ಶೀಘ್ರದಲ್ಲಿ ಹೊಸ ಹ್ಯುಂಡೈ ಗ್ರ್ಯಾಂಡ್ i10 NIOS ಕಾರ್ಪೊರೇಟ್ ಎಡಿಶನ್ ಲಾಂಚ್!

By Suvarna News  |  First Published Sep 11, 2020, 6:18 PM IST

ಹೆಚ್ಚುವರಿ ಫೀಚರ್ಸ್, ವಿನ್ಯಾಸದಲ್ಲಿ ಕೆಲ ಬದಲಾವಣೆಯೊಂದಿಗೆ ಹೊಚ್ಚ ಹೊಸ ಹ್ಯುಂಡೈ ಗ್ಯಾಂಡ್ i10 NIOS ಕಾರ್ಪೋರೇಟ್ ಎಡಿಶನ್ ಬಿಡುಗಡೆಯಾಗುತ್ತಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಸೆ.11): ನ್ಯೂ ಜನರೇಶನ್ ಹ್ಯುಂಡೈ ಗ್ರ್ಯಾಂಡ್ i10 ಕಾರಾದ, ಗ್ರ್ಯಾಂಡ್ i10 NIOS ಕಾರು ಕಳೆದ ವರ್ಷ ಬಿಡುಗಡೆಯಾಗಿದೆ.ಎರಾ, ಮ್ಯಾಗ್ನಾ, ಸ್ಪೋರ್ಟ್ಸ್ ಹಾಗೂ ಆಸ್ತಾ ನಾಲ್ಕು ವೇರಿಯೆಂಟ್‌ಗಳಲ್ಲಿ ಈ ಕಾರು ಲಭ್ಯವಿದೆ. ಇದೀಗ ಮ್ಯಾಗ್ನ ಟ್ರಿಮ್ ವೇರಿಯೆಂಟ್ ಕೆಲ ಬದಲಾವಣೆಯೊಂದಿಗೆ ಬಿಡುಗಡೆಯಾಗುತ್ತಿದೆ. ಹ್ಯುಂಡೈ ಗ್ರ್ಯಾಂಡ್ i10 NIOS ಕಾರ್ಪೋರೇಟ್ ಎಡಿಶನ್ ಈ ಕಾರು ಹೆಚ್ಚುವರಿ ಫೀಚರ್ಸ್ ಹೊಂದಿದೆ.

ಕಾರ್ಪೊರೇಟ್ ಎಡಿಶನ್ ಕಾರು ಇದಾಗಿದ್ದು, 2DIN ಆಡಿಯೋ ಸಿಸ್ಟಮ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಲ್ಲ ORVMs, ಕ್ಯಾಬಿನ್ ಏರ್ ಪ್ಯೂರಿಫೈಯರ್ ಹಾಗೂ ಆ್ಯಂಟಿ ಬ್ಯಾಕ್ಟಿರಿಯಾ ಸೀಟ್ ನೀಡಲಾಗಿದೆ. 

Latest Videos

undefined

ಬಾಡಿ ಕಲರ್ ORVM ಜೊತೆಗೆ ಟರ್ನ್ ಇಂಡಿಕೇಟರ್, 14 ಇಂಚಿನ ಸ್ಟೀಲ್ ವೀಲ್ಹ್, ಡ್ಯುಯೆಲ್ ಟೋನ್ ಪೈಂಟ್ಸ್ ಸೇರಿದಂತೆ ಕೆಲ ವಿಶೇಷತೆಗಳು ಈ ಕಾರಿನಲ್ಲಿವೆ. ಕಾರ್ಪೋರೇಟ್ ಎಡಿಶನ್ ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 83PS ಪವರ್ ಹಾಗೂ 114 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

1.2 ಲೀಟರ್ ಟರ್ಬೋ ಚಾರ್ಜಜ್ಡ್ ಡೀಸೆಲ್ ಎಂಜಿನ್ 75PS ಪವರ್ ಹಾಗೂ 190NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. ಕಾರ್ಪೋರೇಟ್ ಎಡಿಶನ್ ಕಾರಿನಲ್ಲಿ 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ನೀಡುವ ಸಾಧ್ಯತೆ ಹೆಚ್ಚಿದೆ.

ಕಾರ್ಪೋರೇಟ್ ಎಡಿಶನ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಆದರೆ ಇದೇ ವೇರಿಯೆಂಟ್ ಮ್ಯಾಗ್ನ ಪೆಟ್ರೋಲ್ ಕಾರಿನ ಬೆಲೆ 5.91 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಪೆಟ್ರೋಲ್ ಆಟೋಮ್ಯಾಟಿಕ್ 6.44 ಲಕ್ಷ ರೂಪಾಯಿ((ಎಕ್ಸ್ ಶೋ ರೂಂ) ಹಾಗೂ ಡೀಸೆಲ್ ಮಾನ್ಯುಯೆಲ್ ಕಾರಿನ ಬೆಲೆ 7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
 

click me!