ಕೊರೋನಾ ಪರಿಹಾರ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ; ಉದ್ಯಮಿ ಅರಸ್ಟ್!

By Suvarna NewsFirst Published Jul 30, 2020, 9:37 PM IST
Highlights

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸರ್ಕಾರ, ಸಂಘ ಸಂಸ್ಥೆಗಳು ಸೇರಿದಂತೆ ಹಲವರು ಪರಿಹಾರ ಹಣ ಸಂಗ್ರಹಿಸುತ್ತಿದ್ದಾರೆ. ಹೀಗೆ ಹಲವು ಕಂಪನಿಗಳ ಮಾಲೀಕ ಕೊರೋನಾ ಪರಿಹಾರದ ಹೆಸರಲ್ಲಿ ಹಣ ಸಂಗ್ರಹಿಸಿ ವೈಯುಕ್ತಿಕ ಬಳಕೆ ಮಾಡಿಕೊಂಡಿದ್ದಾರೆ. ದುಬಾರಿ ಹಾಗೂ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಬೆನ್ನಲ್ಲೇ ಈ ಉದ್ಯಮಿ ಪೊಲೀಸರ ಅತಿಥಿಯಾಗಿದ್ದಾನೆ.

ಫ್ಲೋರಿಡಾ(ಜು.30): ಕೊರೋನಾ ವೈರಸ್ ವಿಶ್ವದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಹಲವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೂಲಿ ಕಾರ್ಮಿಕರು ಮಾತ್ರವಲ್ಲ, ಶ್ರೀಮಂತ ಉದ್ಯಮಿಗಳು, ಸೆಲೆಬ್ರೆಟಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರ ಮಾತ್ರವಲ್ಲ ಹಲವು ಸಂಘ ಸಂಸ್ಥೆಗಳು, ಸೆಲೆಬ್ರೆಟಿಗಳು, ಕ್ರೀಡಾಪಟುಗಳು, ಕಂಪನಿಗಳು ಕೊರೋನಾಗೆ ತುತ್ತಾದ ಜನರಿಗೆ ಸಹಾಯ ಹಸ್ತ ಚಾಚಿದೆ.  ಹೀಗೆ ಅಮೆರಿಕದ ಫ್ಲೋರಿಡಾದಲ್ಲಿನ ಉದ್ಯಮಿ ಕೊರೋನಾ ವೈರಸ್ ಹೆಸರಲ್ಲಿ ಪರಿಹಾರಣ ಹಣ ಸಂಗ್ರಹಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕೊರೋನಾ ಸಂಕಷ್ಟದ ನಡುವೆ ಹೊಸ ಮೈಲಿಗಲ್ಲು ಸ್ಥಾಪಿಸಿದ ಲ್ಯಾಂಬೋರ್ಗಿನಿ!

ಫ್ಲೋರಿಡಾದ ಉದ್ಯಮಿ 29 ವರ್ಷದ ಡೇವಿಡ್ ಹೈನ್ಸ್ ಹಲವು ಬಿಸ್‌ನೆಸ್‌ಗಳು ನಷ್ಟಕ್ಕೆ ಬಿದ್ದಿದೆ. ಫೈನಾನ್ಸ್ ಕಂಪನಿ ಸೇರಿದಂತೆ ಕಲ ಕಂಪನಿಗಳು ನಷ್ಟ ಅನುಭವಿಸಲು ಆರಂಭಿಸಿದೆ. ಈ ವೇಳೆ ಡೇವಿಡ್ ಕೊರೋನಾ ವೈರಸ್ ಪರಿಹಾರ ರೂಪದಲ್ಲಿ ಹಣ ಸಂಗ್ರಹಿಸಿದ್ದಾರೆ. ಈತನ ಹಲವು ಕಂಪನಿಗಳು ಕೊರೋನಾ ಹೆಸರಿನಲ್ಲಿ ಪರಿಹಾರ ಹಣ ಸಂಗ್ರಹಕ್ಕೆ ಮುಂದಾಗಿದೆ.

ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಡ್ರೈವ್!.

ಸಂಕಷ್ಟದಲ್ಲಿರುವವರಿಗೆ ನೆರವಾಗಲಿ ಎಂದು ಹಲವರು ದೇಣಿಗೆ ನೀಡಿದ್ದಾರೆ. ಈತ ಈ ಹಣವನ್ನು ಕೊರೋನಾ ಪರಿಹಾರಕ್ಕೆ ಬಳಸದೆ, ತನ್ನ ರೆಸಾರ್ಟ್ ಅಭಿವೃದ್ಧಿ ಸೇರಿದಂತೆ ವೈಯುಕ್ತಿಕ ಉದ್ದೇಶಕ್ಕೆ ಬಳಕೆ ಮಾಡಿದ್ದಾನೆ. ಇಷ್ಟೇ ಅಲ್ಲ ಕೊನೆಗೆ ಹೊಚ್ಚ ಹೊಸ ಲ್ಯಾಂಬೊರ್ಗನಿ ಹುರಾಕನ್ ಕಾರು ಖರೀದಿಸಿದ್ದಾನೆ. ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಗರಿಷ್ಠ ಬೆಲೆ 3.45 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).

ಕೋಟಿ ಕೋಟಿ ರೂಪಾಯಿಗಳು ಬ್ಯಾಂಕ್ ಖಾತೆಯಲ್ಲಿ ಜಮಾವಣೆ ಹಾಗೂ ಟ್ರಾನ್ಸಾಕ್ಷನ್ ಗಮಿಸಿದ ಅಧಿಕಾರಿಗಳು ಈತನ ಕಂಪನಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ದಾಖಲೆ ಪತ್ರಗಳಲ್ಲಿ ಭಾರಿ ಅವ್ಯವಾಹರ ನಡೆದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಡೇವಿಡ್ ಹೈನ್ಸ್‌ನನ್ನು ಅರೆಸ್ಟ್ ಮಾಡಿದ್ದಾರೆ. 

click me!