BS6 ಹೀರೋ ಮ್ಯಾಸ್ಟ್ರೋ ಎಡ್ಜ್ 110 ಸ್ಕೂಟರ್ ಬಿಡುಗಡೆ

By Suvarna NewsFirst Published Sep 10, 2020, 10:19 PM IST
Highlights

ಹೀರೋ ಮೋಟಾರ್ ಕಾರ್ಪ್ ಹೊಚ್ಚ ಹೊಸ BS6 ಮ್ಯಾಸ್ಟ್ರೋ ಎಡ್ಜ್ 110 ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಸೆ.10) ಹೀರೋ ಮೋಟಾರ್ ಕಾರ್ಪ್ BS6 ಮ್ಯಾಸ್ಟ್ರೋ ಎಡ್ಜ್ 110 ಸ್ಕೂಟರ್ ಲಾಂಚ್ ಮಾಡಿದೆ. ಡ್ರಮ್ ಬ್ರೇಕ್ VX ವೇರಿಯೆಂಟ್ ಹಾಗೂ ಅಲೋಯ್ ವೀಲ್ಹ್ ವೇರಿಯೆಂಟ್ ಸ್ಕೂಟರ್ ಲಾಂಚ್ ಮಾಡಲಾಗಿದೆ.  VX ವೇರಿಯೆಂಟ್ ಬೆಲೆ 60,950 ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಅಲೋಯ್ ವೀಲ್ ವೇರಿಯೆಂಟ್ ಬೆಲೆ 62,450 ರೂಪಾಯಿ(ಎಕ್ಸ್ ಶೋ ರೂಂ).

ಕೊರೋನಾ ನಡುವೆ ಹೀರೋ ಮೋಟೋಕಾರ್ಪ್ ಕೈಹಿಡಿದ ಗ್ರಾಹಕ!

110 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ. 8 bhp ಪವರ್ ಹಾಗೂ 8.75 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಫ್ಯುಯೆಲ್ ಇಂಜೆಕ್ಷನ್‌ಗಾಗಿ ಹೀರೋ ಮೋಟಾರ್ ಕಾರ್ಪ್ XSens ಟೆಕ್ನಾಲಜಿ ಬಳಸಿದೆ.

2,999 ರೂ EMI ಸೇರಿದಂತೆ ಆಕರ್ಷಕ ಕೂಡುಗೆ; ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಇನ್ನೂ ಸುಲಭ!.

ನೂತ ಸ್ಕೂಟರ್‌ನಲ್ಲಿ ಹಲವು ಫೀಚರ್ಸ್ ಸೇರಿಸಲಾಗಿದೆ. ಸ್ಟಾಂಡ್ ಇಂಡಿಕೇಟರ್, USB ಪೋರ್ಟ್, ಡಿಜಿಟಲ್ ಪಾರ್ಟ್ ಅನಾಲಾಗ್ ಕನ್ಸೋಲ್, ಹಾಲೊಜಿನ್ ಹೆಡ್‌ಲ್ಯಾಂಪ್ಸ್ , ಇಂಟರ್‌ಗ್ರೇಟೆಡ್ ಬ್ಯಾಂಕಿಂಗ್ ಸಿಸ್ಟಮ್ ಹಾಗೂ ಸರ್ವೀಸ್ ರಿಮೈಂಡರ್ ಆಯ್ಕೆ ಕೂಡ ಲಭ್ಯವಿದೆ.

ಟೆಲಿಸ್ಕೋಪಿಕ್ ಸಸ್ಪೆನ್ಶನ್, ಮುಂಭಾಗದಲ್ಲಿ 12 ಇಂಚಿನ ವೀಲ್  ಹಾಗೂ ಹಿಂಭಾಗದಲ್ಲಿ 10 ಇಂಚಿನ್ ವೀಲ್ ಬಳಸಲಾಗಿದೆ. ಡ್ರಮ್ ಬ್ರೇಕ್ ಆಯ್ಕೆ ನೀಡಲಾಗಿದೆ. ಕರ್ಬ್ ತೂಕ 112 ಕೆಜಿ, 5 ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ನೀಡಲಾಗಿದೆ. ಇನ್ನೂ 6 ಬಣ್ಣಗಳಲ್ಲಿ ನೂತನ ಹೀರೋ ಮ್ಯಾಸ್ಟ್ರೋ ಎಡ್ಜ್ 110 ಸಿಸಿ ಬೈಕ್ ಲಭ್ಯವಿದೆ.

click me!