ಭಾರತಕ್ಕೆ ಚೀನಾದ ಚೆರಿ ಕಾರು- ವಾಹನ ಮಾರುಕಟ್ಟೆ ತಲ್ಲಣ!

By Web Desk  |  First Published May 10, 2019, 3:36 PM IST


ಚೀನಾ ಕಾರು ಇದೀಗ ಭಾರತಕ್ಕೆ ಎಂಟ್ರಿಕೊಡಲು ರೆಡಿಯಾಗಿದೆ. ಚೀನಾದ ಅತೀ ದೊಡ್ಡ ಆಟೊ ಕಂಪನಿ ಇದೀಗ ಭಾರತದಲ್ಲಿ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಕುರಿತ ಹೆಚ್ಚಿನ  ವಿವರ ಇಲ್ಲಿದೆ.


ನವದೆಹಲಿ(ಮೇ.10): 2018 ಹಾಗೂ 2019ರ ಸಾಲಿನಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಹೊಸ ನಿಯಮಗಳು ಜಾರಿಯಾಗಿದೆ. ಇದೀಗ ಮತ್ತೊಂದು ಮಹತ್ತರ ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ. ಭಾರತದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಚೀನಾ, ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೂ ಎಂಟ್ರಿಕೂಡುತ್ತಿದೆ. ಈ ಮೂಲಕ  ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ.

ಇದನ್ನೂ ಓದಿ: ಕಾರು ರಿಪೇರಿಗೆ ಡೀಲರ್ ಮೊತ್ತ 3 ಲಕ್ಷ- ಲೋಕಲ್ ಗ್ಯಾರೇಜ್‌ನಲ್ಲಿ 1000 ರೂ.ಗೆ ರೆಡಿ!

Tap to resize

Latest Videos

ಚೀನಾದ ಅತೀ ದೊಡ್ಡ ಆಟೋಮೊಬೈಲ್ ಕಂಪನಿ ಚೆರಿ ಆಟೋಮೊಬೈಲ್ ಕಂಪನಿ ಇದೀಗ ಭಾರತಕ್ಕೆ ಕಾಲಿಡುತ್ತಿದೆ. ಇದಕ್ಕಾಗಿ ಭಾರತದ ಟಾಟಾ ಮೋಟಾರ್ಸ್ ಜೊತೆ ಒಪ್ಪಂದಕ್ಕೆ ಮುಂದಾಗಿದೆ. ಈಗಾಗಲೇ ಮೊದಲ ಸುತ್ತಿನ ಮಾತಕತೆ ನಡೆಸಿರುವ ಟಾಟಾ ಹಾಗೂ ಚೆರಿ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿದೆ. ಈ ಮೂಲಕ ಟಾಟಾ ಹಾಗೂ ಚೆರಿ ಸಹಭಾಗಿತ್ವದಲ್ಲಿ ಚೀನಾ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ದುಬಾರಿ ಸುಜುಕಿ ಸ್ವಿಫ್ಟ್ ಕಾರು ಬಿಡುಗಡೆ-ಬೆಲೆ ಎಷ್ಟು?

ಚಿನಾದಲ್ಲಿ ಟಾಟಾ ಮೋಟಾರ್ಸ್ ಮಾಲೀಕತ್ವದ ಲ್ಯಾಂಡ್ ರೋವರ್ ಹಾಗೂ ಚೆರಿ ಆಟೋಮೊಬೈಲ್ 2013ರಿಂದ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಭಾರತದಲ್ಲಿ ಚೆರಿ ಆಟೋಮೊಬೈಲ್ ವಿಸ್ತರಣೆಗೆ ಯೋಜನೆ ಹಾಕಿಕೊಂಡಿರುವ ಚೀನಾ ಕಂಪನಿ, ಟಾಟಾ ಸಹಭಾಗಿತ್ವದಲ್ಲಿ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. 

click me!