ಹಲವು ಹಂತಗಳನ್ನು ದಾಟಿ ಕಾರು ಉತ್ಪಾದನೆ ಆರಂಭಿಸುವುದು ಸಾಕಷ್ಟು ಸವಾಲಿನ ಕೆಲಸ. ಆಟೋ ಶೋಗಳಲ್ಲಿ ಅನಾವರಣ ಮಾಡುವ ಕಾರಿನ ವಿನ್ಯಾಸಕ್ಕೂ ಬಿಡುಗಡೆಯಾಗುವು ಕಾರಿನ ವಿನ್ಯಾಸಕ್ಕೂ ಸಾಕಷ್ಟು ಬದಲಾವಣೆಗಳಿರುತ್ತವೆ. ಹೊಸ ಕಾರಿನ ಪರಿಕಲ್ಪನೆ, ವಿನ್ಯಾಸ, ನಿರ್ಮಾಣ, ಬಿಡುಗಡೆ ಸೇರಿದಂತೆ ಹಲವು ಹಂತಗಳ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು(ಆ.24): ಕಾರು ನಿರ್ಮಾಣ ಅತ್ಯಂತ ಸವಾಲಿನ ಕೆಲಸ. ಕಾರಣ ಕಂಪನಿ ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಕಾರು ಬಿಡುಗಡೆ ಮಾಡಲಿದೆ. ಬಿಡುಗಡೆ ಬಳಿಕವೆ ಗ್ರಾಹಕರ ಸ್ಪಂದನೆ, ಪ್ರತಿಕ್ರಿಯೆಗಳು ಲಭ್ಯವಾಗಲಿದೆ. ಮಾರಾಟವಾಗದೇ ಉಳಿದರೆ ಕಾರು ಸ್ಥಗಿತಗೊಳ್ಳಲಿದೆ. ಇನ್ನು ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಕಾರು ಮತ್ತೆ ಅಪ್‌ಗ್ರೇಡ್ ಸೇರಿದಂತೆ ಹಲವು ಬದಲಾವಣೆಗಳ ಮೂಲಕ ಮತ್ತೆ ಮಾರುಕಟ್ಟೆಗೆ ಪ್ರವೇಶಿಸಲಿದೆ.
undefined
ಎಲೆಕ್ಟ್ರಿಕ್ ಕಾರಿನಿಂದ ಮಾರುದ್ದ ದೂರ ಡೀಲರ್ಸ್, ಅನುಭವ ಬಿಚ್ಚಿಟ್ಟ ಗ್ರಾಹಕ!.
ಹಲವು ಬಾರಿ ಆಟೋ ಎಕ್ಸ್ಪೋಗಳಲ್ಲಿ ಅನಾವರಣ ಮಾಡುವ ಕಾರುಗಳಿಗೂ ಬಿಡುಗಡೆಯಾಗುವ ಕಾರುಗಳಿಗೂ ಹಲವು ವ್ಯತ್ಯಾಸಗಳಿರುತ್ತವೆ. ಇದಕ್ಕೆ ಹಲವು ಕಾರಣಗಳೂ ಇರುತ್ತವೆ. ಒಂದು ಕಾರು ನಿರ್ಮಾಣಕ್ಕೆ ವರ್ಷಗಳ ಶ್ರಮವಿರುತ್ತೆ. ಕಾರಿನ ಡಿಸೈನ್ ಕುರಿತು ಮೇಲಿಂದ ಮೇಲೆ ಸಭೆಗಳಾಗುತ್ತದೆ. ಒಂದು ಡಿಸೈನ್ ಹಲವು ಬದಲಾವಣೆಗಳನ್ನು ಕಂಡು ಅಂತಿಮ ರೂಪ ಪಡೆಯಲು ಸುದೀರ್ಘ ದಿನಗಳೇ ತೆಗೆದುಕೊಳ್ಳತ್ತದೆ.
ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಸ್ಥಗಿತಗೊಂಡ 8 ಕಾರುಗಳು; ಇಲ್ಲಿದೆ ಕಾರಣ!
ಕಾರಿನ ನಿರ್ಮಾಣದ ಹಂತಗಳ ಸರಳ ಹಾಗೂ ಸಂಕ್ಷಿಪ್ತ ವಿವರ:
ಕಾನ್ಸೆಪ್ಟ್ ಅಬಿವೃದ್ಧಿ
+
ವಾಹನ ಡಿಸೈನ್ ಹಾಗೂ ಎಂಜಿನೀಯರಿಂಗ್
+
ಬಿಡುಗಡೆ
+
ಫೇಸ್‌ಲಿಫ್ಟ್
+
ವೈಂಡಿಂಗ್
+
ಮಾಡೆಲ್ ಇಯರ್(ಮಾಡೆಲ್ ಅಪ್‌ಡೇಟ್)
ಡಿಸೈನರ್, ಕ್ಲೇ ಮಾಡೆಲರ್ಸ್ ಹಾಗೂ ಕ್ರಾಫ್ಟ್‌ಮಾನ್ಸ್ ಮಾತ್ರ ಕಾರಿನ ಕಾನ್ಸೆಪ್ಟ್‌ನಲ್ಲಿ ಪಾಲ್ಗೊಳ್ಳುವದಲ್ಲ. ಇವರ ಜೊತೆಗೆ ಎಂಜನೀಯರ್, ಮಾರ್ಕೆಟಿಂಗ್ ಹಾಗೂ ಫಿನ್ಸಾನ್ಸ್ ಸೇರಿದಂತೆ ಹಲವು ವಿಭಾಗಗಳು ಕೆಲಸ ಮಾಡುತ್ತದೆ. ಮಾರುಕಟ್ಟೆ ಸಮೀಕ್ಷೆ, ಅಧ್ಯಯನ, ರಿಸರ್ಚ್, ಕಂಪನಿ ಪಾಲಿಸಿ ಸೇರಿದಂತೆ ಹಲವು ವಿಚಾರಗಳು ಕಾರಿನ ಕಾನ್ಸೆಪ್ಟ್ ಕ್ರಿಯೇಶನ್ ವೇಳೆ ಪ್ರಮುಖವಾಗಿ ಮುನ್ನಲೆಗೆ ಬರುತ್ತದೆ.
ಮಾರುಕಟ್ಟೆಯ ಆಳ ಆಧ್ಯಯನ, ಗ್ರಾಹಕರ ಬೇಡಿಕೆ, ಪ್ರಸ್ತುತ ಸನ್ನಿವೇಶ, ಟ್ರೆಂಡ್, ಪ್ರತಿಸ್ಪರ್ಧಿಗಳು, ಯಾವ ಸೆಗ್ಮೆಂಟ್ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಪಡೆಯುತ್ತಿದೆ ಅನ್ನೋ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ರಿಸರ್ಚರ್ ನೀಡುವ ಪ್ರಮುಖ ಮಾಹಿತಿಗಳಲ್ಲಿ ಕಾರಿನ ಬೆಲೆ, ಪರ್ಫಾಮೆನ್ಸ್, ಗಾತ್ರ, ಟೆಕ್ನಾಲಜಿ, ಫೀಚರ್ಸ್ ಸೇರಿದಂತೆ ಮಾರ್ಗಸೂಚಿಗಳ ಆಧಾರದಲ್ಲಿ ಕಾರಿನ ಡಿಸೈನ್ ಆರಂಭವಾಗುತ್ತದೆ. ಬಳಿಕ ಎಂಜಿನೀಯರಿಂಗ್ ಕೂಡ ಜೊತೆ ಜೊತೆಯಾಗಿ ಕಾರ್ಯನಿರ್ವಹಿಸಲಿದೆ.
ಕಾನ್ಸೆಪ್ಟ್ ಕಾರನ್ನು ಅತ್ಯಂತ ನಾಜೂಕಾಗಿ, ಹೆಚ್ಚಿನ ಶ್ರಮವಹಿಸಿ ಹಾಗೂ ಖರ್ಚಿನ ಕುರಿತ ತೆಲೆಕೆಡಿಸಿಕೊಳ್ಳದೆ ನಿರ್ಮಾಣ ಮಾಡಲಾಗುತ್ತದೆ. ಬಳಿಕ ಆಟೋ ಎಕ್ಸ್ಪೋ, ಅಥವಾ ಹಲವು ಬ್ರ್ಯಾಂಡಿಂಗ್ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಿ ಪ್ರಮೋಶನ್ ಆರಂಭಗೊಳ್ಳಲಿದೆ.
ಕಾನ್ಸೆಪ್ಟ್ ಕಾರು ಬಿಡುಗಡೆ ವೇಳೆ ಕೆಲ ಬದಲಾವಣೆಗಳನ್ನು ಕಂಡಿರುತ್ತದೆ. ವಿನ್ಯಾಸದಲ್ಲೂ ಬದಲಾವಣೆಗಳಾಗಿರುತ್ತದೆ. ಕಾರಣ ಬಿಡುಗಡೆಯಾಗುವ ಕಾರಿನ ಬೆಲೆ, ಮೈಲೇಜ್,ಸುರಕ್ಷತೆ, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಸೇರಿದಂತೆ ಹಲವು ವಿಚಾರಗಳು ಪ್ರಮುಖವಾಗುವುದರಿಂದ ವಿನ್ಯಾಸದಲ್ಲಿ ಬದಲಾವಣೆಗಳಾಗುವುದು ಸಹಜ.
ಕಾರು ಬಿಡುಗಡೆಯಾದ ಬಳಿಕ ಯಶಸ್ಸಿನ ಸಿಕ್ಕಿದ ಬೆನ್ನಲ್ಲೇ ಫೇಸ್‌ಲಿಫ್ಟ್ ವರ್ಶನ್ ಬಿಡುಗಡೆಯಾಗಲಿದೆ. ವರ್ಷಗಳ ಬಳಿಕ ಮಾಡೆಲ್ ಅಪ್‌ಗ್ರೇಡ್ ಆಗಲಿದೆ. ಕೆಲ ಬದಲಾವಣೆಗಳು, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಮತ್ತೆ ಅದೆ ಕಾರು ಹೊಚ್ಚ ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ.