ಹೊಸ ರೂಪದಲ್ಲಿ ಬಜಾಜ್‌ ಸಿಟಿ 110

Published : Jul 31, 2019, 05:44 PM IST
ಹೊಸ ರೂಪದಲ್ಲಿ ಬಜಾಜ್‌ ಸಿಟಿ 110

ಸಾರಾಂಶ

ಬಜಾಜ್ ಸಿಟಿ 100 ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಕಡಿಮೆ ಬೆಲೆ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿರುವ ನೂತನ ಬಜಾಜ್ ಸಿಟಿ 100 ಗ್ರಾಹಕರ ಅಗತ್ಯ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಮುಂಬೈ(ಜು.31):  ಬಜಾಜ್‌ ಕಂಪೆನಿ ಸಿಟಿ110 ಬೈಕ್‌ ಅನ್ನು ಹೊಸ ರೂಪದಲ್ಲಿ ಗ್ರಾಹಕರಿಗೆ ಪರಿಚಯಿಸಿದೆ. ಹಲವು ವಿಶೇಷಗಳೊಂದಿಗೆ ಬಿಡುಗಡೆಯಾದ ಈ ಬೈಕ್‌ ಬೆಲೆ ರು. 37,997. ಇದರಲ್ಲಿ ಸೆಮಿ-ನಾಬಿ ಟೈರ್‌ಗಳು, ಗ್ರೌಂಡ್‌ ಕ್ಲಿಯರೆನ್ಸ್‌, ದೊಡ್ಡ ಕ್ರಾಶ್‌ ಗಾರ್ಡ್‌ಗಳಿದ್ದು, ಎಷ್ಟೇ ಕೆಟ್ಟರಸ್ತೆಯಿದ್ದರೂ ಕಿರಿಕಿರಿ ಇಲ್ಲದೆ ಸಂಚರಿಸಬಹುದು ಎಂದು ಕಂಪೆನಿ ತಿಳಿಸಿದೆ. 

ಇದನ್ನೂ ಓದಿ: ಬಜಾಜ್ ಪಲ್ಸಾರ್ 150 ಬೆಲೆ ಏರಿಕೆ; ಇಲ್ಲಿದೆ ನೂತನ ದರ ಪಟ್ಟಿ!

ಬೈಕ್‌ 115 ಸಿಸಿ ಡಿಟಿಎಸ್‌ಐ ಎಂಜಿನ್‌ ಹೊಂದಿದೆ. ದಪ್ಪಗಿರುವ ಉದ್ದನೆಯ ಸೀಟುಗಳಿದ್ದು, ರೈಡಿಂಗ್‌ಗೆ ಕಂಫರ್ಟೆಬಲ್‌ ಅನ್ನಿಸುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಗುರಿಯಾಗಿಸಿಕೊಂಡು ಈ ಬೈಕ್‌ನಲ್ಲಿ ಕಿಕ್‌ ಸ್ಟಾರ್ಟ್‌ ಹಾಗೂ ಎಲೆಕ್ಟ್ರಿಕ್‌ ಸ್ಟಾರ್ಟ್‌ ಎರಡೂ ಶ್ರೇಣಿಯಲ್ಲಿ ಲಭ್ಯವಿದ್ದು, ಎಕ್ಸ್‌ ಶೋ ರೂಂ ಬೆಲೆ ಕ್ರಮವಾಗಿ ರು. 37,997 ಹಾಗೂ ರು.44,480. ಹಳದಿ ಡೇಕಲ್‌ ಮ್ಯಾಟರ್‌ ಒಲಿವ್‌, ನೀಲಿ ಡೇಕಲ್‌ ಗ್ಲೋಸ್‌ ಎಬೊನಿ ಬ್ಲಾಕ್‌ ಹಾಗೂ ಬ್ರೈಟ್‌ ರೆಡ್‌ ಡೇಕಲ್‌ ಗ್ಲೋಸ್‌ ಫ್ಲೇಮ್‌ ರೆಡ್‌ ಬಣ್ಣಗಳಲ್ಲಿ ಲಭ್ಯವಿದೆ.
 

PREV
click me!

Recommended Stories

ಭಾರತದಲ್ಲಿ ಈ ವರ್ಷ ಗರಿಷ್ಠ ಮಾರಾಟವಾದ ಕಾರ್‌ಗಳ ಲಿಸ್ಟ್‌, ಮಾರುತಿಗೆ ಸಾಟಿಯೇ ಇಲ್ಲ!
ಪ್ರಖ್ಯಾತ ಎಲೆಕ್ಟ್ರಿಕ್‌ ಸ್ಕೂಟರ್‌ಅನ್ನು ಈಗಲೇ ಖರೀದಿಸಿ, ಜನವರಿ 1 ರಿಂದ ಇದರ ಬೆಲೆ ಆಗಲಿದೆ ದುಬಾರಿ!