ಕೊರೋನಾ ವೈರಸ್: ಭಾರತದ ಆಟೋಮೊಬೈಲ್ ಉತ್ಪಾದನೆ ಸ್ಥಗಿತಕ್ಕೆ ಖಡಕ್ ಸೂಚನೆ!

By Suvarna News  |  First Published Mar 23, 2020, 3:40 PM IST

ಕೊರೋನಾ ವೈರಸ್ ಹತೋಟಿ ಬರದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರಬರದಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇತ್ತ ಕರ್ನಾಟಕದಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜನರಿಗೆ ವಿಶೇಷ ಮನವಿ ಮಾಡಿದ್ದಾರೆ. ಆದರೆ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್‌ಡೌನ್ ಚಿಂತನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಭಾರತದ ಬಹುತೇಕಾ ಎಲ್ಲಾ ಆಟೋಮೇಕರ್‌ಗಳು ಉತ್ಪಾದನೆ ಸ್ಥಗಿತಗೊಳಿಸಿದೆ.
 


ಬೆಂಗಳೂರು(ಮಾ.23): ಕೊರೋನಾ ವೈರಸ್ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದರೂ ಜನರು ಮಾತ್ರ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಹೀಗಾಗಿ ಸರ್ಕಾರ್ ಸಂಪೂರ್ಣ ಲಾಕ್‌ಡೌನ್‌ಗೆ ಚಿಂತನೆ ನಡೆಸುತ್ತಿದೆ. ಇತ್ತ ಕೊರೋನಾ ವೈರಸ್‌ನಿಂದಾಗ ಬೆಂಗಳೂರಿನಲ್ಲಿ ಟೊಯೋಟಾ ಕಿರ್ಲೋಸ್ಕರ್, ಚೆನ್ನೈನ ಟಿವಿಎಸ್ ಮೋಟಾರ್, ಹ್ಯುಂಡೈ ಇಂಡಿಯಾ, ಹೊಂಡಾ ಇಂಡಿಯಾ, ಮಾರುತಿ ಸುಜುಕಿ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿ ಎಲ್ಲಾ ಉದ್ಯೋಗಿಗಳಿಗೆ ಮನೆ ಬಿಟ್ಟು ಹೊರಬರದಂತೆ ಸೂಚನೆ ನೀಡಿದೆ.

ಇದನ್ನೂ ಓದಿ: ಹ್ಯುಂಡೈ ಕಾರಿಗೆ 2.5 ಲಕ್ಷ ರೂ ಡಿಸ್ಕೌಂಟ್; ಆಫರ್ ಕೆಲ ದಿನ ಮಾತ್ರ!.

Latest Videos

undefined

ಈಗಾಗಲೇ ಮಾರುತಿ ಸುಜುಕಿ, ಮಹೀಂದ್ರ, ಫಿಯೆಟ್ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿದೆ. ಮುಂದಿನ ನೊಟೀಸ್ ವರೆಗೂ ಕಂಪನಿ ಉತ್ಪಾದನೆ ಸ್ಛಗಿತಗೊಳಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನ್ಯುಫ್ಯಾಕ್ಟರ್  (SIAM) ಹಾಗೂ ಆಟೋಮೆಟಿವ್ ಕಾಂಪೊನೆಂಟ್ಸ್ ಮ್ಯಾನ್ಯುಫ್ಯಾಕ್ಟರರ್ ಆಸೋಸಿಯೇಶನ್ (ACMA) ಭಾರತದ ಎಲ್ಲಾ ಆಟೋಮೊಬೈಲ್ ಕಂಪನಿಗಳಿಗೆ ನೊಟೀಸ್ ನೀಡಿದೆ. ತಕ್ಷಣವೇ ಉತ್ಪಾದನೆ ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ಗುಡ್ ಬೈ ಹೇಳಿದ ಮಾರುತಿ ಸುಜುಕಿ ಡಿಸೈರ್ ಡೀಸೆಲ್ ಕಾರು!

ಕೊವಿಡ್-19 ವೈರಸ್‌ನಿಂದ ಆಟೋಮೊಬೈಲ್ ಕಂಪನಿಗಳಿಗೆ ತೀವ್ರ ಹೊಡೆತ ಬಿದ್ದಿದೆ. ಗ್ರಾಹಕರು ಹೊರಗೆ ಬರುತ್ತಿಲ್ಲ. ಇತ್ತ ಉದ್ಯೋಗಿಗಳಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿ ಕಂಪನಿ ಮೇಲಿದೆ. ಹೀಗಾಗಿ ಉತ್ಪಾದನೆ ಸ್ಥಗಿತ ಅನಿವಾರ್ಯ ಎಂದು SIAM ಹೇಳಿದೆ. ಸ್ವಯಂ ಪ್ರೇರಿತವಾಗಿ ಬಹುತೇಕ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿದೆ. ಇನ್ನುಳಿದ ಕಂಪನಿಗಳಿಗೆ ನೊಟೀಸ್ ನೀಡಿದೆ ಎಂದು SIAM ಹೇಳಿದೆ.  
 

ಮಾರ್ಚ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!