ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಕಾರು 70 ದೇಶಗಳಿಗೆ ರಫ್ತು!

By Suvarna News  |  First Published Aug 21, 2020, 6:23 PM IST

ಮಾರುತಿ ಬ್ರೆಜಾ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಅನಾವರಣಗೊಂಡಿರುವ ಕಿಯಾ ಸೊನೆಟ್ ಕಾರು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣವಾಗಿದೆ. ಇದೀಗ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಕಾರು ಬರೋಬ್ಬರಿ 70 ದೇಶಗಳಿಗೆ ರಫ್ತಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.


ಅನಂತಪುರಂ(ಆ.21): ಕಿಯಾ ಮೋಟಾರ್ಸ್ ಭಾರತದಲ್ಲಿ ಅತ್ಯಲ್ಪ ಅವಧಿಯಲ್ಲಿ ಯಶಸ್ಸು ಸಾಧಿಸಿದೆ. ಕಿಯಾ ಸೆಲ್ಟೋಸ್ ಬಿಡುಗಡೆ ಮಾಡಿ ಭರ್ಜರಿ ಯಶಸ್ಸುಗಳಿಸಿದ ಕಿಯಾ ಮೋಟಾರ್ಸ್, ಇದರ ಬೆನ್ನಲ್ಲೇ ಕಿಯಾ ಕಾರ್ನಿವಲ್ ಕಾರು ಬಿಡುಗಡೆ  ಮಾಡಿದೆ. ಇದೀಗ ಕಿಯಾ ಸೊನೆಟ್ ಸಬ್ ಕಾಂಪಾಕ್ಟ್ SUV ಕಾರು ಅನಾವರಣ ಮಾಡಿದೆ. ಆಂಧ್ರಪ್ರದೇಶದ ಅನಂತಪುರಂನಲ್ಲಿರುವ ಕಿಯಾ ಮೋಟಾರ್ಸ್ ಘಟಕದಲ್ಲಿ ಸೊನೆಟ್ ಕಾರು ನಿರ್ಮಾಣವಾಗಿದೆ. 

Tap to resize

Latest Videos

undefined

ಆ.7 ರಿಂದ ಕಿಯಾ ಸೊನೆಟ್ ಕಾರಿನ ಬುಕಿಂಗ್ ಆರಂಭ!

ಅನಂತಪುರಂನಲ್ಲಿರುವ ಕಿಯಾ ಮೋಟಾರ್ಸ್ ಘಟಕದಲ್ಲಿ ಕಿಯಾ ತನ್ನ ಕಾರುಗಳ ಉತ್ಪಾದನೆ ಮಾಡುತ್ತಿದೆ. ವಿಶೇಷ ಅಂದರೆ ಸೊನೆಟ್ ಕಾರು ಭಾರತದಿಂದಲೇ ವಿಶ್ವಕ್ಕೆ ಅನಾವರಣ ಮಾಡಲಾಗಿದೆ. ಇದೀಗ ಮೇಡ್ ಇನ್ ಇಂಡಿಯಾ ಕಿಯಾ ಸೊನೆಟ್ ಬರೋಬ್ಬರಿ 70 ರಾಷ್ಟ್ರಗಳಿಗೆ ರಫ್ತಾಗಲಿದೆ. ಇದರಲ್ಲಿ ಮಿಡ್ಲ್ ಈಸ್ಟ್, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಹಾಗೂ ಏಷ್ಯಾ ರಾಷ್ಟ್ರಗಳಿಗೂ ರಫ್ತಾಗಲಿದೆ.

ಮಾರುತಿ ಬ್ರೆಜಾ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಬಿಡುಗಡೆ ದಿನಾಂಕ ಬಹಿರಂಗ!..

ಕಿಯಾ ಸೆಲ್ಟೋಸ್ ಕಾರಿನ ಕ್ವಾಲಿಟಿಯನ್ನೇ ಸೊನೆಟ್ ಕಾರು ಹೊಂದಿದೆ. ಸೊನೆಟ್ ಕಾರಿನಲ್ಲೂ 2 ವೇರಿಯೆಂಟ್ ಲಭ್ಯವಿದೆ. GT ಲೈನ್ ಹಾಗೂ ಟೆಕ್ ಲೈನ್ ಆಯ್ಕೆಗಳು ಲಭ್ಯವಿದೆ. ಆಗಸ್ಟ್ 7 ರಂದು ಸೊನೆಟ್ ಕಾರು ಅನಾವರಣ ಮಾಡಲಾಗಿದೆ. ಕಿಯಾ ಕಾರಿಗೆ ಭಾರತ ಸೇರಿದಂತೆ ವಿಶ್ವದಲ್ಲೇ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕಿಯಾ ಕೂಡ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರು ಬಿಡುಗಡೆ ಮಾಡುತ್ತಿದೆ.

click me!