ಆಡಿ ಕಾರು ಸಂಸ್ಥೆಗೆ 671 ಕೋಟಿ ರೂಪಾಯಿ ದಂಡ!

By Web Desk  |  First Published Oct 17, 2018, 12:09 PM IST

ದುಬಾರಿ ಹಾಗೂ ಲಕ್ಸುರಿ ಕಾರು ತಯಾರಿ ಸಂಸ್ಥೆ ಆಡಿ ಮೇಲೆ ಬರೋಬ್ಬರಿ 671 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟಕ್ಕೂ ಆಡಿ ಸಂಸ್ಥೆಗೆ ದಂಡ  ವಿಧಿಸಿದ್ದೇಕೆ? ಇಲ್ಲಿದೆ ಕಾರಣ.
 


ಜರ್ಮನಿ(ಅ.17): ದುಬಾರಿ ಕಾರು ತಯಾರಿಕಾ ಸಂಸ್ಥೆ ಆಡಿಗೆ ಇದೀಗ ಬಹು ದೊಡ್ಡ ಹೊಡೆತ ಬಿದ್ದಿದೆ. ಮಾಲಿನ್ಯ ನಿಯಂತ್ರಣಕ್ಕೆ(ಎಮಿಶನ್) ವಿಫಲವಾಗಿರುವ ಆಡಿ ಸಂಸ್ಥೆ ವಿರುದ್ಧ ಇದೀಗ ತೀರ್ಪು ಹೊರ ಬಿದ್ದಿದೆ. ಬರೋಬ್ಬರಿ 671 ಕೋಟಿ ರೂಪಾಯಿ ದಂಡ ಪಾವತಿಸಲು ಸೂಚಿಸಿದೆ.

ಆಡಿ ಕಾರು ಸಂಸ್ಥೆಯ 5 ಸಿಲಿಂಡರ್ ಹಾಗೂ 8 ಸಿಲಿಂಡರ್ ಡೀಸೆಲ್ ಇಂಜಿನ್ ಕಾರಿನಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ದೂರು ದಾಖಲಾಗಿತ್ತು. ಇದೀಗ ಹೊರಬಿದ್ದಿರುವ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಆಡಿ ಹಿಂದೇಟು ಹಾಕಿದೆ. ಇಷ್ಟೇ ಅಲ್ಲ ದಂಡ ಪಾವತಿಸುವುದಾಗಿ ಹೇಳಿದೆ.

Latest Videos

ಮೂಲ ಕಂಪೆನಿ ಫೋಕ್ಸ್‌ವ್ಯಾಗನ್ ಎಚ್ಚಕೆಯನ್ನ ಕಡೆಗಣಿಸಿದ ಆಡಿ ಕಂಪೆನಿ ದಂಡ ಪಾವತಿಸಲು ಒಪ್ಪಿಕೊಂಡಿದೆ. ದಂಡ  ಪಾವತಿಸಿವುದರಿಂದ ವಾರ್ಷಿಕ ಆದಾಯದ ಮೇಲೆ ಭಾರಿ ಹೊಡತೆ ಬೀಳಲಿದೆ ಎಂದು ಫೋಕ್ಸ್‌ವ್ಯಾಗನ್ ಎಚ್ಚರಿಸಿತ್ತು. 
 

click me!