ಬಜಾಜ್ ಪಲ್ಸಾರ್ NS125 ಬೈಕ್ ಅನಾವರಣ-ಬೆಲೆ ಎಷ್ಟು?

Published : Oct 14, 2018, 07:00 PM ISTUpdated : Oct 14, 2018, 07:13 PM IST
ಬಜಾಜ್ ಪಲ್ಸಾರ್ NS125 ಬೈಕ್ ಅನಾವರಣ-ಬೆಲೆ ಎಷ್ಟು?

ಸಾರಾಂಶ

ಬಜಾಜ್ ಆಟೋ ಕಂಪನಿಯಿಂದ ನೂತನ ಬೈಕ್ ಅನಾವರಣ ಮಾಡಲಾಗಿದೆ. ತಮ್ಮ ಪ್ರಸಿದ್ದ ಬಜಾಜ್ ಪಲ್ಸಾರ್ ಬೈಕ್ ಮತ್ತೊಂದು ಅವತಾರದಲ್ಲಿ ರಸ್ತೆಗಿಳಿಯುತ್ತಿದೆ. ನೂತನ ಬಜಾಜ್ ಪಲ್ಸಾರ್ NS125 ಬೈಕ್ ಗ್ರಾಹಕರನ್ನು ಮೋಡಿ ಮಾಡಲು ಸಜ್ಜಾಗಿದೆ. ನೂತನ ಬಜಾಜ್ ಪಲ್ಸಾರ್ NS125 ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ.  

ಮುಂಬೈ(ಅ.14): ಬಜಾಜ್ ಮೋಟಾರ್ ಕಂಪನಿಯ ಪಲ್ಸಾರ್ ಬೈಕ್ ಭಾರತದಲ್ಲಿ ಗರಿಷ್ಠ ಮಾರಾಟವಾದ ದಾಖಲೆ ಬರೆದಿದೆ.  ಇದೀಗ ಬಜಾಜ್ ಕಂಪೆನಿ ನೂತನ ಬಜಾಜ್ ಪಲ್ಸಾರ್ NS125 ಬೈಕ್ ಅನಾವರಣ ಮಾಡಿದೆ. ನೂತನ ಬಜಾಜ್ ಪಲ್ಸಾರ್ NS125 ಫ್ಯೂಯೆಲ್ ಇಂಜೆಕ್ಟ್ ಹಾಗೂ ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್(CBS) ತಂತ್ರಜ್ಞಾನ ಹೊಂದಿದೆ. 

ವಿನ್ಯಾಸದಲ್ಲಿ ಈ ಬೈಕ್ ಈ ಹಿಂದೆ ಬಿಡುಗಡೆಯಾಗಿದ್ದ ಬಜಾಜ್ 135LS ಬೈಕ್‌ಗೆ ಹೋಲಿಕೆ ಇದೆ.  ಈಗಾಗಲೇ  ಪೊಲೆಂಡ್‌ನಲ್ಲಿ ಈ ಬಜಾಜ್ NS125  ಬಿಡುಗಡೆಯಾಗಿದೆ. ಪೊಲೆಂಡ್‌ನಲ್ಲಿ ಇದರ ಬೆಲೆ PLN 7,999(1.59 ಲಕ್ಷ ರೂಪಾಯಿ). ಆದರೆ ಭಾರತದಲ್ಲಿ ಇದರ ಬೆಲೆ 62,528 ರೂಪಾಯಿ(ಮುಂಬೈ ಎಕ್ಸ್ ಶೋ ರೂಂ).

ನೂತನ ಬೈಕ್ ಸಿಂಗಲ್ ಸಿಲಿಂಡರ್, 4 ವಾಲ್ವ್, ಫ್ಯೂಯೆಲ್ ಇಂಜೆಕ್ಟ್, ಎರ್ ಕೂಲ್‌ಡ್, 124.4 ಸಿಸಿ ಇಂಜಿನ್ ಹೊಂದಿದೆ. ಇನ್ನು ಟೆಲೆಸ್ಕೋಪಿಕ್ ಫೋರ್ಕ್ ಸಸ್ಪೆಶನ್ ಹೊಂದಿದೆ. ಬೈಕ್ ತೂಕ 126.5 ಕೆಜಿ. 2019ರ ಆರಂಭದಲ್ಲಿ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ