾರ್ ಮತ್ತು ಅವರ ಈ ಕಾರ್ಯಕ್ಕೆ ಪ್ರಶಂಸೆಗಳು ಹರಿದುಬಂದಿವೆ.

ಹಿಸ್ಟೋರಿಕಾನೊ   ಯೂಟ್ಯೂಬ್ ಚಾನೆಲ್ ಪ್ರಕಾರ,  ಲೋಹರ್ ಮಹಾರಾಷ್ಟ್ರದ ದೇವರಾಷ್ಟ್ರ ಗ್ರಾಮದ ಕಮ್ಮಾರರ ಕುಟುಂಬಕ್ಕೆ ಸೇರಿದವರು. ಅವರ ನಾಲ್ಕು ಚಕ್ರದ ವಾಹನವು ಲೆಫ್ಟ್ ಡ್ರೈವ್ ಆಗಿದ್ದು ಅದನ್ನು ಹಳೆಯ ಮತ್ತು ಕೈಬಿಟ್ಟ ಕಾರಿನ ಭಾಗಗಳನ್ನು ಬಳಸಿ ಮಾಡಲಾಗಿದೆ. ಹಿಸ್ಟೋರಿಕಾನೊ  ‌ಯೂಟ್ಯೂಬ್ ಚಾನೆಲ್ ಸಂಪೂರ್ಣ ವಿಡಿಯೋ ಇಲ್ಲಿ ನೋಡಬಹುದು.

ಆನಂದ್ ಮಹೀಂದ್ರಾ ಅವರು ಇನೋವೇಟಿವ್ ವಸ್ತುಗಳ (Innovative Things) ಅಭಿಮಾನಿ ಎಂದು ಹೆಸರುವಾಸಿಯಾಗಿದ್ದಾರೆ. ಮತ್ತು ಅವರ ಕಣ್ಣಿಗೆ ಬಿದ್ದ ಇಂಥಹ ಉದಾಹರಣೆಗಳನ್ನು ಅವರು ಹಂಚಿಕೊಂಡಿರುವುದು ಇದೇ ಮೊದಲಲ್ಲ. ಆನಂದ ಮಹೀಂದ್ರಾ ಪ್ರತಿ ಬಾರಿ ಇಂಥಹ ಹೊಸ ಅನ್ವೇಷಣೆಗಳ ಬಗ್ಗೆ ಟ್ವೀಟ್‌ ಮಾಡಿದಾಗಲೂ ನೆಟ್ಟಿಗರು ಅದನ್ನು ಇಷ್ಟಪಡುತ್ತಾರೆ. ಜತೆಗೆ ಅದು ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತದೆ.

ಈ ಹಿಂದೆ, ಅವರು ಭಾರೀ ಅಸುರಕ್ಷಿತವಾಗಿದ್ದರೂ ಸಹ ಕುತೂಹಲ ಕೆರಳಿಸಿದ ಟಿಪ್ಪರ್ ಟ್ರಕ್‌ನ ವೀಡಿಯೊವನ್ನು ಹಂಚಿಕೊಂಡಿದ್ದರು. "ಎಲ್ಲಾ ಸುರಕ್ಷತೆ ಮತ್ತು ಲೋಡಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸುತ್ತದೆ. ಟ್ರಕ್ ಅನ್ನು ಹಿಡಿದಿಟ್ಟುಕೊಳ್ಳುವವರಿಗೆ ಹೆಚ್ಚು ಅಸುರಕ್ಷಿತವಾಗಿದೆ. ಆದರೂ ನಮ್ಮ ಜನರು ಸಂಪನ್ಮೂಲಗಳಿಲ್ಲದೆ ಹೇಗೆ ಪರಿಶ್ರಮ ಮತ್ತು ನಿರ್ವಹಿಸುತ್ತಾರೆ ಎಂಬುದನ್ನು ನಾನು ಆಶ್ಚರ್ಯ ಪಡುತ್ತೇನೆ" ಎಂದು ಅವರು ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದರು.

click me!