ಕೇವಲ 3,700 ಕಿ.ಮೀ ಪ್ರಯಾಣಸಿದ ಅಮಿತಾಬ್ ಬಚ್ಚನ್ ಪೊರ್ಶೆ ಕೆಮನ್ ಮಾರಾಟಕ್ಕೆ!

By Suvarna News  |  First Published Sep 7, 2020, 2:41 PM IST

ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಇತ್ತೀಚೆಗೆ ಹೊಚ್ಚ ಹೊಸ ಮರ್ಸಿಡೀಸ್ ಬೆಂಝ್ ಎಸ್ ಕ್ಲಾಸ್ ಕಾರು ಖರೀದಿಸಿದ್ದಾರೆ. ಬೆಂಟ್ಲಿ,  ಲೆಕ್ಸಸ್ ಸೇರಿದಂತೆ ಹಲವು ಐಷಾರಾಮಿ ಕಾರು ಹೊಂದಿರುವ ಅಮಿತಾಬ್ ಬಚ್ಚನ್ ತಮ್ಮ ಪೊರ್ಶೆ ಕೆಮನ್ ಕಾರು ಮರಾಟ ಮಾಡಲು ನಿರ್ಧರಿಸಿದ್ದಾರೆ. 3,700 ಕಿ.ಮೀ  ಓಡಿಸಿದ ಪೊರ್ಶೆ ಕೆಮನ್ ಕಾರಿನ ವಿವರ ಇಲ್ಲಿದೆ. 


ಮುಂಬೈ(ಸೆ.07): ಬಾಲಿವುಡ್ ಸೆಲೆಬ್ರೆಟಿಗಳು ಹೊಸ ಹೊಸ ಕಾರುಗಳನ್ನು ಖರೀದಿಸುತ್ತಾ, ತಮ್ಮಲ್ಲಿನ ಕಾರುಗಳನ್ನು ಮಾರಾಟ ಮಾಡುವುದು ಸಾಮಾನ್ಯ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇತ್ತೀಚಿಗೆ ಹೊಚ್ಚ ಹೊಸ ಮರ್ಸಡೀಸ್ ಬೆಂಝ್ ಎಸ್ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ತಮ್ಮ ಪೊರ್ಶೆ ಕೆಮನ್ ಕಾರು ಮಾರಾಟ ಮಾಡುತ್ತಿದ್ದಾರೆ.

ಅಮಿತಾಬ್ ಬಚ್ಚನ್ ಮನೆಗೆ ಹೊಸ ಅತಿಥಿ ಆಗಮನ; ಶುರುವಾಯ್ತು ಹೊಸ ಜೀವನ!

Latest Videos

undefined

ಅಮಿತಾಬ್ ಬಚ್ಚನ್ ಕೆಲ ತಿಂಗಳ ಹಿಂದೆ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಮಾರಾಟ ಮಾಡಿದ್ದರು. ಇದೀಗ ಪೊರ್ಶೆ ಕೆಮನ್ ಕಾರು ಮಾರಾಟ ಮಾಡುತ್ತಿದ್ದಾರೆ. ಅಮಿತಾಬ್ ಬಚ್ಚನ್ ಪೊರ್ಶೆ ಕೆಮನ್ ಕಾರನ್ನು 2006ರಲ್ಲಿ ಖರೀದಿಸಿದ್ದಾರೆ. ಇದರ ರಿಜಿಸ್ಟ್ರೇಶನ್ ನಂಬರ್ MH 01 YA 11. ಕಾರಿಗೆ 14 ವರ್ಷಗಳಾಗಿದ್ದರು. ಈಗಲೂ ಹೊಚ್ಚ ಹೊಸದಾಗಿದೆ.

ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!..

ಅಮಿತಾಬ್ ಬಚ್ಚನ್ ಕೆಲವೇ ಕೆಲವು ಸಂದರ್ಭದಲ್ಲಿ ಪೊರ್ಶ ಕೆಮನ್ ಕಾರು ಬಳಸಿದ್ದಾರೆ. ಆದರೆ ಪ್ರತಿ ದಿನ ತಮ್ಮ ಎಲ್ಲಾ ಕಾರುಗಳನ್ನು ಸಿಬ್ಬಂದಿಗಳು ಸ್ವಚ್ಚಗೊಳಿಸಿ,  ಸ್ಟಾರ್ಟ್ ಮಾಡಿ ಚಲಾಯಿಸುತ್ತಾರೆ. ಸರ್ವೀಸ್ ಸೇರಿದಂತೆ ಎಲ್ಲಾ ನಿರ್ವಹಣೆಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಮಾಡಿದ್ದಾರೆ. ಕಾರಿನಲ್ಲಿ ಯಾವುದೇ ಡೆಂಟ್ ಅಥವಾ ಸ್ಕ್ರಾಚ್ ಇಲ್ಲ.

ಅಮಿತಾಬ್ ಬಚ್ಚನ್ ಪೊರ್ಶೆ ಕೆಮನ್ ಕಾರು 3.4 ಲೀಟರ್ H-6 ಎಂಜಿನ್ ಹೊಂದಿದೆ. 295 PS  ಪವರ್ ಹಾಗೂ 340 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಕಾರಿನ ಮಾರಾಟದ ಬೆಲೆ ಬಹಿರಂಗ ಪಡಿಸಿಲ್ಲ.

ಅಮಿತಾಬ್ ಬಚ್ಚನ್ ಬಳಿ ಲ್ಯಾಂಡ್ ರೋವರ್ ಆಟೋಬಯೋಗ್ರಫಿ, ಲೆಕ್ಸಲ್ LX 570, ಲ್ಯಾಂಡ್ ಕ್ರೂಸರ್, ಮರ್ಸಿಡೀಸ್ ಬೆಂಝ್ ಎಸ್ ಕ್ಲಾಸ್, ಆಡಿ A8L , ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಮರ್ಸಡೀಸ್ ಬೆಂಝ್ ವಿ ಕ್ಲಾಸ್ ಸೇರಿದಂತೆ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ.

click me!