ಭಾರತ ಅತೀ ದೊಡ್ಡ ಮೋಟಾರ್ ಬೈಕ್ ಕಂಪೆನಿ ಬಜಾಜ್ ಇದೀಗ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ. ಇದಕ್ಕಾಗಿ ತಯಾರಿ ಆರಂಭಿಸಿದೆ. ಬಜಾಜ್ ಎಲೆಕ್ಟ್ರಿಕ್ ಬೈಕ್ ಕುರಿತು ಕಂಪೆನಿ ನಿರ್ದೇಶಕ ಹೇಳೋದೇನು? ಇಲ್ಲಿದೆ ವಿವರ.
ಮುಂಬೈ(ಡಿ.30): ಭಾರತದ ಬೈಕ್ ಮಾರುಕಟ್ಟೆಯಲ್ಲಿ ಆಕರ್ಷಕ, ಕಡಿಮೆ ಬೆಲೆ ಮೂಲಕ ಬಜಾಜ್ ಜನಪ್ರಿಯವಾಗಿದೆ. ಇದೀಗ ಬಜಾಜ್ ಆಟೋ ಎಲೆಕ್ಟ್ರಿಕಲ್ ಬೈಕ್‌ನತ್ತ ಚಿತ್ತ ಹರಿಸಿದೆ. 2020ರ ವೇಳೆ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಸಿದ್ಧತೆ ಆರಂಭಿಸಿದೆ.
ಇದನ್ನೂ ಓದಿ: 2019ರ ಸುಜುಕಿ ಹಯಬುಸಾ ಸೂಪರ್ ಬೈಕ್ ಬಿಡುಗಡೆ- ಬೆಲೆ 13.74 ಲಕ್ಷ!
undefined
ಭಾರತ ಎಲೆಕ್ಟ್ರಿಕ್ ವಾಹನದತ್ತ ಗಮನ ಕೇಂದ್ರಿಕರಿಸಿದೆ. 2019ರಲ್ಲಿ ಎಲೆಕ್ಟ್ರಿಕ್ ಕಾರುಗಳು, ಸ್ಕೂಟರ್‌ಗಳು ಬಿಡುಗಡೆಯಾಗುತ್ತಿದೆ. ಇದೀಗ ಬಜಾಜ್ ಕೂಡ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.
ಇದನ್ನೂ ಓದಿ: ಬೆನೆಲ್ಲಿ TRK 502, TRK 502 X ಬಿಡುಗಡೆ ದಿನಾಂಕ ಬಹಿರಂಗ!
70 ದೇಶಗಳಲ್ಲಿ ಬಜಾಜ್ ಬೈಕ್ ಮಾರಾಟವಾಗುತ್ತಿದೆ. 2018ರಲ್ಲಿ ಬಜಾಜ್ ಬೈಕ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದೀಗ ಬಜಾಜ್ ಎಲೆಕ್ಟ್ರಿಕ್ ಬೈಕ್ ಕೂಡ ಇತರ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ರಾಜೀವ್ ಹೇಳಿದರು.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: