ಯಮಹಾ MT-15 ಬೈಕ್ ಬಿಡುಗಡೆ- ಡ್ಯೂಕ್, ಅಪಾಚೆಗೆ ಪೈಪೋಟಿ!

By Web Desk  |  First Published Mar 15, 2019, 7:36 PM IST

ಯಮಹಾ  MT-15 ಬೈಕ್ ಬಿಡುಗಡೆಯಾಗಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿರುವ ಯಮಹಾ MT-15 ಬೈಕ್ ಬೆಲೆ ಎಷ್ಟು? ಇದರ ವಿಶೇಷತೆ ಏನು? ಮಾಹಿತಿ ಇಲ್ಲಿದೆ.


ನವದೆಹಲಿ(ಮಾ.15): ಯಮಹಾ ಮೋಟಾರ್ ಸಂಸ್ಥೆಯ ಬಹುನಿರೀಕ್ಷಿತ ಯಮಹಾ MT-15 ಬೈಕ್ ಬಿಡುಗಡೆಯಾಗಿದೆ. ಸ್ಪೋರ್ಟ್ ಲುಕ್, ಅಗ್ರೆಸ್ಸೀವ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿರುವ ಯಮಹಾ MT-15 ಬೈಕ್ ,   KTM,TVS ಅಪಾಚೆ ಹಾಗೂ ಬಜಾಜ್ ಪಲ್ಸಾರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.

ಇದನ್ನೂ ಓದಿ: ಬಜಾಜ್ ಪಲ್ಸಾರ್ 180F ಬಿಡುಗಡೆ - ಪೈಪೋಟಿ ಶುರು!

Tap to resize

Latest Videos

undefined

ನೂತನ ಯಮಹಾ MT-15 ಬೈಕ್ ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, SOHC, 4-ವೇಲ್ವ್, 155 cc, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು,  19.3 PS ಪವರ್ (@ 10,000 rpm) ಹಾಗೂ 14.7 Nm ಟಾರ್ಕ್(@  8,500 rpm)ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಸ್ಲಿಪ್ಪರ್ ಕ್ಲಚ್ ಹೊಂದಿದೆ.

 

Unveiling the much-awaited dark hyper motard Yamaha powered with 155cc liquid-cooled engine along with ABS. Available in dynamic colours Dark Matt Blue & Metallic Black.https://t.co/dS6U71JIzX pic.twitter.com/hvTd14XX6I

— Yamaha Motor India (@India_Yamaha)

 

ಇದನ್ನೂ ಓದಿ: ಅವಾನ್‌ ಇಲೆಕ್ಟ್ರಿಕ್‌ ಸ್ಕೂಟರಿಗೆ ಹೊಗೆಯಿಲ್ಲ, ಖರ್ಚಿಲ್ಲ!

ಯಮಹಾ MT-15 ಬೈಕ್ ಬೆಲೆ  1.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಡಿಜಿಟಲ್ ಡಿಸ್‌ಪ್ಲೇ, ABS(ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ನೂತನ ಬೈಕ್ 5000 ರೂಪಾಯಿ ನೀಡಿ ಬುಕ್ ಮಾಡಬಹುದು.
 

click me!