ರಾಯಲ್ ಎನ್‌ಫೀಲ್ಡ್ ಕದಿಯುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಬಂಧನ!

Published : Nov 06, 2018, 02:26 PM IST
ರಾಯಲ್ ಎನ್‌ಫೀಲ್ಡ್ ಕದಿಯುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಬಂಧನ!

ಸಾರಾಂಶ

ಕಳ್ಳರು ಕೂಡ ಈಗ  ಚೂಸಿಯಾಗಿದ್ದಾರೆ. ಹೀಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಕದಿಯುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಬಂಧಿಸಲಾಗಿದೆ. ಬಂಧಿತರಿಂದ ಬರೋಬ್ಬರಿ 2.4 ಕೋಟಿ ಮೌಲ್ಯದ ಬೈಕ್‌ಗಳನ್ನ ವಶಪಡಸಿಕೊಳ್ಳಲಾಗಿದೆ. ಇಲ್ಲಿದೆ ಹೆಚ್ಚಿನ ವಿವರ

ಕೆ.ಆರ್.ಪುರ(ನ.06): ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದ ಕಖ್ಯಾತ ಕಳ್ಳರ ಗ್ಯಾಂದ್ ಬಂಧಿಸುವಲ್ಲಿ ವೈಟ್‌ಫೀಲ್ಡ್ ವಿಭಾಗದ ವಿಶೇಷ ತಂಡ ಯಶಸ್ವಿಯಾಗಿದೆ. ಬಂಧಿತ ಗ್ಯಾಂಗ್‌ನಿಂದ 2.4 ಕೋಟಿ ರೂಪಾಯಿ ಮೌಲ್ಯದ ಒಟ್ಟು 15 ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ನಗರದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ದೂರುಗಳು ಹೆಚ್ಚಾಗಿತ್ತು. ಪ್ರತಿ ದಿನ ನಗರದ ವಿವಿದೆಡೆ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಪ್ರಕರಣ ದಾಖಲಾಗಿತ್ತು. ಹೀಗಾಗಿ ಈ ಕಳ್ಳರ ಗ್ಯಾಂಗ್ ಹಿಡಿಯಲು ವಿಶೇಷ ತಂಡವನ್ನ ರಚಿಸಲಾಗಿತ್ತು.

ಹಲವು ದಿನಗಳಿಂದ ಮಾಹಿತಿ ಕಲೆ ಹಾಕಿದ ವೈಟ್‌ಪೀಲ್ಡ್ ವಿಭಾಗದ ವಿಶೇಷ ತಂಡ, ರಾಯಲ್ ಎನ್‌ಫೀಲ್ಡ್ ಕಳ್ಳರ ಗ್ಯಾಂಗ್ ಹಿಡಿಯಲು ಬಲೆ ಬೀಸಿತ್ತು. ಈ ಮೂಲಕ ವಿಶೇಷ ತಂಡ 6 ಮಂದಿ ರಾಯಲ್ ಎನ್‌ಫೀಲ್ಡ್ ಕಳ್ಳರ ಗ್ಯಾಂಗ್ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಯಲ್ಲಪ್ಪ ಲವರಾಜು, ರವಿತೇಜ, ಯುವತೇಜ, ಧರ್ಮತೇಜ ಮತ್ತು ಯರ್ರಿ ರೆಡ್ಡಿ ಬಂದಿತ ಅರೋಪಿಗಳು. ಬಂದಿತರ ವಿರುದ್ದ ಕೆ.ಆರ್.ಪುರ, ರಾಮಮೂರ್ತಿನಗರ, ಸದಾಶಿವನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಪತ್ತೆಯಾಗಿದೆ.  
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ