ಪದೇ ಪದೆ ಯಾರಾದ್ರೂ ಕನಸಲ್ಲಿ ಬರ್ತಾ ಇದ್ರೆ ಅದೆಂಥ ಸಂದೇಶ? ಮನಸ್ಸಿಗೆ ಇಷ್ಟೊಂದು ಶಕ್ತಿಯಾ?

By Suvarna News  |  First Published Dec 25, 2023, 5:31 PM IST

ಒಂದಾದ ಮೇಲೆ ಒಂದರಂತೆ ಆಕಳಿಕೆ ಬರುತ್ತಿದ್ದರೆ “ಯಾರೋ ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಅಥವಾ ಬೈದುಕೊಳ್ಳುತ್ತಿದ್ದಾರೆ’ ಎಂದುಕೊಳ್ಳುವ ಜನರಿದ್ದಾರೆ. ಅಂದರೆ, ಯಾರಾದರೂ ನಮ್ಮನ್ನು ನೆನಪಿಸಿಕೊಂಡರೆ ನಮಗೆ ಅದೇನೋ ಅನುಭವ ಉಂಟಾಗುತ್ತದೆ. ಇದನ್ನು ಬ್ರಹ್ಮಾಂಡದ ಆಧ್ಯಾತ್ಮಿಕ ಸಂದೇಶ ಎನ್ನಬಹುದು. 


ಅಮ್ಮನಿಗೆ ಫೋನ್ ಮಾಡಬೇಕು ಎಂದುಕೊಳ್ಳುತ್ತಿರುವಾಗ ಆಕೆಯೇ ಫೋನ್ ಮಾಡಿ ಮಾತನಾಡುತ್ತಾಳೆ. ಯಾವುದೋ ಸ್ನೇಹಿತರನ್ನು ನೆನಪಿಸಿಕೊಂಡ ದಿನವೇ ಅವರಿಗೆ ಸಂಬಂಧಿಸಿದ ಏನಾದರೂ ಸುದ್ದಿ ದೊರೆಯುತ್ತದೆ. ಅಷ್ಟೇ ಏಕೆ? ಅತಿಯಾಗಿ ಆಕಳಿಕೆ ಬಂದರೆ, ಯಾರೋ ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತೇವೆ. ಇಂತಹ ಕೆಲವು ಘಟನೆಗಳು ಸಂಭವಿಸಿದಾಗ ನಾವು ಸಾಮಾನ್ಯವಾಗಿ “ಟೆಲಿಪತಿ’ ಎಂದು ಹೇಳಿಕೊಂಡು ನಗಬಹುದು. ಆದರೆ, ಇದು ನಿಜ. ಮನಸ್ಸಿಗೆ ಸಮೀಪವಾದವರು ನಮ್ಮನ್ನು ನೆನಪಿಸಿಕೊಂಡಾಗ ಅಥವಾ ನಾವು ಅವರನ್ನು ನೆನಪಿಸಿಕೊಂಡಾಗ ಈ ಬ್ರಹ್ಮಾಂಡದಲ್ಲಿರುವ ದೈವಿಕ ಶಕ್ತಿ ಸಂದೇಶ ನೀಡುತ್ತದೆ. ನಮ್ಮ ಹಾಗೂ ಮತ್ತೊಂದು ಆತ್ಮದ ಜತೆಗೆ ಇರುವಂಥ ಕಣ್ಣಿಗೆ ಕಾಣದ ಬಾಂಧವ್ಯದ ಎಳೆಯು ಆಧ್ಯಾತ್ಮಿಕ, ದೈವಿಕ ಸಂದೇಶಗಳನ್ನು ಸ್ವೀಕರಿಸುವಂತದ್ದಾಗಿರುತ್ತದೆ. ಹೀಗಾಗಿ, ಕೆಲವು ರೀತಿಯ ಅನುಭವಗಳು ನಮಗೆ ಉಂಟಾಗುವುದು ಕಂಡುಬರುತ್ತದೆ. ಇಂಥವು ಕೇವಲ ಆಕಸ್ಮಿಕವಲ್ಲ. ಬ್ರಹ್ಮಾಂಡದ ಎನರ್ಜಿ ನಮಗೆ ನೀಡುತ್ತಿರುವ ಸಂದೇಶವಾಗಿರುತ್ತವೆ. ಅದನ್ನು ಕೇಳಿಸಿಕೊಳ್ಳುವ, ಗ್ರಹಿಸುವ ಶಕ್ತಿಯೂ ನಮ್ಮಲ್ಲಿರುತ್ತದೆ. ಆದರೆ, ಸರಿಯಾಗಿ ಗಮನಿಸಿಕೊಳ್ಳಬೇಕಷ್ಟೆ. ಯಾರಾದರೂ ನಿಮ್ಮನ್ನು ನೆನಪಿಸಿಕೊಂಡಾಗ ಕೆಲವು ಸಂದೇಶಗಳ ಮೂಲಕ ಅದು ನಿಮ್ಮನ್ನು ತಲುಪುತ್ತದೆ. 

ಅಂತಃಪ್ರಜ್ಞೆಯ ಕನಸುಗಳು (Intuitive Dreams): ಯಾರಾದರೂ ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದರೆ (Memory) ನಿಮಗೆ ಕನಸುಗಳು ಬೀಳುವುದು ಸರ್ವೇಸಾಮಾನ್ಯವಾದ ಸಂದೇಶ (Message).  ಕನಸುಗಳು ವಿಚಿತ್ರವಾಗಿ ಹಾಗೂ ಭಾವನಾತ್ಮಕವಾಗಿ (Emotion) ಕದಡುವಂತಿರಬಹುದು. ಎಚ್ಚರವಾದ ಬಳಿಕ ಅರಿಯದ ದುಗುಡವೊಂದು ನಿಮ್ಮಲ್ಲಿ ಆವರಿಸಬಹುದು.

Tap to resize

Latest Videos

ಶ್ರೀ ಯಂತ್ರ ತಿಜೋರಿಯಲ್ಲಿಟ್ಟರೆ ನಿಮ್ಮ ಬಳಿ ಹಣ ಹೆಚ್ಚುತ್ತಲೇ ಇರುತ್ತೆ!

ಕನಸಿನಲ್ಲಿ ನೀವು ಅವರೊಂದಿಗೆ ಮಾತನಾಡುತ್ತಿರುವಂತೆ ಅಥವಾ ಅವರು ಏನೋ ಅಲ್ಲಲ್ಲಿ ಕಾಣುತ್ತಿರುವಂತೆ ಭಾಸವಾಗಬಹುದು. ಅವರು ನಿಮ್ಮ ಬಗ್ಗೆ ವಿಚಾರ ಮಾಡುತ್ತಿರುವುದು ಆಧ್ಯಾತ್ಮಿಕ (Spiritual) ಮಟ್ಟದಲ್ಲಿ ನಿಮ್ಮನ್ನು ತಲುಪುತ್ತಿರುವುಕ್ಕೆ ಇದು ಸಾಕ್ಷಿ. ಯಾರಾದರೂ ಕನಸಿನಲ್ಲಿ ಕಂಡರೆ, ಮರೆಯದೇ ಅವರಿಗೊಂದು ಫೋನ್ ಮಾಡಿ ಮಾತನಾಡಿ. ಇದರಿಂದ ಅವರಿಗೆ ಅಚ್ಚರಿಯಾಗುವುದು ಗ್ಯಾರೆಂಟಿ.

ದಿಢೀರ್ ಎನರ್ಜಿ (Energy) ಬದಲಾವಣೆ:  ಕೆಲವೊಮ್ಮೆ ಆರಾಮಾಗಿ ಇರುವವರು ಏಕಾಏಕಿ ನೆಗೆಟಿವ್ (Negative) ಭಾವನೆಗೆ ತುತ್ತಾಗಬಹುದು ಅಥವಾ ಬೇಸರದಲ್ಲಿರುವಾಗ ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಬೆಳಕಿನ ಅಲೆಯೊಂದು ಬಂದಂತೆ ಭಾಸವಾಗಿ ಖುಷಿಯಾಗಬಹುದು. ಯಾರೋ ನಿಮ್ಮ ಆತ್ಮೀಯರು ನಿಮ್ಮನ್ನು ನೆನಪಿಸಿಕೊಂಡಾಗ ದಿಢೀರ್ ಎಂಬಂತೆ ಮನಸ್ಥಿತಿಯಲ್ಲಿ ಬದಲಾವಣೆಯಾಗುವುದನ್ನು (Change) ಕಾಣಬಹುದು. ಕಾರಣವಿಲ್ಲದೆ ಹೀಗಾದಾಗ ಅದು ದೈವಿಕ ಸಂದೇಶವಾಗಿರುತ್ತದೆ ಎಂದು ಅರಿಯಬಹುದು. ಆಧ್ಯಾತ್ಮಿಕ ಎನರ್ಜಿಗೆ ದೈಹಿಕ ಮಿತಿಯಿಲ್ಲ. ಅದು ಎಲ್ಲಿಂದ ಎಲ್ಲಿಗೆ ಬೇಕಾದರೂ ಹರಿಯಬಹುದು. ಏಕಾಏಕಿ ಹೀಗೆ ಮೂಡ್ (Mood) ಬದಲಾವಣೆಯಾದಾಗ ನಿಮ್ಮೊಳಗೆ ಮೂಡುವ ಭಾವನೆಗಳ ಬಗ್ಗೆ ಗಮನ ಹರಿಸಿ. ಯಾರಾದರೂ ಅವರ ವಿಚಾರಗಳಲ್ಲಿ ನಿಮ್ಮನ್ನು ಹಿಡಿದಿಟ್ಟುಕೊಂಡಿದ್ದರೆ ಹೀಗಾಗುತ್ತದೆ. 

ಪದೇ ಪದೆ ಯೋಚನೆ (Thoughts): ಯಾರಾದರೂ ನಿಮ್ಮ ನೆನಪಿನಲ್ಲಿರುವಾಗ ನಿಮಗೂ ಪದೇ ಪದೆ ಅವರ ಕುರಿತು ಯೋಚನೆ ಉಂಟಾಗುತ್ತದೆ. ವಿವರಿಸಲು ಸಾಧ್ಯವಾಗದ ಸಂಪರ್ಕ (Connection) ನಿಮ್ಮಲ್ಲಿದ್ದರೆ ಹಳೆಯ ನೆನಪುಗಳು ಉಂಟಾಗಬಹುದು, ಅವರ ದನಿ ಕೇಳಿಸಿದಂತೆ ಆಗಬಹುದು, ಅವರ ಎನರ್ಜಿ ನಿಮ್ಮ ಸುತ್ತ ಇರುವಂತೆ ಭಾಸವಾಗಬಹುದು. ಇದು ಸಹ ಆಧ್ಯಾತ್ಮಿಕ ಸಂದೇಶವಾಗಿದೆ.

ಕನಸಿನಲ್ಲಿ ಇವುಗಳನ್ನು ನೋಡಿದರೆ ದೇವರ ಆಶೀರ್ವಾದ ನಿಮ್ಮ ಮೇಲಿದೆ ಎಂದರ್ಥ

ಆಕಸ್ಮಿಕ ಹೊಂದಾಣಿಕೆ: ಎಷ್ಟೋ ಬಾರಿ ಆಕಸ್ಮಿಕ (Coincidence) ಘಟನೆಗಳು ಜರುಗುತ್ತವೆ. ಮೊದಲೇ ಹೇಳಿದಂತೆ, ಅಮ್ಮನಿಗೆ ಫೋನ್ ಮಾಡಬೇಕು ಎಂದುಕೊಳ್ಳುವ ಹೊತ್ತಿನಲ್ಲೇ ಆಕೆಯ ಫೋನ್ ಬಂದಿರುತ್ತದೆ. ಇದು ಕೇವಲ ಆಕಸ್ಮಿಕವಲ್ಲ. ವಿಶೇಷ ವ್ಯಕ್ತಿಯೊಂದಿಗೆ ಇಂತಹ ಆಕಸ್ಮಿಕವಾಗಿ ಹೊಂದಾಣಿಕೆಯಾಗುವಂತಹ ಘಟನೆಗಳು ಜರುಗುತ್ತಲೇ ಇರುತ್ತವೆ. ಒಂದೇ ರೀತಿಯ ವಿಚಾರ ಏಕಕಾಲದಲ್ಲಿ ಇಬ್ಬರಿಗೂ ಮೂಡುವುದು ಸಹ ಇಂಥದ್ದೇ ಅನುಭವ. 

click me!