ಈ 3 ವಸ್ತು ಪರ್ಸ್​ನಲ್ಲಿದ್ದರೆ ಹಣದ ಹರಿವಿನ ಜೊತೆ ಸಕ್ಸಸ್​ ಸದಾ ಜತೆಯಲ್ಲಿರತ್ತೆ: ಫೆಂಗ್​ಶೂಯಿ ಟಿಪ್ಸ್​ ಕೇಳಿ

Published : Sep 10, 2026, 10:23 PM IST
Feng Shui tips

ಸಾರಾಂಶ

ಪ್ರಾಚೀನ ಚೀನೀ ವಾಸ್ತು ಪದ್ಧತಿಯಾದ ಫೆಂಗ್ ಶೂಯಿ ಪ್ರಕಾರ, ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ಮೂರು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಏಳು ನಾಣ್ಯಗಳು, ಸ್ವಲ್ಪ ಉಪ್ಪು ಮತ್ತು ಏಳು ಅಕ್ಕಿ ಕಾಳುಗಳನ್ನು ನಿಮ್ಮ ಬಳಿ ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿ ದೂರವಾಗಿ, ಆರ್ಥಿಕ ಸಮೃದ್ಧಿ ಮತ್ತು ಉತ್ತಮ ಭವಿಷ್ಯ ನಿಮ್ಮದಾಗುತ್ತದೆ.

ಫೆಂಗ್ ಶೂಯಿ (Feng Shui) ಎಂದರೆ ಪ್ರಾಚೀನ ಚೀನೀ ವಾಸ್ತು ಪದ್ಧತಿ. ಇದರ ಅಕ್ಷರಶಃ ಅರ್ಥ ಗಾಳಿ ಮತ್ತು ನೀರು. 'ಫೆಂಗ್' ಎಂದರೆ ಗಾಳಿ ಮತ್ತು 'ಶೂಯಿ' ಎಂದರೆ ನೀರು. ಈ ಎರಡು ಅಂಶಗಳು ಜೀವಶಕ್ತಿಯ ಹರಿವನ್ನು ನಿರ್ಧರಿಸುತ್ತವೆ. ಇದನ್ನು ಚೀನಿಯರು ವಾಸ್ತುವಿಗಾಗಿ ಬಳಸುತ್ತಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಫೆಂಗ್ ಶೂಯಿ ತುಂಬಾ ಪ್ರಸಿದ್ಧಿ ಹೊಂದಿದೆ ಹಾಗೂ ಇದನ್ನು ನಂಬುವ, ಇದನ್ನು ಅನುಸರಿಸುವ ದೊಡ್ಡ ವರ್ಗವೇ ಇದೆ.

ಫೆಂಗ್ ಶೂಯಿ ವಾಸ್ತು

ಇದೀಗ ಫೆಂಗ್ ಶೂಯಿ ವಾಸ್ತು ಪದ್ಧತಿಯ ಪ್ರಕಾರ, ಮೂರು ವಸ್ತುಗಳು ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್​ನಲ್ಲಿ ಇದ್ದರೆ, ಸದಾ ಇವುಗಳನ್ನು ನೀವು ನಿಮ್ಮ ಬಳಿ ಇಟ್ಟುಕೊಂಡರೆ ಹಣದ ಸಮಸ್ಯೆ ಬರುವುದೇ ಇಲ್ಲ ಎನ್ನುವುದು ಈ ವಾಸ್ತು ಪದ್ಧತಿಯಲ್ಲಿ ಉಲ್ಲೇಖಿಸಲಾಗಿದೆ.

3 ಸದಾ ನಿಮ್ಮ ಜತೆ ಇರಲಿ

ಇದರಲ್ಲಿ ಮೊದಲನೆಯದ್ದು ಏಳು ನಾಣ್ಯಗಳು. ಏಳು ನಾಣ್ಯಗಳನ್ನು ನಿಮ್ಮ ಪರ್ಸ್​ನಲ್ಲಿ ಇಟ್ಟುಕೊಂಡರೆ ಸದಾ ಹಣ ಓಡಾಡುತ್ತಿರುತ್ತದೆ. ಹಣದ ಸಮಸ್ಯೆ ಎದುರಾಗುವುದೇ ಇಲ್ಲ. ನಾಣ್ಯವು ಲೋಹವಾಗಿದ್ದು, ಸಂಖ್ಯೆ ಆರು ಹಣದ ಹರಿವನ್ನು ಸೂಚಿಸುತ್ತದೆ. ಆರು ನಾಣ್ಯಗಳನ್ನು ನಿಮ್ಮ ಬಳಿ ಇಟ್ಟುಕೊಂಡರೆ ಉತ್ತಮ ಭವಿಷ್ಯ ಅದರಲ್ಲಿಯೂ ಒಳ್ಳೆಯ ಆರ್ಥಿಕ ಭವಿಷ್ಯ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ನಿಮ್ಮ ಭವಿಷ್ಯದಲ್ಲಿಯೂ ಸದಾ ಸಕ್ಸಸ್​ ನಿಮ್ಮದಾಗುತ್ತದೆ.

ಎರಡನೆಯದ್ದು, ಸ್ವಲ್ಪ ಉಪ್ಪನ್ನು ನಿಮ್ಮ ಪಾಕೆಟ್​ನಲ್ಲಿ ಇಟ್ಟುಕೊಳ್ಳಿ. ಉಪ್ಪು ನೆಗೆಟಿವ್​ ಎನರ್ಜಿಯನ್ನು ಹೋಗಲಾಡಿಸುವಲ್ಲಿ ಸಹಾಯಕಾರಿಯಾಗಿದೆ. ಇದು ಗುಡ್​ ಲಕ್​ ತರುವುದೂ ಅಲ್ಲದೇ, ಗಾಸಿಪ್​ಗಳಿಂದಲೂ ಮುಕ್ತಿ ಕೊಡುತ್ತದೆ. ಇದು ಹೊಸ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ.

3ನೇಯದ್ದು ಏಳು ಕಾಳು ಅಕ್ಕಿ ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ನೀವು ಊಹಿಸದಷ್ಟು ಆರ್ಥಿಕ ನೆರವನ್ನು ಒದಗಿಸುತ್ತದೆ. ಉತ್ತಮ ಭವಿಷ್ಯಕ್ಕೂ ಇದು ಸಹಕಾರಿಯಾಗಲಿದೆ ಎನ್ನುತ್ತದೆ ಫೆಂಗ್ ಶೂಯಿ ವಾಸ್ತು.

PREV
Read more Articles on
click me!

Recommended Stories

Bigg Boss ಟ್ರೋಫಿ ಬೇಡವೆಂದು 7 ಬಿಳಿ ಕುದುರೆಗೆ ಮ್ಯಾನಿಫೆಸ್ಟ್- ತಲೆ ಬಳಿಯೇ ಬಂದ ಹಾವು : ರೋಚಕ ಘಟನೆ ನೆನೆದ ಆನಂದ್​
ದೇವಾಲಯದಲ್ಲಿ 12 ಅಡಿ ನಾಗರ ಪ್ರತ್ಯಕ್ಷ- ಡೋಲು ಬಾರಿಸಿದಾಗ ನಡೆದ ಪವಾಡ ನೋಡಿ ಪುಳಕಿತಗೊಂಡ ಭಕ್ತರು