ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್‌ಗೆ ವಿದೇಶಗಳಲ್ಲಿ ಹೆಚ್ಚಿನ ಸ್ಪಂದನೆ ಸಿಕ್ಕಿದೆ. ಆದರೆ ಭಾರತದ ಮಹಿಳೆ ಅಭಿನಿ ಸುಹಾನ್ ರೊಯ್ ಇದೀಗ ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ್ದಾರೆ. ಈ ಮೂಲಕ ಈ ಕಾರು ಖರೀದಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದುಬೈ(ಡಿ.27): ರೋಲ್ಸ್ ರಾಯ್ಸ್ ಲಕ್ಸುರಿ ಕಾರು ಕಂಪೆನಿ ಈ ವರ್ಷ ಆರಂಭದಲ್ಲಿ ವಿಶ್ವದ ಅತ್ಯಂತ ದುಬಾರಿ ಕಾರು ಬಿಡುಗಡೆ ಮಾಡಿತ್ತು. ರೋಲ್ಸ್ ರಾಯ್ಸ್ ಕಲ್ಲಿನಾನ್ ಹೆಸರಿನ ಈ ಕಾರಿನ ಬೆಲೆ ಬರೋಬ್ಬರಿ 6.92 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ದುಬಾರಿ ಕಾರನ್ನ ಭಾರತೀಯ ಮೂಲದ ಅಭಿನಿ ಸುಹಾನ್ ರೊಯ್ ಖರೀದಿಸಿದ್ದಾರೆ.
undefined
ಇದನ್ನೂ ಓದಿ: ರೋಲ್ಸ್ ರಾಯ್ಸ್ ಕಲಿನಿಯನ್ : ವಿಶ್ವದ ಅತ್ಯಂತ ದುಬಾರಿ SUV ಕಾರು!
ದುಬೈನಲ್ಲಿ ನೆಲೆಸಿರುವ ಅಭಿನಿಗೆ ಪತ್ನಿ ಸುಹಾನ್ ರೊಯ್ ತಮ್ಮ 25ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸಿಗೆ ಗಿಫ್ಟ್ ಆಗಿ ಈ ಕಾರು ನೀಡಿದ್ದಾರೆ. ಡಿಸೆಂಬರ್ 12, 2018ಕ್ಕೆ ಕಾರು ಡೆಲಿವರಿ ಕೇಳಿದ್ದರು. ಆದರೆ ಕಾರಣಾಂತರಗಳಿಂದ ಡಿ.12ಕ್ಕೆ ಕಾರು ಕೈಸೇರಲಿಲ್ಲ. ಆದರೆ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಖರೀದಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೂ ಅಭಿನಿ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಜ.15 ರಿಂದ ISI ರಹಿತ ಹೆಲ್ಮೆಟ್ ಮಾರಾಟ ನಿಷೇಧ-ತಪ್ಪಿದರೆ 2 ವರ್ಷ ಜೈಲು!
ದಕ್ಷಿಣ ಆಫ್ರಿಕಾದಲ್ಲಿರುವ ವಿಶ್ವದ ಅತೀ ದೊಡ್ಡ ಕಲಿನಿಯನ್ ಡೈಮಂಡ್ ಗಣಿ ಹೆಸರನ್ನೇ ಈ ಕಾರಿಗೆ ಇಡಲಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಕಾರು. ಇತರ ಕಾರುಗಳಿಗೆ ಹೋಲಿಸಿದರೆ ರೋಲ್ಸ್ ರಾಯ್ಸ್ ಕಾರಿನ ತಂತ್ರಜ್ಞಾನಕ್ಕೆ ಮನಸೋಲುವುದದು ಖಚಿತ. ಜಗತ್ತಿನ ಇತರ ಐಷಾರಾಮಿ ಕಾರುಗಳಿಗಿಂತ ರೋಲ್ಸ್ ರಾಯ್ಸ್ ಕಲಿನಿಯರ್ ಕಾರು ಮುಂದಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ದುಬೈನಲ್ಲಿರುವ ಏರೈಸ್ ಕಂಪೆನಿ ಸಂಸ್ಥಾಪಕ ಸೊಹಾನ್ ರಾಯ್, ವಿಶ್ವದ ಶ್ರೀಮಂತ ಉದ್ಯಮಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 15 ದೇಶಗಳಲ್ಲಿ ಒಟ್ಟು 48 ಕಂಪೆನಿ ಮಾಲೀಕತ್ವ ಹೊಂದಿದ್ದಾರೆ. ಕಳೆದ 20 ವರ್ಷಗಳಿಂದ ಎರೈಸ್ ಕಂಪೆನಿ ಕಾರ್ಯನಿರ್ವಹಿಸುತ್ತಿದೆ.