ರೆನಾಲ್ಟ್ ಕಂಪನಿಯ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಕ್ವಿಡ್ ಕಾರು ಹೊಸ ಅತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕೇಂದ್ರ ಸರ್ಕಾರ ಸುರಕ್ಷತಾ ನಿಯಮಕ್ಕೆ ಅನುಗುಣವಾಗಿ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಕ್ವಿಡ್ ಬಿಡುಗಡೆಯಾಗಿದೆ. ಇಲ್ಲಿದೆ ನೂತನ ಕ್ವಿಡ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಮಾ.17): ಕೇಂದ್ರ ಸರ್ಕಾರದ ನೂತನ ನಿಯಮದ ಪ್ರಕಾರ ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನು ಮಾರಾಟ ಮಾಡುವಂತಿಲ್ಲ. ಶೀಘ್ರದಲ್ಲೇ ಈ ನಿಯಮ ಜಾರಿಯಾಗುತ್ತಿದೆ. ಹೀಗಾಗಿ ಎಲ್ಲಾ ಮೋಟಾರು ವಾಹನಗಳು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದೀಗ ರೆನಾಲ್ಟ್ ಕ್ವಿಡ್ ಗರಿಷ್ಠ ಸುರಕ್ಷತೆಯ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದೆ.
undefined
ಇದನ್ನೂ ಓದಿ: ಭಾರತಕ್ಕೆ ಕಾಲಿಡುತ್ತಿದೆ ಫ್ರೆಂಚ್ SUV ಕಾರು -ಟಾಟಾಗೆ ಪೈಪೋಟಿ!
ರೆನಾಲ್ಟ್ ಕ್ವಿಡ್ RxL ಕಾರು ಹಲವು ವಿಶೇಷತೆ ಒಳಗೊಂಡಿದೆ. ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್), ಡ್ರೈವರ್ ಸೈಡ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರ್ಟ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಇದು ಎಲ್ಲಾ ವೇರಿಯೆಂಟ್ ಕ್ವಿಡ್ ಕಾರುಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್, ಮಹೀಂದ್ರ XUV500- ಮೊದಲ ಸ್ಥಾನ ಯಾರಿಗೆ?
ನೂತನ ಕ್ವಿಡ್ ಕಾರಿನ ಬೆಲೆ 3,35,900(ಎಕ್ಸ್ ಶೋ ರೂಂ).0.8 ಲೀಟರ್ ಹೊಂದಿದೆ. ಆದರೆ ಸದ್ಯ RxL ಕಾರಿನಲ್ಲಿ 1.0 ಲೀಟರ್ ಎಂಜಿನ್ ಲಭ್ಯವಿಲ್ಲ. ನೂತನ ಕ್ವಿಡ್ 54 Bhp ಪವರ್(@ 5,678 rpm)ಹಾಗೂ 72 Nm(@4,386 rpm) ಪೀಕ್ ಟಾರ್ಕ್ ಉತ್ಪಾದಿಸಲಿದೆ.