ಟಾಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಕಡಿಮೆ ಬೆಲೆಯ ಹ್ಯುಂಡೈ ಎಲೆಕ್ಟ್ರಿಕ್ ಕಾರು!

By Suvarna NewsFirst Published Apr 2, 2020, 8:55 PM IST
Highlights

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಕೈಗೆಕುಟುವ ದರದಲ್ಲಿಲ್ಲ. ಹೀಗಿರುವಾಗ ಟಾಟಾ ಕಂಪನಿ ಕಡಿಮೆ ಬೆಲೆಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿತು. ಇದೀಗ ನೆಕ್ಸಾನ್‌ಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಇಂಡಿಯಾ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. 
 


ನವದೆಹಲಿ(ಏ.02): ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಿದ ಕೀರ್ತಿ ಹ್ಯುಂಡೈಗಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಸಂಚಲನ ಮೂಡಿಸಿತ್ತು. ಆದರೆ 25 ಲಕ್ಷ ರೂಪಾಯಿ ಬೆಲೆಯ ಈ ಕಾರು ದುಬಾರಿ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿತು. ಇದಾದ ಬಳಿಕ ಎಂಜಿ ಮೋಟಾರ್ಸ್ ZS ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಿತು. ದುಬಾರಿ ಕಾರುಗಳ ನಡುವೆ ಟಾಟಾ ನೆಕ್ಸಾನ್ 13 ಲಕ್ಷ ರೂಪಾಯಿಗೆ ಮಾರುಕಟ್ಟೆ ಪ್ರವೇಶಿಸಿತು.

300 ರೂಪಾಯಿಗೆ 312 ಕಿ.ಮೀ ಮೈಲೇಜ್,ಇದು ಟಾಟಾ ನೆಕ್ಸಾನ್EV ಕಾರು ಬಾರು!.

ಇದೀಗ ಟಾಟಾ ನೆಕ್ಸಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ನೂನತ ಕಾರಿನ ಬೆಲೆ 10 ರಿಂದ 15 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ನೂತನ ಹ್ಯುಂಡೈ ಎಲೆಕ್ಟ್ರಿಕ್ ಕಾರು ಸಂಪೂರ್ಣ ಚಾರ್ಜ್ ಮಾಡಿದರೆ 200 ರಿಂದ 300 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.

ಹ್ಯುಂಡೈ ನೂತನ ಎಲೆಕ್ಟ್ರಿಕ್ ಕಾರು ಭಾರತದಲ್ಲಿ 2022ಕ್ಕೆ ಬಿಡುಗಡೆಯಾಗಲಿದೆ. ಸದ್ಯ ಕೊರೋನಾ ವೈರಸ್ ಕಾರಣ ಹ್ಯುಂಡೈ ಸೇರಿದಂತೆ ಎಲ್ಲಾ ಕಾರು ಕಂಪನಿಗಳು ಬಾಗಿಲು ಮುಚ್ಚಿವೆ. ಲಾಕ್‌ಡೌನ್, ವೈರಸ್ ಕಾರಣದಿಂದ ಕಾನ್ಸೆಪ್ಟ್ ಕಾರು ಅನಾವರಣ ಕೊಂಚ ತಡವಾಗಲಿದೆ. ಆದರೆ ಶೀಘ್ರದಲ್ಲೇ ಹ್ಯುಂಡೈ ನೂತನ ಕಾರಿನ ಕುರಿತ ವಿವಹ ಬಹಿರಂಗ ಪಡಿಸಲಿದೆ.
 

click me!