ಬರುತ್ತಿದೆ ಬೆಂಗಳೂರಿನ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್, 230 KM ಮೈಲೇಜ್!

By Suvarna News  |  First Published Nov 22, 2020, 6:37 PM IST

ಭಾರತದಲ್ಲಿ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಮಾಡುತ್ತಿದೆ. ಇದರಲ್ಲಿ ಯಶಸ್ಸು ಕಂಡಿದೆ. ಬೆಂಗಳೂರು ಮೂಲದ ಎದರ್  ಎನರ್ಜಿ ಇದೀಗ ಭಾರತದಲ್ಲಿ ಜನಪ್ರಿಯವಾಗಿದೆ. ಇದೀಗ ಎದರ್‌ಗೆ ಪ್ರತಿಸ್ಪರ್ಧಿಯಾಗಿ ಬೆಂಗಳೂರು ಮತ್ತೊಂದು ಕಂಪನಿ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.


ಬೆಂಗಳೂರು(ನ.22):  ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ತಾಣವಾಗಿ ಬೆಂಗಳೂರು ಬೆಳೆಯುತ್ತಿದೆ. ಎದರ್ ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತ ಹಲವು ಎಲೆಕ್ಟ್ರಿಕ್ ಸ್ಕೂಟರ್ ಸ್ಟಾರ್ಟ್ ಅಪ್ ಕಂಪನಿಗಳು ಬೆಂಗಳೂರಿನಲ್ಲಿದೆ. ಇದೀಗ ಬೆಂಗಳೂರಿನ ಸಿಂಪಲ್ ಎನರ್ಜಿ ಮೊಬಿಲಿಟಿ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ತಯಾರಿ ಮಾಡುತ್ತಿದೆ.

ಜನವರಿಯಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!.

Tap to resize

Latest Videos

undefined

ಸಿಂಪಲ್ ಎನರ್ಜಿ ಮಾರ್ಕ್ 2 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ.  ನೂತನ ಸ್ಕೂಟರ್ ಮೈಲೇಜ್ ಪರೀಕ್ಷೆಯನ್ನು ARAI ಸಂಸ್ಥೆ ಮಾಡಿದೆ. ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 230 ಕಿ.ಮೀ ಮೈಲೇಜ್ ನೀಡಲಿದೆ. ಇಕೋ ಮೊಡ್‌ನಲ್ಲಿ ಸಂಚರಿಸಿದರೆ 230 ಕಿ.ಮೀ ಮೈಲೇಜ್ ನೀಡಲಿದೆ. ಇದು ಸದ್ಯ ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಗರಿಷ್ಠವಾಗಿದೆ.

ಸಿಂಪಲ್ ಎನರ್ಜಿ ಸಂಸ್ಥೆಯ ನೂತನ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ವೇಗ 103 ಕಿ.ಮೀ ಪ್ರತಿ ಗಂಟೆಗೆ. 0 -50 ಕಿ.ಮೀ ವೇಗವನ್ನು ಕೇವಲ 3.6 ಸೆಕೆಂಡ್‌ನಲ್ಲಿ ತಲುಪಲಿದೆ. ARAI ಮೈಲೇಜ್ ವರದಿ ಬಿಡುಗಡೆಯಾಗುತ್ತಿದ್ದಂತೆ ಇದೀಗ ಸಿಂಪಲ್ ಎನರ್ಜಿ ಭಾರಿ ಸಂಚಲನ ಮೂಡಿಸಿದೆ.

ಗ್ರಾಹಕರ ಕುತೂಹಲಕ್ಕೆ ಉತ್ತರ ನೀಡಿದ ಎದರ್ 450X!

60 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ನೂತನ ಸ್ಕೂಟರ್ ಬೆಲೆ 1.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಎದರ್ ಎನರ್ಜಿ 450X, TVS i ಕ್ಯೂಬ್, ಬಜಾಜ್ ಚೇತಕ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪ್ರತಿಸ್ಪರ್ಧಿಾಯಾಗಿ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ

click me!