ಈ ರಾಶಿ ಮಹಿಳೆಯರಿಗೆ ಶುಭವಾಗುವುದು : ವಾರ ಭವಿಷ್ಯ

By Web Desk  |  First Published Jul 28, 2019, 7:24 AM IST

ಈ ವಾರ ಹೇಗಿದೆ ನಿಮ್ಮ ಭವಿಷ್ಯ? ರಾಶಿಗಳ ಫಲಾ ಫಲ ಹೇಗಿದೆ? 


ಈ ರಾಶಿ ಮಹಿಳೆಯರಿಗೆ ಶುಭವಾಗುವುದು : ವಾರ ಭವಿಷ್ಯ

ಮೇಷ
ಬಿಡುವಿನಲ್ಲಿ ಹಾಳು ಹರಟೆ ಹೊಡೆಯದೆ, ಸೂಕ್ತ
ಕೆಲಸಗಳನ್ನು, ಕೈ ಕೆಲಸಗಳನ್ನು, ಅಥವಾ
ಯಾವುದೇ ಉತ್ತಮ ಕಾರ್ಯಗಳನ್ನು ಮಾಡಿ.
ನನ್ನಿಂದಾಗದು ಎಂಬ ಮನೋಭಾವ ಬಿಟ್ಟು ಶ್ರಮವಹಿಸಿ
ಮುಂದೆ ಸಾಗಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ
ಕೆಲಸಕ್ಕೆ ಕೈ ಹಾಕುತ್ತಿರುವ ಮಹಿಳೆಯರಿಗೆ ಶುಭವಾಗಲಿದೆ.

Tap to resize

Latest Videos

undefined

ವೃಷಭ
ಯಾವುದೇ ಒತ್ತಡಕ್ಕೆ ಮಣಿದು ನಿಮ್ಮನ್ನು ನೀವು
ನಾಶ ಮಾಡಿಕೊಳ್ಳಬೇಡಿ. ಮನಸ್ಸಿಟ್ಟು, ಮನಸಾರೆ
ಮುಂದೆ ಸಾಗಿದರೆ ನಿಮಗೇ ಒಳಿತು. ಯಾವುದೇ
ಕಾರಣಕ್ಕೂ ಮೂರನೆಯವರ ಮಾತಿಕೆ ಕಿವಿಗೊಡದಿರಿ.
ಆಮೀಷಕ್ಕೆ ಒಳಗಾಗಬೇಡಿ. ಹಣಕಾಸಿನ ವಿಚಾರದಲ್ಲಿ
ಎಚ್ಚರಿಕೆಯಿಂದಿರಿ. ಒಳ್ಳೆಯ ನಿರ್ಧಾರ ನಿಮ್ಮದಾಗಲಿ.

ಮಿಥುನ
ತವರು ಬಿಟ್ಟು ಬರುವಾಗ ಎಲ್ಲಾ
ಹೆಣ್ಣುಮಕ್ಕಳಿಗೂ ಮನಸ್ಸು ಭಾರವಾಗುವುದು
ಸಹಜ. ಆದರೆ ಜೀವನ ಮುಂದೆ ಸಾಗಬೇಕಾದರೆ
ಬದಲಾವಣೆ ಅಗತ್ಯ. ದೂರದ ಪ್ರಯಾಣ ಸಾಧ್ಯತೆ.
ಆರೋಗ್ಯದಲ್ಲಿ ಏರುಪೇರಾಗುವುದರಿಂದ ಎಚ್ಚರಿಕೆ
ಯಿಂದಿರಿ. ಮಕ್ಕಳ ಆಹಾರದ ಬಗ್ಗೆಯೂ ಎಚ್ಚರಿಕೆ ಇರಲಿ.

ಕಟಕ
ನಿಮ್ಮನ್ನು ತುಳಿಯುವವರ ಬಗ್ಗೆ ಹೆಚ್ಚು ಚಿಂತೆ
ಬೇಡ. ಏಕೆಂದರೆ ಅವರ ಬುದ್ದಿ ಮಟ್ಟವೂ
ಕಾಲಿನ ಧೂಳಿಗೆ ಸಮನಾಗಿರುತ್ತದೆ. ಪ್ರಗತಿಯತ್ತ
ಮನಸ್ಸು ಆಲೋಚಿಸಲಿ. ಆತ್ಮೀಯರೊಂದಿಗೆ ವ್ಯವಹಾರಕ್ಕೆ
ಮುಂದಾಗುವಲ್ಲಿ ಅಗತ್ಯವಾಗಿ ಮುನ್ನೆಚ್ಚರಿಕೆ ಮಾಡಿಕೊ
ಳ್ಳುವುದು ಸೂಕ್ತ. ಹೊಸ ಕೆಲಸಕ್ಕೆ ಒಳ್ಳೆಯ ಸಮಯ. 

ಸಿಂಹ
ಪುಸ್ತಕ ಓದುವ ಹುಚ್ಚು ಇನ್ನಷ್ಟು ಹೆಚ್ಚಲಿದೆ.
ಸ್ನೇಹಿತನನ್ನು ಈ ಮೂಲಕ ಕಾಣಲು ಇಚ್ಛಿಸುವ
ನೀವು, ನಿಮ್ಮ ಮನಸ್ಸಿನ ನೋವು, ತಳಮಳ,
ಗೊಂದಲಗಳನ್ನು ಕ್ರಮೇಣ ದೂರಾಗಲಿದೆ. ಮಕ್ಕಳ
ವಿಚಾರದಲ್ಲಿ ಕೋಪಗೊಳ್ಳುವುದು ಬೇಡ. ಆದಷ್ಟು ಧ್ಯಾನ
ಮಾಡಿ. ಬಂಧುಗಳ ಆಗಮನ ಸಾಧ್ಯತೆ

ಕನ್ಯಾ
ನಿಮ್ಮ ಯೋಚನೆಗಳು ಬೇರೆಯವರಿಗೆ
ಮನದಟ್ಟಾಗಬಹುದು, ಹಾಗಂತ ಅವರಿಂದ
ಫಲ ನಿರೀಕ್ಷಿಸುವಂತಿಲ್ಲ. ಕೆಲ ವಿಚಾರಗಳಿಗೆ
ನಿಮಗೆ ಈಗ ಪರೀಕ್ಷೆಗಳು ಎದುರಾಗಲಿದ್ದು, ಅದನ್ನು
ಹೇಗೆ ನಿಭಾಯಿಸುವಿರಿ ಎಂಬುದರ ಮೇಲೆ ರಿಸಲ್ಟ್
ಇರುತ್ತೆ. ಮಕ್ಕಳಿಂದ ಪೋಷಕರಿಗೆ ಸಂತಸ ತರಲಿ

ತುಲಾ
ನಿಮ್ಮ ಶಕ್ತಿ, ಉತ್ಸಾಹ ಇನ್ನೂ ಹೆಚ್ಚಲಿದೆ.
ನಾಯಕನ ಸ್ಥಾನಕ್ಕೇರುವ ಸಾಧ್ಯತೆ. ಹೊಸ
ಕೆಲಸಕ್ಕೆ ಇದು ಸಕಾಲವಲ್ಲ. ಅದರಲ್ಲೂ
ವ್ಯವಹಾರದ ವಿಚಾರಗಳಿಗೆ ಕೈ ಹಾಕಲೇಬೇಡಿ. ಕಷ್ಟದಿಂದ
ಸತತ ಪ್ರಯತ್ನದಿಂದ ಸ್ವಲ್ಪ ಮಟ್ಟಿಗೆ ಹಣ ಉಳಿತಾಯ.
ವಾರಂತ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಕಾಣಲಿದ್ದೀರಿ.

ವೃಶ್ಚಿಕ
ಪ್ರೇಮ ನಿವೇದನೆಗೆ ಈವಾರ ತಕ್ಕುದಲ್ಲ.
ಏಳುಬೀಳುಗಳು ಈ ವಾರ ಹೆಚ್ಚಿದ್ದು, ಶತ್ರಗಳ
ಹತ್ತಿರ ಸುಳಿಯಲೇಬೇಡಿ. ಹೊಸ ಸ್ನೇಹಿತರ
ಪರಿಚಯದಿಂದ ಸಂತೋಷ ಇರಲಿದ್ದು, ನಿಮ್ಮ
ನಡುವೇಯೇ ಸ್ನೇಹಿತರಂತಿರುವ ಶತ್ರುಗಳ ಬಗ್ಗೆ ಎಚ್ಚರ
ಅಗತ್ಯ. ಹೊಸ ಕೆಲಸಕ್ಕೆ ಉತ್ತಮ ವಾರ.

ಧನಸ್ಸು
ಸಿಟ್ಟು, ಬಡಿತದಿಂದ ಎಲ್ಲವೂ
ಸರಿಹೋಗುವುದಿಲ್ಲ. ಪ್ರೀತಿಯಿಂದ ಕೆಲ
ಸಮಸ್ಯೆಗಳನ್ನು ಸರಿಪಡಿಸಿದರೆ ಅದು
ಕಂಡಿತವಾಗಿಯೂ ಸರಿಹೋಗುತ್ತದೆ. ದೂರ
ಪ್ರಯಾಣದಿಂದ ಆಯಾಸ. ಆರೋಗ್ಯದಲ್ಲಿ ಏರುಪೇರು.

ಮಕರ
ಬದುಕಿನ ಸೂತ್ರಗಳು ನಾವಂದುಕೊಂಡಂತೆ
ನಡೆಯುವುದಿಲ್ಲ. ಕ್ಷಣವೂ ಬದಲಾವಣೆಗಳು
ಕಾಣುತ್ತವೆ. ಬದಲಾವಣೆ ಎನ್ನುವುದೇ ಜಗದ
ನಿಯಮ ಅಲ್ಲವೇ. ಹಾಗಾಗಿ ಕಾಲ ಬಂದಂತೆ ಅದಕ್ಕೆ
ತಕ್ಕಂತೆ ಸರಿ ನಿರ್ಧಾರದೊಂದಿಗೆ ಮುಂದೆ ಸಾಗಿ. 

ಕುಂಭ
ಇಷ್ಟು ದಿನದ ಪ್ರಯತ್ನಕ್ಕೆ ಉತ್ತಮ ರಿಸಲ್ಟ್
ಪಡೆದಿದ್ದೀರಿ. ಇನ್ನು ಮುಂದೆ ಬದುಕಿನಲ್ಲಿ
ಬದಲಾವಣೆಯ ಪರ್ವ ಹರಿಯಲಿದೆ.
ಅವಕಾಶಗಳು ಇನ್ನೂ ಹೆಚ್ಚಲಿದ್ದು ಆಶಾವಾದಿಗಳಾಗಿರಿ.
ಉತ್ತಮ ರಿಸಲ್ಟ್‌ನಿಂದ ಹಿಗ್ಗದೆ, ಇದೇ ಪರಿಶ್ರಮವನ್ನು
ಮುಂದುವರಿಸಿದರೆ ಇನ್ನೂ ಉತ್ತಮ ಸ್ಥಾನಕ್ಕೇರಬಹುದು.

ಮೀನ
ದೂರಾದವರನ್ನು ದೂರ ಇರಲು ಬಿಟ್ಟುಬಿಡಿ.
ಅದನ್ನು ಸರಿ ಪಡಿಸುವುದಕ್ಕೆ ಮುಂದಾಗದಿರಿ.
ಇದರಿಂದ ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗ
ಬಹುದು. ನಿಮ್ಮ ಸ್ಥಾನದ ಬಗ್ಗೆ ಅವರಿಗೆ ಅರಿವಾದಾಗ
ಅವರೇ ನಿಮ್ಮ ಬಳಿ ಬರುತ್ತಾರೆ. ಸಿಹಿ ಸುದ್ದಿ ಕೇಳುವಿರಿ.

click me!