BMW ಹಾಗೂ ಮರ್ಸಡೀಸ್ ಬೆಂಜ್ ಒಪ್ಪಂದ ರದ್ದು; ಕಾರು ಉತ್ಪಾದನೆಗೆ ಬ್ರೇಕ್!

By Suvarna NewsFirst Published Jun 23, 2020, 7:59 PM IST
Highlights

ಡ್ರೈವರ್ ಲೆಸ್ ಕಾರು ತಯಾರಿಕೆ ಪ್ರಯತ್ನಗಳು ಹೆಚ್ಚಾಗುತ್ತಿದೆ. 2019ರಲ್ಲಿ ಈ ಕಾರು ತಯಾರಿಕೆಗೆ ಒಪ್ಪಂದ ಮಾಡಿಕೊಂಡಿದ್ದ BMW ಹಾಗೂ ಮರ್ಸಡೀಸ್ ಬೆಂಜ್ ಇದೀಗ ದಿಢೀರ್ ಯು ಟರ್ನ್ ತೆಗೆದುಕೊಂಡಿದೆ.

ಜರ್ಮನಿ(ಜೂ.23) BMW ಹಾಗೂ ಮರ್ಸಡೀಸ್ ಬೆಂಜ್ ಜಂಟಿಯಾಗಿ ಆಟೋನೊಮಸ್ ಕಾರು ಉತ್ಪಾದನೆ ಯೋಜನೆಯನ್ನು ಕೈಬಿಟ್ಟಿದೆ. ಜರ್ಮನಿಯ ಅತೀ ದೊಡ್ಡ ಲಕ್ಸುರಿ ಕಾರು ತಯಾರಕರಾದ BMW ಹಾಗೂ ಮರ್ಸಡೀಸ್ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಸದ್ಯಕ್ಕೆ ಡ್ರೈವರ್ ಇಲ್ಲದ ಸ್ವಾಯತ್ತ ಕಾರು ಉತ್ಪಾದನೆ ತಂತ್ರಜ್ಞಾನ ಅಭಿವೃದ್ಧಿ ಯೋಜನೆ ಕೈಬಿಡಲಾಗಿದೆ. ಭವಿಷ್ಯದಲ್ಲಿ ಮತ್ತೆ ಈ ಕುರಿತು ಚಿಂತಿಸಿದರೂ ಆಶ್ಚರ್ಯವಿಲ್ಲ ಎಂದಿದೆ.

10 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗ BMW!

ಈ ಪ್ರಕಟಣೆಯು ಇತರ ಕ್ಷೇತ್ರಗಳಲ್ಲಿನ BMW ಹಾಗೂ ಮರ್ಸಡೀಸ್ ಬೆಂಜ್ ಮೂಲ ಕಂಪನಿ ಡೈಮ್ಲರ್ ನಡುವಿನ ಸಹಕಾರದ ಮೇಲೆ ಪರಿಣಾಮ ಬೀರುವುದಿಲ್ಲ.  ಲೊಕೇಶನ್ ತಂತ್ರಜ್ಞಾನ ಅಭಿವೃದ್ದಿಗೆ 2015ರಲ್ಲಿ ಆಡಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಾರು ಹಂಚಿಕೆ, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸೇರಿದಂತೆ ಆಟೋಮೊಬೈಲ್ ಅಭಿವೃದ್ಧಿ ಕಾರ್ಯಗಳನ್ನು ಜಂಟಿಯಾಗಿ ಮಾಡಲಾಗಿದೆ. ಇದೇ ರೀತಿ ಆಟೋನೊಮಸ್ ಕಾರು ಕುರಿತು ಜಂಟಿಯಾಗಿ ಉತ್ಪಾಜನೆಗೆ ಮುಂದಾಗಿತ್ತು. ಆದರೆ ವರ್ಷಗಳ ಬಳಿಕ ಒಪ್ಪಂದ ರದ್ದು ಮಾಡಲಾಗಿದೆ. 

ಲಾಲು ಪ್ರಸಾದ್ ಕುಟುಂಬದ ಫಾರ್ಚುನರ್ ಕಾರು ಕಳವು; 6 ವರ್ಷದ ಬಳಿಕ ಸಿಕ್ಕಿತು ಸುಳಿವು!

BMW ಹಾಗೂ ಮರ್ಸಡೀಸ್ ಬೆಂಜ್ 2019ರಲ್ಲಿ ಒಪ್ಪಂದ ಸಹಿ ಹಾಕಿದ ಬಳಿಕ  ತಜ್ಞರ ಚರ್ಚೆ ನಡೆಸಲು, ತಂತ್ರಜ್ಞಾನದ ಮಾರ್ಗಸೂಚಿಗಳ ಬಗ್ಗೆ ಪೂರೈಕೆದಾರರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಇನ್ನು ಜಂಟಿ ಕಾರ್ಯಚರಣೆ ಸಾಧ್ಯವಾಗದ ಕಾರಣ ಒಪ್ಪಂದ ರದ್ದು ಮಾಡಲಾಗಿದೆ.

ಆಟೋನೊಮಸ್ ಕಾರು ಸದ್ಯದ ಪರಿಸ್ಥಿತಿಯಲ್ಲಿ ಅವಶ್ಯಕವಾಗಿದೆ. ಕೊರೋನಾ ವೈರಸ್‌ನಂತಹ ಭೀಕರ ವೈರಸ್‌ನಿಂದ ದೂರವಿರಲು ಡ್ರೈವರ್ ಲೆಸ್ ಕಾರುಗಳ ಸಹಕಾರಿಯಾಗಿದೆ. ಆದರೆ BMW ಹಾಗೂ ಮರ್ಸಡೀಸ್ ಬೆಂಜ್ ವ್ಯಾಪಕ ಪರಿಶೀಲನೆಯ ಬಳಿಕ  ಹಂಚಿಕೆಯ ತಂತ್ರಜ್ಞಾನ ವೇದಿಕೆಯನ್ನು ರಚಿಸುವಲ್ಲಿನ ವೆಚ್ಚ ಮತ್ತು ಪ್ರಸ್ತುತ ವ್ಯವಹಾರ ಮತ್ತು ಆರ್ಥಿಕ ಪರಿಸ್ಥಿತಿಗಳ ದೃಷ್ಟಿಯಿಂದ, ಸಹಕಾರವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು  ಸಾಧ್ಯವಾಗಿಲ್ಲ. ಹೀಗಾಗಿ ಒಪ್ಪಂದ ರದ್ದಾಗಿದೆ ಎಂದು BMW ಹಾಗೂ ಮರ್ಸಡೀಸ್ ಬೆಂಜ್ ಹೇಳಿದೆ.

click me!