ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಕಾರು ಮೊರೆ ಹೋದ ಉಪಮುಖ್ಯಮಂತ್ರಿ!

Published : Oct 28, 2019, 06:05 PM ISTUpdated : Oct 28, 2019, 06:09 PM IST
ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಕಾರು ಮೊರೆ ಹೋದ ಉಪಮುಖ್ಯಮಂತ್ರಿ!

ಸಾರಾಂಶ

ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಕಾರು ಬಳಕೆಗೆ ಒತ್ತಾಯ ಕೇಳಿ ಬರುತ್ತಿದೆ. ಇದೀಗ ಬಿಹಾರ ಉಪಮುಖ್ಯಮಂತ್ರಿ ಖುದ್ದು ಎಲೆಕ್ಟ್ರಿಕ್ ಕಾರು ಬಳಕೆ ಮಾಡೋ ಮೂಲಕ ಮಾದರಿಯಾಗಿದ್ದಾರೆ.   

ಪಾಟ್ನ(ಅ.28): ಮಾಲಿನ್ಯ ನಿಯಂತ್ರಣಕ್ಕೆ ಪ್ರಮುಖ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ ಸಚಿವರು, ರಾಜಕೀಯ ಮುಖಂಡರು ಮಾತ್ರ ಐಷಾರಾಮಿ ಡೀಸೆಲ್, ಪೆಟ್ರೋಲ್ ಕಾರಿನಲ್ಲೇ ಓಡಾಡುತ್ತಿದ್ದಾರೆ. ಆದರೆ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸ್ವತಃ ಎಲೆಕ್ಟ್ರಿಕ್ ಕಾರು ಉಪಯೋಗಿಸೋ ಮೂಲಕ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಸುಜುಕಿ-ಟೊಯೊಟಾ ಬಿಡುಗಡೆ ಮಾಡುತ್ತಿದೆ ನೂತನ ಎಲೆಕ್ಟ್ರಿಕ್ ಕಾರು!

ಮಾಲಿನ್ಯ ನಿಯಂತ್ರಣಕ್ಕೆ ಸುಶೀಲ್ ಕುಮಾರ್ ಮೋದಿ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿ ಉಪಯೋಗಿಸಿದ್ದಾರೆ. ಬಿಹಾರ ಸರ್ಕಾದ ಜಲಜೀವನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಶೀಲ್ ಟಿಗೋರ್ ಎಲೆಕ್ಟ್ರಿಕ್ ಕಾರಿನಲ್ಲಿ ಆಗಮಿಸಿದ್ದಾರೆ. ಈ ವೇಳೆ  ನಗರದಲ್ಲಿನ ಓಡಾಟಕ್ಕೆ ಎಲೆಕ್ಟ್ರಿಕ್ ಕಾರು ಉಪಯೋಗಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ: ಶೀಘ್ರದಲ್ಲೇ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು; 300KM ಮೈಲೇಜ್!

ಜುಲೈ ತಿಂಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲೆಕ್ಟ್ರಿಕ್ ಕಾರಿನ ಮೂಲಕ ಅಧಿವೇಶನಕ್ಕೆ ಆಗಮಿಸಿದ್ದರು. ರಾಜ್ಯದಲ್ಲಿ ಎಲೆಕ್ಟ್ರಿಕ್ ಕಾರು ಬಳಕೆ ಹೆಚ್ಚಿಸುವ ಸಲುವಾಗಿ ನಿತೀಶ್ ಈ ನಿರ್ಧಾರ ತೆಗೆದುಕೊಂಡಿದ್ದರು. ಶಬ್ಧ ರಹಿತ, ವಾಯು ಮಾಲಿನ್ಯ ರಹಿತ ಟಾಟಾ ಟಿಗೋರ್ ಕಾರು ಬಳಸುತ್ತಿರುವುದು ಸಂತಸ ತಂದಿದೆ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

 

ಕೇಂದ್ರ ಸರ್ಕಾರದ FAME II ಯೋಜನೆಯಿಂದ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆ  9.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ev ಕಾರಿನಲ್ಲಿ 3 ವೇರಿಯೆಂಟ್ ಲಭ್ಯವಿದೆ. ಟಿಗೋರ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 213 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ