ಕೈನೆಟಿಕ್‌ನಿಂದ 7 ನೂತನ ಸೂಪರ್ ಬೈಕ್ ಬಿಡುಗಡೆ!

Published : Oct 14, 2018, 04:37 PM IST
ಕೈನೆಟಿಕ್‌ನಿಂದ 7 ನೂತನ ಸೂಪರ್ ಬೈಕ್ ಬಿಡುಗಡೆ!

ಸಾರಾಂಶ

ಕೈನೆಟಿಕ್ ಸಂಸ್ಛೆ ಇದೀಗ ಭಾರತದಲ್ಲಿ ನೂತನ 7 ಬೈಕ್‌ಗಳನ್ನ ಬಿಡುದಗಡೆ ಮಾಡಿದೆ. ಸೂಪರ್‌ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ಕೈನೆಟಿಕ್ ಬಿಡುಗಡೆ ಮಾಡಿರುವ ಹೊಸ ಬೈಕ್‌ಗಳ ವಿಶೇಷತೆ ಇಲ್ಲಿದೆ.

ಮುಂಬೈ(ಅ.14): ಮೊಟೊರಾಯಲ್ ಕೈನೆಟಿಕ್ ಕಂಪನಿ ಹಾಗು ಪ್ರತಿಷ್ಠಿತ ನಾರ್ಟನ್, ಹ್ಯೊಸಂಗ್, MV ಆಗಸ್ಟ, FB ಮೊಂಡಿಯಲ್ ಹಾಗೂ SWM ಸೇರಿದಂತೆ ಒಟ್ಟು 5 ಕಂಪೆನಿಗಳ ಜೊತೆಗೂಡಿ ನೂತನ 7 ಸೂಪರ್ ಬೈಕ್ ಬಿಡುಗಡೆ ಮಾಡಿದೆ. 

MV ಆಗಸ್ಟ್ ಬ್ರೂಟೇಲ್ 800 RR, ನಾರ್ಟನ್ ಕಮಾಂಡೋ ಹಾಗೂ ಡೋಮಿನೇಟರ್, SWM ಸೂಪರ್‌ಡ್ಯುಯೆಲ್, FB ಮೊಂಡಿಯಲ್ HPS 300, ಹ್ಯೊಸಂಗ್ ಎಕ್ವೈಲಾ 650 ಪ್ರೊ ಹಾಗೂ ಜಿಟಿ 250R ಬೈಕ್‌ಗಳು ಬಿಡುಗಡೆಯಾಗಿದೆ. ಈ ಎಲ್ಲಾ ಬೈಕ್‌ಗಳನ್ನ ಮಹಾರಾಷ್ಟ್ರದ ಅಹಮ್ಮದ್‌ನಗರ್‌ದಲ್ಲಿರೋ ಕೈನೆಟಿಕ್ ಜೋಡಣಾ ಘಟಕದಲ್ಲಿ ತಯಾರಿಸಲಾಗಿದೆ.

ಭಾರತದಲ್ಲಿ ಪ್ರಮುಖ ನಗರಗಳ 6 ಡೀಲರ್‌ಶಿಪ್‌ಗಳಲ್ಲಿ ಈ ಸೂಪರ್‌ ಬೈಕ್‌ಗಳು ಲಭ್ಯವಿದೆ. ಮುಂದಿನ 4 ವರ್ಷಗಳಲ್ಲಿ 13,000 ಸೂಪರ್ ಬೈಕ್ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿದೆ. 

ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಲ್ಲಿ ಕೈನಿಕೆಟ್ ಆದಾಯ 1,000 ಕೋಟಿ ರೂಪಾಯಿ. ಇದೀಗ ನೂತನ ಬೈಕ್ ಬಿಡುಗಡೆಯಿಂದ ಮೊಟರಾಯಲ್ ಕೈನಿಟಿಕ್ 75 ಕೋಟಿಯಿಂದ 100 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆಯಲ್ಲಿದೆ.

PREV
click me!

Recommended Stories

ಸಾಹಸಿ ಬೈಕ್ ಪ್ರಿಯರಿಗೆ ರಾಯಲ್ ಎನ್‌ಫೀಲ್ಡ್ ಗುಡ್‌ನ್ಯೂಸ್; Himalayan 750 ಅನಾವರಣ, ಹೆಂಗಿದೆ?
ನವೆಂಬರ್ ಆರಂಭದಲ್ಲೇ BS6 ಅಲ್ಲದ 1539 ಕಾರಿಗೆ ಸಿಟಿ ಪ್ರವೇಶ ಬ್ಯಾನ್, ಒಂದೇ ದಿನ 68 ಲಕ್ಷ ರೂ ದಂಡ