ಟೊಯೊಟಾ ಇನೋವಾ ಕಾರನ್ನ ಹಿಂದಿಕ್ಕಿಲು ಇದೀಗ ಕಿಯಾ ಮೋಟಾರ್ಸ್ ನೂತನ ಕಾರನ್ನ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಇನೋವಾ ಆರ್ಭಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಹಾಗಾದರೆ ಕಿಯಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ನೂತನ ಕಾರು ಯಾವುದು? ಇದರ ವಿಶೇಷತೆ ಏನು? ಇಲ್ಲಿದೆ.
ಸೌತ್‌ಕೊರಿಯಾ(ನ.05): ಭಾರತದಲ್ಲಿ ಟೊಯೊಟಾ ಇನೋವಾ ಕಾರು ಮಾಡಿದ ಮೋಡಿ ಅಷ್ಟಿಷ್ಟಲ್ಲ. MPV ಸೆಗ್ಮೆಂಟ್‌ನಲ್ಲಿ ಇನೋವಾ ಕಾರನ್ನ ಹಿಂದಿಕ್ಕಲು ಇತರ ಕಾರುಗಳಿಗೆ ಸಾಧ್ಯವಾಗಿಲ್ಲ. ಆದರೆ ಇದೀಗ ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಸೌತ್‌ಕೊರಿಯಾದ ಕಿಯಾ ಮೋಟಾರ್ಸ್ ಕಾರು ಬಿಡುಗಡೆ ಮಾಡುತ್ತಿದೆ.
2019ರ ಆರಂಭದಲ್ಲಿ ಕಿಯಾ ಮೋಟಾರ್ಸ್ ಭಾರತದಲ್ಲಿ ನೂತನ ಕಿಯಾ ಕಾರ್ನಿವಲ್ ಕಾರು ಬಿಡುಗಡೆಗೆ ಮುಂದಾಗಿದೆ. 2018ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಈ ಕಿಯಾ ಕಾರ್ನಿವಲ್, ಮುಂದಿನ ವರ್ಷ ಭಾರತದ ರಸ್ತೆಗೆ ಬರಲಿದೆ.
5.11 ಮೀಟರ್ ಉದ್ದ, 1.75 ಮೀಟರ್ ಎತ್ತರ ಹೊಂದಿರುವ ನೂತನ ಕಿಯಾ ಕಾರ್ನಿವಲ್, 7 ಸೀಟರ್, 8 ಸೀಟರ್, 9 ಸೀಟರ್ ಹಾಗೂ 11 ಸೀಟರ್ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಕಿಯಾ ಕಾರ್ನಿವಲ್ ಡೀಸೆಲ್ ಎಂಜಿನ್ ಭಾರತದಲ್ಲಿ ಬಿಡುಗಡೆಯಾಗಲಿದೆ.
2.2 ಲೀಟರ್ ಟರ್ಬೋ ಡೀಸೆಲ್ ಎಂಜಿನ್, 199bhp ಹಾಗೂ 441nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸಿಮಿಶನ್ ಹೊಂದಿದೆ. ಇನೋವಾ ಡಿಸೆಲ್ ಕಾರಿಗೆ 19.68 ಲಕ್ಷ ರೂಪಾಯಿ. ಕಿಯಾ ಕಾರ್ನಿವಲ್ ಇದಕ್ಕಿಂತ 2 ರಿಂದ 3 ಲಕ್ಷ ರೂಪಾಯಿ ಹೆಚ್ಚಾಗಲಿದೆ.