ಕಟಕದಲ್ಲಿ ಸೂರ್ಯ ಸಂಚಾರ; ಈ 5 ರಾಶಿಗಳ ಹಣೆಬರಹವೇ ಬದಲು..!

Published : Jul 23, 2023, 01:13 PM IST
ಕಟಕದಲ್ಲಿ ಸೂರ್ಯ ಸಂಚಾರ; ಈ 5 ರಾಶಿಗಳ ಹಣೆಬರಹವೇ ಬದಲು..!

ಸಾರಾಂಶ

ಪ್ರತಿಯೊಂದು ಗ್ರಹಗಳ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಜನರ ಬದುಕಿನಲ್ಲಿ ಬದಲಾವಣೆಗಳು ಆಗುತ್ತವೆ. ಅದರಂತೆ ಇದೀಗ ಸೂರ್ಯನು ಜುಲೈ 17 ರಿಂದ ಕಟಕ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶಗಳು ಸಿಗಲಿವೆ. ಈ ಕುರಿತು ಇಲ್ಲಿದೆ ಮಾಹಿತಿ.

ಪ್ರತಿಯೊಂದು ಗ್ರಹಗಳ ಸಂಚಾರ (Planetary movement) ವು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಜನರ ಬದುಕಿನಲ್ಲಿ ಬದಲಾವಣೆಗಳು ಆಗುತ್ತವೆ. ಅದರಂತೆ ಇದೀಗ ಸೂರ್ಯನು ಜುಲೈ 17 ರಿಂದ ಕಟಕ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಕೆಲವು ರಾಶಿಗಳಿಗೆ ಉತ್ತಮ ಫಲಿತಾಂಶಗಳು ಸಿಗಲಿವೆ. ಈ ಕುರಿತು ಇಲ್ಲಿದೆ ಮಾಹಿತಿ.

ಜ್ಯೋತಿಷ್ಯ (Astrology) ದಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನವಿದೆ. ಇದೀಗ ಸೂರ್ಯನು ಕಟಕ ರಾಶಿಯಲ್ಲಿ ಇದ್ದಾನೆ. ಇದರಿಂದ ಯಾವ ರಾಶಿ ಚಕ್ರಗಳಿಗೆ ಒಳ್ಳೆಯದು ಎಂಬ ಡೀಟೇಲ್ಸ್ ಇಲ್ಲಿದೆ.

ಮೇಷ ರಾಶಿ (Aries) 

ಈ ಸಮಯವು ನಿಮಗೆ ತುಂಬಾ ಲಾಭದಾಯಕವಾಗಿದೆ. ಈ ಸಮಯದಲ್ಲಿ ನಿಮ್ಮ ಗೌರವ (respect) ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರೆಯುತ್ತವೆ. ಆರೋಗ್ಯ  (health )ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ. ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ.

ವೃಷಭ ರಾಶಿ (Taurus) 

ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಭೂಮಿ ಅಥವಾ ವಾಹನ (Vehicle )ವನ್ನು ಖರೀದಿಸಬಹುದು. ಭೂಮಿಯ ಮೇಲಿನ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ಧಾರ್ಮಿಕ ಕಾರ್ಯಗಳ ಭಾಗವಾಗಲಿದೆ. ಪಾಲುದಾರರ ಸಲಹೆಯಿಂದ ಹಣದ ಲಾಭವನ್ನು ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

ಶನಿ ಸಾಡೇಸಾತಿಯ 3 ಹಂತಗಳಲ್ಲಿ ಈ ತಪ್ಪು ಮಾಡಬೇಡಿ; ಇದರಿಂದ ನರಕಯಾತನೆ ತಪ್ಪಿದ್ದಲ್ಲ...!

 

ಮಿಥುನ ರಾಶಿ (Gemini) 

ಈ ಸಮಯವು ನಿಮಗೆ ಸಂತೋಷವನ್ನು ತರುತ್ತದೆ. ಈ ಸಮಯದಲ್ಲಿ ಒಡಹುಟ್ಟಿದವರೊಂದಿಗೆ ಸಂಬಂಧವು ಬಲವಾಗಿರುತ್ತದೆ. ಕಷ್ಟಗಳನ್ನು ಚೆನ್ನಾಗಿ ಎದುರಿಸುವಿರಿ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಕುಟುಂಬ (family) ದೊಂದಿಗೆ ಉತ್ತಮ ಸಮಯ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು.

ವೃಶ್ಚಿಕ ರಾಶಿ (Scorpio) 

ಈ ಸಮಯ ನಿಮಗೆ ಲಾಭದಾಯಕವಾಗಿರುತ್ತದೆ. ಕ್ಷೇತ್ರದಲ್ಲಿ ಉನ್ನತ ಸಾಧನೆ (achievement) ಮಾಡುವಿರಿ. ಆದಾಯ ಹೆಚ್ಚಲಿದೆ. ಸೌಕರ್ಯಗಳು ಹೆಚ್ಚಾಗುತ್ತದೆ. ಮತ್ತು ಪ್ರವಾಸ (trip) ಕ್ಕೆ ಹೋಗುವ ಯೋಜನೆಯನ್ನು ಮಾಡಬಹುದು. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ.

ಧನು ರಾಶಿ (Sagittarius) 

ಈ ಸಮಯವು ನಿಮಗೆ ಲಾಭದಾಯಕ (Profitable) ವೆಂದು ಸಾಬೀತು ಪಡಿಸುತ್ತದೆ. ಈ ಸಮಯದಲ್ಲಿ ನೀವು ರಹಸ್ಯ  (secret) ಶತ್ರುಗಳಿಂದ ಮುಕ್ತರಾಗುತ್ತೀರಿ, ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು ಒಬ್ಬರೇ ಶ್ರಮಿಸಬೇಕಾಗಬಹುದು. ಆದರೆ ಯಶಸ್ಸು ಸಾಧಿಸಲಾಗುತ್ತದೆ. ಸಂಗಾತಿ (wife) ಯೊಂದಿಗೆ ಸಮಯ ಉತ್ತಮವಾಗಿರುತ್ತದೆ. ಧನ ಲಾಭ (money gain) ಇರುತ್ತದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.

ತಿರುಪತಿ ಭಕ್ತರಿಗೆ ಹ್ಯಾಪಿ ನ್ಯೂಸ್; ಮೂರು ತಿಂಗಳು ಸಿಗಲಿವೆ 300 ರೂ.ನ ವಿಶೇಷ ದರ್ಶನ ಟೋಕನ್'ಗಳು..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಎರಡು ಶಕ್ತಿಶಾಲಿ ರಾಜಯೋಗಗಳೊಂದಿಗೆ ನಾಳೆಯಿಂದ ಈ ಆರು ರಾಶಿ ಮುಟ್ಟಿದ್ದೆಲ್ಲವೂ ಚಿನ್ನ
New Year Mars Transit: ಮೀನ ರಾಶಿಗೆ ಮಂಗಳನ ಪ್ರವೇಶ: ಐದು ರಾಶಿಗೆ ಭಾಗ್ಯೋದಯ- ಆಸೆ ಈಡೇರುವ ಕಾಲ