1,600 ಕಿ.ಮೀ ಮೈಲೇಜ್; XP-1 ಹೈಡ್ರೋಜನ್ ಎಲೆಕ್ಟ್ರಿಕ್ ಸೂಪರ್ ಕಾರು ಅನಾವರಣ!

By Suvarna NewsFirst Published Aug 18, 2020, 3:45 PM IST
Highlights

ಹೈಪರಿಯಾನ್ XP-1 ಹೈಡ್ರೋಜನ್ ಎಲೆಕ್ಟ್ರಿಕ್ ಸೂಪರ್ ಕಾರು 
1,600 ಕಿಲೋಮೀಟರ್ ಮೈಲೇಜ್
356 ಕಿಲೋಮೀಟರ್ ವೇಗ ಪ್ರತಿ ಗಂಟೆಗೆ

ಕ್ಯಾಲಿಫೋರ್ನಿಯ(ಆ.18): ಹಲವು ವಿಶೇಷ ಹಾಗೂ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಸೂಪರ್ ಕಾರು ಅನಾವರಣಗೊಂಡಿದೆ. ಹೈಪರಿಯಾನ್ ಕಂಪನಿಯ XP-1 ಹೈಡ್ರೋಜನ್ ಎಲೆಕ್ಟ್ರಿಕ್ ಸೂಪರ್ ಕಾರು ಇದೀಗ ವಿಶ್ವದ ಗಮನಸೆಳೆದಿದೆ.  ಹೈಡ್ರೋಜನ್ ಫ್ಯುಯೆಲ್ ಸೆಲ್ಸ್ ಹಾಗೂ ಎಲೆಕ್ಟ್ರಿಕ್ ಮೋಟಾರು ಹೊಂದಿರುವ ಈ ಕಾರು, 4 ವ್ಹೀಲ್ ಡ್ರೈವ್ ಅನುಭವ ನೀಡಲಿದೆ.

ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಬೆಲೆಯ ಸೂಪರ್ ಕಾರು!

ಒಂದು ಬಾರಿ ತುಂಬಿಸಿದ ಹೈಡ್ರೋಜನ್ ಫ್ಯುಯೆಲ್ ಸೆಲ್ಸ್‌ನಿಂದ ಕಾರು ಬರೋಬ್ಬರಿ 1,600 ಕಿ.ಮೀ ಮೈಲೇಜ್ ನೀಡಲಿದೆ. 2.2 ಸೆಕೆಂಡ್‌ಗಳಲ್ಲಿ 96 ಕಿ.ಮೀ ವೇಗ ತಲುಪಲಿದೆ. ಇನ್ನು ಟಾಪ್ ಸ್ಪೀಡ್ 356 ಕಿ.ಮೀ ಪ್ರತಿ ಗಂಟೆಗೆ. ಕಾರ್ಬನ್ ಫೈಬರ್ ಹೈಡ್ರೋಜನ್ ಟ್ಯಾಂಕ್‌ನಲ್ಲಿ 1,6000 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಕೊರೋನಾ ಸಂಕಷ್ಟದ ನಡುವೆ ಹೊಸ ಮೈಲಿಗಲ್ಲು ಸ್ಥಾಪಿಸಿದ ಲ್ಯಾಂಬೋರ್ಗಿನಿ!

ಹೈಡ್ರೋಜನ್ ಫ್ಯುಯೆಲ್ ಸೆಲ್ಸ್‌ ಆಗಿರುವ ಕಾರಣ 5 ನಿಮಿಷದಲ್ಲಿ ಟ್ಯಾಂಕ್ ಭರ್ತಿ ಮಾಡಬಹುದು. ಕಾರಿನ ಕರ್ಬ್ ತೂಕ 1032 ಕೆಜಿ. ಸದ್ಯ ಎಲೆಕ್ಟ್ರಿಕ್ ಕಾರುಗಳಲ್ಲಿ BEV ಟೆಕ್ನಾಲಜಿ ಬಳಸಸಾಗುತ್ತಿದೆ. ಆದರೆ ಇದರಿಂದ ಕಾರಿನ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ನೂತನ ಹೈಪರಿಯಾನ್ XP-1 ಹೈಡ್ರೋಜನ್ ಎಲೆಕ್ಟ್ರಿಕ್ ಸೂಪರ್ ಕಾರು  ಈ ಸಮಸ್ಯೆ ಇಲ್ಲ. 

ನೂತನ ಹೈಪರಿಯಾನ್ XP-1 ಹೈಡ್ರೋಜನ್ ಎಲೆಕ್ಟ್ರಿಕ್ ಸೂಪರ್ ಕಾರು ಅನಾವರಣಗೊಂಡಿದೆ. ಇನ್ನು ಕಾರು ಬಿಡುಗಡೆ 2022ರಲ್ಲಿ. ಇಷ್ಟೇ ಅಲ್ಲ ಕೇಲ 300 ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.

ಭಾರತದಲ್ಲಿ ಈ ಕಾರು ಬಿಡುಗಡೆ ಸಾಧ್ಯತೆಗಳಿಲ್ಲ. ಕಾರಣ ಭಾರತದಲ್ಲಿ ಹೈಡ್ರೋಜನ್ ಫ್ಯುಯೆಲ್ಸ್ ಸ್ಟೇಶನ್‌ಗಳಿಲ್ಲ. 

click me!