ಹೆದ್ದಾರಿಗಳ ಪ್ರಯಾಣದ ವೇಳೆ ಸ್ಕೂಟರ್‍‌ನ ಟೈರ್ ಗಾಳಿ ಎಷ್ಟಿರಬೇಕು? ಸ್ವಲ್ಪ ಯಾಮಾರಿದರೂ ಜೀವಕ್ಕೇ ಅಪಾಯ

Published : Nov 10, 2026, 03:28 PM IST
Best scooters under 90000

ಸಾರಾಂಶ

ಹೆದ್ದಾರಿಯಲ್ಲಿ ಸ್ಕೂಟರ್ ಚಲಾಯಿಸುವಾಗ ಟೈರ್ ಗಾಳಿಯ ಒತ್ತಡ ಸರಿಯಾಗಿರಬೇಕು. ಅತಿಯಾದ ಗಾಳಿ ತುಂಬಿದರೆ ಟೈರ್ ಸ್ಫೋಟಗೊಳ್ಳುವ ಅಥವಾ ಅಪಘಾತದ ಅಪಾಯವಿರುತ್ತದೆ. ಮುಂಭಾಗದ ಟೈರ್ 22-24 PSI ಮತ್ತು ಹಿಂಭಾಗ 29-36 PSI ಇರುವುದು ಸುರಕ್ಷಿತ.

ನವದೆಹಲಿ: ಹೆದ್ದಾರಿಗಳಲ್ಲಿ ದೀರ್ಘ ಪ್ರಯಾಣಕ್ಕೆ ಸ್ಕೂಟರ್‍‌ನ ಗಾಳಿ ಎಷ್ಟಿರಬೇಕು ಎಂಬ ಅನುಮಾನ ಅನೇಕರಲ್ಲಿ ಇರುತ್ತದೆ. ಯಾಕೆಂದರೆ ಹೆದ್ದಾರಿಗಳಲ್ಲಿ ವಾಹನವನ್ನು ವೇಗವಾಗಿ ಓಡಿಸಬೇಕಾಗುತ್ತದೆ. ಹೀಗಾಗಿ ಟೈರ್‍‌ಗಳ ಗಾಳಿ ಹೆಚ್ಚಿದ್ದರೂ ಕಷ್ಟ, ಕಡಿಮೆ ಇದ್ದರೂ ಕಷ್ಟ. ಅದು ಬ್ಯಾಲೆನ್ಸ್ ಆಗಿರಬೇಕು. ಇಲ್ಲದಿದ್ದರೆ ಅಪಘಾತಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ಗಾಡಿ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಿದ್ದರೆ ಟೈರ್‍‌ನ ಗಾಳಿ ಎಷ್ಟಿರಬೇಕು?

ಆಟೋ ಮೊಬೈಲ್ ತಜ್ಞರು ಮತ್ತು ಪ್ರಮುಖ ಟೈರ್ ತಯಾರಕರ ಪ್ರಕಾರ.. ಸ್ಕೂಟರ್ ಟೈರ್‌ಗಳ ಗಾತ್ರ ಮತ್ತು ಸಾಮರ್ಥ್ಯವು ಕಾರುಗಳು, ಬೈಕ್‌ಗಳಿಂದ ಭಿನ್ನವಾಗಿರುತ್ತವೆ. ಟೈರ್‍‌ನ ಗಾಳಿಯ ಒತ್ತಡವು ನಿಗದಿತ ಮಾನದಂಡಗಳ ಪ್ರಕಾರವೇ ಇರಬೇಕು.

ಹೆದ್ದಾರಿಗಳಲ್ಲಿ ಗಾಳಿ ಎಷ್ಟು ಇರಬೇಕು?

ಹೆದ್ದಾರಿಯಲ್ಲಿ ಸ್ಕೂಟರ್ ಚಾಲನೆ ಮಾಡುವಾಗ ಟೈರ್‌ಗಳನ್ನು 35 ಅಥವಾ 40 PSIಗೆ ಗಾಳಿ ತುಂಬಿಸುವುದು ಅಪಾಯಕಾರಿ. ಸ್ಥಳೀಯ ಏರ್ ಅಂಗಡಿಗಳು ಸಾಮಾನ್ಯವಾಗಿ ಮೀಟರ್ ಪರಿಶೀಲಿಸದೆಯೇ ಅತಿಯಾಗಿ ಗಾಳಿ ತುಂಬಿ ಬಿಡುತ್ತಾರೆ. ಇದರಿಂದ ಅಪಾಯವೇ ಹೆಚ್ಚಾಗಿದೆ. ನಾವು ಹೆದ್ದಾರಿಯಲ್ಲಿ ತುಂಬಾ ಸ್ಪೀಡ್ ಆಗಿ ಚಾಲನೆ ಮಾಡುತ್ತೇವೆ. ಭಾರೀ ವೇಗದಿಂದಾಗಿ ರಸ್ತೆ ರಬ್ಬರ್ ನಡುವೆ ಘರ್ಷಣೆ ಉಂಟಾಗುತ್ತದೆ. ಇದರಿಂದ ಟೈರ್ ಒಳಗಿನ ಗಾಳಿಯನ್ನು ಹೆಚ್ಚು ಬಿಸಿ ಮಾಡುತ್ತದೆ. ಗಾಳಿಯು ಬಿಸಿ ಆದಾಗ ಅದರ ಒತ್ತಡವು ಸ್ವಯಂಚಾಲಿತವಾಗಿ 2 ರಿಂದ 4 ಪಿಎಸ್ಐ ಹೆಚ್ಚಾಗುತ್ತದೆ. ನಿಮ್ಮ ಟೈರ್‌ನಲ್ಲಿ ಈಗಾಗಲೇ 40 ಪಿಎಸ್‌ಐ ಗಾಳಿ ಇದ್ದರೆ.. ಅದು ಬಿಸಿ ಆಗುತ್ತಿದ್ದಂತೆಯೇ ಒತ್ತಡವು ಇನ್ನಷ್ಟು ಹೆಚ್ಚಾಗುತ್ತದೆ ಅನ್ನೋದು ತಜ್ಞರ ಎಚ್ಚರಿಕೆ.

ಸ್ಕೂಟರ್‍‌ಗಳಿಗೆ ಮಾನದಂಡ ಏನು?

ಹೋಂಡಾ ಆಕ್ಟಿವಾ, ಟಿವಿಎಸ್ ಜುಪಿಟರ್ ಮತ್ತು ಸುಜುಕಿ ಆಕ್ಸೆಸ್‌ಗಳಿಗೆ, ಕಂಪನಿಗಳು ನಿರ್ದಿಷ್ಟ ವಾಯು ಒತ್ತಡದ ಚಾರ್ಟ್‌ಗಳನ್ನು ಹೊಂದಿವೆ. ಅಧಿಕೃತ ಮಾರ್ಗಸೂಚಿಗಳ ಪ್ರಕಾರ.. ಒಂಟಿಯಾಗಿ ಪ್ರಯಾಣಿಸುವಾಗ ಸ್ಕೂಟರ್‌ನ ಮುಂಭಾಗದ ಟೈರ್ ಅನ್ನು 22 ರಿಂದ 24 PSIಗೆ ಮತ್ತು ಹಿಂಭಾಗದ ಟೈರ್ ಅನ್ನು 29 PSI ಗೆ ಗಾಳಿ ತುಂಬಿಸಬೇಕು. ಒಂದು ವೇಳೆ ಹಿಂಬದಿ ಸವಾರ ಅಥವಾ ಭಾರವಾದ ಲಗೇಜ್ ಹೊಂದಿದ್ದರೆ.. ಮುಂಭಾಗದ ಟೈರ್ ಒತ್ತಡವು 22 ರಿಂದ 24 PSI ನಲ್ಲಿ ಉಳಿಯಬೇಕು. ಆಗ ಹಿಂಭಾಗದ ಟೈರ್ ಒತ್ತಡವನ್ನು 36 PSI ಗೆ ಹೆಚ್ಚಿಸಬಹುದು. ದೀರ್ಘ ಹೆದ್ದಾರಿ ಪ್ರಯಾಣಗಳಲ್ಲಿ ವಾಹನ ಸಮತೋಲನ ಕಾಪಾಡಿಕೊಳ್ಳಲು ಮುಂಭಾಗದ ಟೈರ್ ಒತ್ತಡವು ಎಂದಿಗೂ 25 PSI ಅನ್ನು ಮೀರಬಾರದು. ಒಂದು ವೇಳೆ ಹೆಚ್ಚಾದರ ಹ್ಯಾಂಡಲ್ ಹೆಚ್ಚು ಶೇಕ್ ಆಗುತ್ತದೆ. ಜೊತೆಗೆ ನಿಯಂತ್ರಣ ನಿಮ್ಮ ಕೈಯಲ್ಲಿ ಇರೋದಿಲ್ಲ.

ಸರಿಯಾದ ಟೈರ್ ಒತ್ತಡ ಕಾಪಾಡಿಕೊಳ್ಳೋದ್ರಿಂದ ಸ್ಕೂಟರ್‌ನ ಕಾರ್ಯಕ್ಷಮತೆ ಮತ್ತು ಮೈಲೇಜ್ ಎರಡಕ್ಕೂ ಒಳ್ಳೆಯದು. ಟೈರ್‌ಗಳನ್ನು ಸರಿಯಾಗಿ ಗಾಳಿ ತುಂಬಿಸಿದಾಗ.. ಎಂಜಿನ್ ಮೇಲೆ ಯಾವುದೇ ಹೆಚ್ಚುವರಿ ಒತ್ತಡ ಇರೋದಿಲ್ಲ. ವಾಹನವು ಸರಾಗವಾಗಿ ಚಲಿಸುತ್ತದೆ. ಇದರಿಂದ ಇಂಧನ ಉಳಿತಾಯ ಆಗಲಿದೆ.

ಒಂದು ವೇಳೆ ಟೈರ್‍‌ನ ಒತ್ತಡವು ತುಂಬಾ ಕಡಿಮೆಯಿದ್ದರೆ.. ಡ್ರೈವಿಂಗ್ ಮೇಲೆ ಪರಿಣಾಮ ಬೀರುತ್ತದೆ. ಬೈಕ್‌ನ ಬ್ಯಾಲೆನ್ಸ್ ಹಾಳು ಮಾಡುತ್ತದೆ. ಕಡಿಮೆ ಗಾಳಿ ತುಂಬಿದ ಟೈರ್‌ಗಳು ರಸ್ತೆಯಲ್ಲಿ ಹೆಚ್ಚಿನ ಘರ್ಷಣೆ ಉಂಟುಮಾಡುತ್ತವೆ. ಆಗ ಇಂಧನ ಮೈಲೇಜ್ ಕಡಿಮೆ ಆಗುತ್ತದೆ. ಅಕಾಲಿಕ ಟೈರ್ ಸವೆತಕ್ಕೆ ದಾರಿ ಮಾಡಿಕೊಡುತ್ತದೆ. ದೊಡ್ಡ ದೊಡ್ಡ ಹೆದ್ದಾರಿಗೆ ನೀವು ಗಾಡಿ ಇಳಿಸುವ ಮುನ್ನ ಟೈರ್‍‌ನ ಗಾಳಿ ಎಷ್ಟಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.

PREV
Read more Articles on
click me!

Recommended Stories

ಭಾರತೀಯ ರೈಲು ಬೋಗಿಗಳ ಜೀವಿತಾವಧಿ ಎಷ್ಟು? ಸೇವೆಯಿಂದ ನಿವೃತ್ತಿಯಾದ ಮೇಲೆ ಅವುಗಳನ್ನು ಏನು ಮಾಡ್ತಾರೆ ಗೊತ್ತಾ?
Cheapest Electric Cars in India: ದೀಪಾವಳಿಗೆ ಕೇವಲ ₹4.69 ಲಕ್ಷಕ್ಕೆ ಇವಿ ಕಾರು ಮನೆಗೆ ತನ್ನಿ! 331 ಕಿ.ಮೀ ಮೈಲೇಜ್, ಇಲ್ಲಿವೆ 4 ಬೆಸ್ಟ್ ಚಾಯ್ಸ್