
ನವದೆಹಲಿ(ನ.10): ಹೀರೋ ಮೋಟಾರ್‌ಕಾರ್ಪ್ ತನ್ನ ಬೈಕ್ ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್, ಹಲವು ವಿಶೇಷತೆಗಳೊಂದಿಗೆ ನೂತ BS6 ಹೀರೋ Xtreme 200 ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ 1,15,715 ರೂಪಾಯಿ(ಎಕ್ಸ್ ಶೋ ರೂಂ).
ಹಬ್ಬದ ಸಂಭ್ರಮ ಡಬಲ್ ; ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್!.
ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಹೊಂದಿರುವ ನೂತನ BS6 ಹೀರೋ Xtreme 200 ಬೈಕ್ 17.8 bhp ಪವರ್ (@ 8500 rpm) 16.4 Nm (@6,500 rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಪ್ಲೆಶರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ ಮಾಡಿದ ಹೀರೋ !...
ಟ್ವಿನ್ LED ಹೆಡ್‌ಲ್ಯಾಂಪ್ಸ್, LED ಟೈಲ್ ಲೈಟ್ಸ್, ಬ್ಲೂ ಟೂಥ್ ಕನೆಕ್ಟಿವಿಟಿ, ನ್ಯಾವಿಗೇಶನ್, ಆಟೋ ಸೈಲ್ ಟೆಕ್ನಾಲಜಿ, ಡಿಜಿಟಲ್ LCD ಕ್ಲಸ್ಟರ್, ಗೇರ್ ಇಂಡಿಕೇಟರ್, ಟ್ರಿಪ್ ಮೀಟರ್, ಸರ್ವೀಸ್ ರಿಮೈಂಡರ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
ನೂತನ ಬೈಕ್ 3 ಬಣ್ಣಗಳಲ್ಲಿ ಲಭ್ಯವಿದೆ. ಹೊಚ್ಚ ಹೊಸ ಬೈಕ್, ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳಿಂದ ಕೂಡಿರುವ ನೂತನ ಬೈಕ್ ಇದೀಗ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಲಿದೆ ಎಂದು ಹೀರೋ ಮೋಟಾರ್‌ಕಾರ್ಪ್ ಹೇಳಿದ್ದಾರೆ.