ಮೋದಿ ಸರ್ಕಾರ ಸತತ 2ನೇ ಬಾರಿಗೆ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದೆ. ಆರ್ಥಿಕ ಕುಸಿತ, ಆಟೋಮೊಬೈಲ್ ಕ್ಷೇತ್ರದ ಹಿನ್ನಡೆ ಸೇರಿದಂತೆ ಹಲವು ಸವಾಲುಗಳು ಕೇಂದ್ರ ಸರ್ಕಾರದ ಮುಂದಿದೆ. ಈ ಬಾರಿಯ ಬಜೆಟ್ ಮೇಲೆ ಭಾರತೀಯ ವಾಹನ ಉತ್ವಾದಕ ಕಂಪನಿಗಳು ಹಲವು ನಿರೀಕ್ಷೆ ಇಟ್ಟುಕೊಂಡಿದೆ. ಇದರಲ್ಲಿ 3 ಪ್ರಮುಖ ಬೇಡಿಕೆ ಹಾಗೂ ನಿರೀಕ್ಷೆಗಳ ಪಟ್ಟಿ ಇಲ್ಲಿ ವಿವರಿಸಲಾಗಿದೆ.
ನವದೆಹಲಿ(ಜ.27): ಕೇಂದ್ರದ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿರುವುದು ಸಹಜ. ಕಳೆದ ಬಾರಿ ಆಟೋಮೊಬೈಲ್ ಕ್ಷೇತ್ರ ಇದೇ ರೀತಿ ಹಲವು ಬೇಡಿಕೆಗಳನ್ನು ಮುಂದಿಟ್ಟಿತ್ತು. ಆದರೆ ಕೇಂದ್ರ ಪ್ಲಾನ್ ಬಿ ಜಾರಿಗೊಳಿಸಿತ್ತು. ಕಳೆದ ವರ್ಷ ಅನುಭವಿಸಿದ ನಷ್ಟದ ಪರಿಣಾಮ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಪ್ರಮುಖವಾಗಿ 3 ನಿರೀಕ್ಷೆ ಇಟ್ಟುಕೊಂಡಿದೆ. ಬೇಡಿಕೆಗೆ ಸ್ಪಂದಿಸುವ ಭರವಸೆ ಇಟ್ಟುಕೊಂಡಿದೆ.
ಇದನ್ನೂ ಓದಿ: ವಾಹನ ಸೇಲ್ 2 ದಶಕಗಳಲ್ಲೇ ಅತ್ಯಂತ ಕನಿಷ್ಠ!
undefined
1 ವಾಹನ ಮೇಲೆ GST(ತೆರಿಗೆ) ಕಡಿತ
ಕಳದ ಬಾರಿಯ ಬಜೆಟ್‌ನಲ್ಲಿ ವಾಹನ ಮೇಲಿನ GST ಕಡಿತ ನಿರೀಕ್ಷಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಕಾರಿಗೆ ಹೆಚ್ಚು ಒತ್ತು ನೀಡಿತು. ಬದಲಾದ ನೀತಿ, GST ಸೇರಿದಂತೆ ಹಲವು ಕಾರಣಗಳಿಂದ ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರ ಭಾರಿ ಹಿನ್ನಡೆ ಅನುಭವಿಸಿತು. ಮಾರಾಟದಲ್ಲಿ ದಾಖಲೆ ಕುಸಿತ ಕಂಡಿತು. ಹಲವು ವಾಹನ ಉತ್ಪಾದನಾ ಘಟಕಗಳು ಸ್ಛಗಿತಗೊಂಡಿತು. ಹಲವರು ಉದ್ಯೋಗ ಕಳೆದುಕೊಂಡರು. ಹೀಗಾಗಿ ವಾಹನ ಮೇಲಿನ 28% GSTಯನ್ನು 18% ಇಳಿಸಲು ಆಟೋ ದಿಗ್ಗಜರು ಒತ್ತಾಯಿಸಿದ್ದಾರೆ.
ಈ ಬಾರಿಯ ಬಜಟ್‌ನಲ್ಲಿ ಇದಕ್ಕೆ ಸ್ಪಂದನೆ ಸಿಗುವ ಸಾಧ್ಯತೆ ಇದೆ. ಕಳೆದ ವರ್ಷಾಂತ್ಯದಲ್ಲಿ ಮಾರಾಟ ಕುಸಿತ ಹಾಗೂ ಉದ್ಯೋಗ ಕಡಿತ ಹೆಚ್ಚಾದಾಗ GST ಕಡಿತ ಮಾಡಲು ಬೇಡಿಕೆ ಇಡಲಾಗಿತ್ತು. ಆದರೆ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಇದೀಗ ಈ ಬಜೆಟ್‌ನಲ್ಲಿ ಆಟೋಮೊಬೈಲ್ ಇಂಡಸ್ಟ್ರಿ ಮತ್ತೆ GST ಕಡಿತದ ನಿರೀಕ್ಷೆ ಇಡಲಾಗಿದೆ.
ಇದನ್ನೂ ಓದಿ: 2019ರಲ್ಲಿ ಆಟೋಮೊಬೈಲ್ ಕ್ಷೇತ್ರವನ್ನು ತಲ್ಲಣಗೊಳಿಸಿದೆ 10 ಘಟನೆ!
2 ಎಲೆಕ್ಟ್ರಿಕ್ ವಾಹನಕ್ಕೆ ಸಬ್ಸಡಿ-ಪ್ರೋತ್ಸಾಹ
ಈಗಾಗಲೇ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ FAME II ಯೋಜನೆಯಡಿ ಸಬ್ಸಡಿ ಹಾಗೂ ಹಲವು ಸೌಲಭ್ಯ ಘೋಷಿಸಿದೆ. ಆದರೂ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿದೆ. ಮಾರಾಟಗಾರರು ಹಾಗೂ ಖರೀದಿದಾರರಿಗೆ ಸಹಕಾರಿಯಾಗುವ ಯೋಜನೆ ಹಾಗೂ ಬಂಡವಾಳ ಈ ಬಾರಿಯ ಬಜೆಟ್‌ನಲ್ಲಿ ತೆಗೆದಿಡುವ ನಿರೀಕ್ಷೆ ಇದೆ.
ಇದನ್ನೂ ಓದಿ:ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!
3 ಮೂಲಸೌಕರ್ಯ ಅಭಿವೃದ್ಧಿ
ಆಟೋಮೊಬೈಲ್ ಇಂಡಸ್ಟ್ರಿ ಪ್ರತಿ ಬಜೆಟ್‌ನಲ್ಲೂ ಮೂಲ ಸೌಕರ್ಯ ಅಭಿವೃದ್ದಿಗೆ ಬೇಡಿಕೆ ಇಟ್ಟಿದೆ. ಉತ್ತಮ ರಸ್ತೆ, ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ, ವಾಹನ ಸವಾರರಿಗೆ ಸುಲಭವಾಗಿ ಸಿಗುವ ಇಂಧನ ಹಾಗೂ ಚಾರ್ಜಿಂಗ್ ಸ್ಟೇಶನ್ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಅಭಿವೃದ್ದಿಗೆ ಈ ಬಾರಿ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡುವ ನಿರೀಕ್ಷೆ ಆಟೋ ಇಂಡಸ್ಟ್ರಿಗಿದೆ.