2027ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹3 ಲಕ್ಷ ಮುಟ್ಟುತ್ತಾ? ಬಾಬಾ ವಂಗಾ ಭವಿಷ್ಯವಾಣಿ ಲೆಕ್ಕಾಚಾರ ಇಲ್ಲಿದೆ

Published : Oct 12, 2026, 10:38 AM IST
Baba Vanga gold predictions

ಸಾರಾಂಶ

2027ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ₹3 ಲಕ್ಷ ತಲುಪಲಿದೆ ಎಂಬ ಬಾಬಾ ವಂಗಾ ಭವಿಷ್ಯವಾಣಿ ತೀವ್ರ ಸಂಚಲನ ಮೂಡಿಸಿದೆ. ಬಾಬಾ ವೆಂಗಾ ಅವರ ಆಘಾತಕಾರಿ ಭವಿಷ್ಯ ಮತ್ತು ಮಾರುಕಟ್ಟೆ ತಜ್ಞ ಅಜಯ್ ಕೇಡಿಯಾ ಅವರ ನೈಜ ಲೆಕ್ಕಾಚಾರ ಇಲ್ಲಿದೆ.

ಹಳದಿ ಲೋಹ ಬಂಗಾರದ ಬೆಲೆ ದಿನದಿಂದ ದಿನಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗಷ್ಟೇ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದರೂ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಲಿದೆ ಎಂಬ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಇದಕ್ಕೆ ಮುಖ್ಯ ಕಾರಣ ಬಲ್ಗೇರಿಯಾದ ಅಂಧ ಭವಿಷ್ಯಗಾರ್ತಿ ಬಾಬಾ ವಂಗಾ (Baba Vanga) ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಆಘಾತಕಾರಿ ಭವಿಷ್ಯವಾಣಿ!

2027ರ ವೇಳೆಗೆ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ ಬರೋಬ್ಬರಿ ₹2.80 ಲಕ್ಷದಿಂದ ₹3 ಲಕ್ಷಕ್ಕೆ ತಲುಪಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದು ಆಭರಣ ಪ್ರಿಯರಲ್ಲಿ ಮತ್ತು ಮದುವೆಗೆ ಚಿನ್ನ ಖರೀದಿಸಲು ಕಾಯುತ್ತಿರುವ ಜನಸಾಮಾನ್ಯರಲ್ಲಿ ನಡುಕ ಹುಟ್ಟಿಸಿದೆ. ಹಾಗಾದರೆ ಈ ಮಾತಿನಲ್ಲಿ ಹುರುಳಿದೆಯೇ? ಆರ್ಥಿಕ ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ.

ಬಾಬಾ ವಂಗಾ ಭವಿಷ್ಯದಲ್ಲೇನಿದೆ?

ಎರಡನೇ ಮಹಾಯುದ್ಧದ ನಂತರ ಚಿನ್ನವೇ ಜಾಗತಿಕ ಆರ್ಥಿಕತೆಗೆ ಅಂತಿಮ ಆಧಾರವಾಗಲಿದೆ ಎಂದು ಬಾಬಾ ವಂಗಾ ಹೇಳಿದ್ದರು ಎನ್ನಲಾಗಿದೆ. ಅವರ ಲೆಕ್ಕಾಚಾರದ ಪ್ರಕಾರ, 2027ರಲ್ಲಿ ಜಗತ್ತಿನಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟು ಎದುರಾಗಲಿದ್ದು, ಷೇರು ಮಾರುಕಟ್ಟೆಗಳು ನೆಲಕಚ್ಚಲಿವೆ. ಪರಿಣಾಮವಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ವಿಪರೀತ ಹೆಚ್ಚಲಿದ್ದು, 10 ಗ್ರಾಂ ಬಂಗಾರದ ಬೆಲೆ ₹2.62 ಲಕ್ಷದಿಂದ ₹2.82 ಲಕ್ಷ ಅಥವಾ ₹3 ಲಕ್ಷದ ಗಡಿ ದಾಟಲಿದೆ ಎಂಬ ವಾದ ಹರಿದಾಡುತ್ತಿದೆ. ಆದಾಗ್ಯೂ, ಈ ಹೇಳಿಕೆಗೆ ಯಾವುದೇ ಲಿಖಿತ ದಾಖಲೆಗಳಿಲ್ಲ.

ಮಾರುಕಟ್ಟೆ ತಜ್ಞ ಅಜಯ್ ಕೇಡಿಯಾ ವಿಶ್ಲೇಷಣೆ:

ಖ್ಯಾತ ಕಮಾಡಿಟಿ ತಜ್ಞ ಅಜಯ್ ಕೇಡಿಯಾ ಅವರ ಪ್ರಕಾರ, ಭವಿಷ್ಯವಾಣಿಗಳನ್ನು ಹೊರತುಪಡಿಸಿಯೂ ವಾಸ್ತವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಲು ಮೂರು ಪ್ರಮುಖ ಕಾರಣಗಳಿವೆ:

ಭೌಗೋಳಿಕ-ರಾಜಕೀಯ ಬಿಕ್ಕಟ್ಟು (Geopolitical Tensions): ರಷ್ಯಾ-ಉಕ್ರೇನ್ ಸಂಘರ್ಷ, ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡಗಳು ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸಿವೆ.

ಕೇಂದ್ರ ಬ್ಯಾಂಕುಗಳ ಖರೀದಿ: ಪ್ರಪಂಚದಾದ್ಯಂತ ಇರುವ ಸೆಂಟ್ರಲ್ ಬ್ಯಾಂಕುಗಳು ಕರೆನ್ಸಿ ಮೇಲಿನ ಅವಲಂಬನೆ ಕಡಿಮೆ ಮಾಡಲು ನಿರಂತರವಾಗಿ ಭಾರಿ ಪ್ರಮಾಣದಲ್ಲಿ ಬಂಗಾರವನ್ನು ಖರೀದಿಸಿ ಸಂಗ್ರಹಿಸುತ್ತಿವೆ.

ಭಾರತ ಮತ್ತು ಚೀನಾದಲ್ಲಿ ಸತತ ಬೇಡಿಕೆ: ರೂಪಾಯಿ ಮೌಲ್ಯ ಕುಸಿತ ಹಾಗೂ ಚಿನ್ನದ ಇಟಿಎಫ್ (ETF) ಹೂಡಿಕೆಗಳು ಬಂಗಾರಕ್ಕೆ ಬಲವಾದ ಬೆಂಬಲ ನೀಡುತ್ತಿವೆ.

2027ರಲ್ಲಿ ಚಿನ್ನದ ಬೆಲೆ ಎಷ್ಟಾಗಬಹುದು?

ಬಾಬಾ ವಂಗಾ ಅವರ ₹3 ಲಕ್ಷದ ಅಂದಾಜನ್ನು ವಾಸ್ತವಿಕ ಆರ್ಥಿಕ ಲೆಕ್ಕಾಚಾರಗಳು ಸಂಪೂರ್ಣವಾಗಿ ಒಪ್ಪುವುದಿಲ್ಲ. ಆದರೆ ಬೆಲೆ ಗಣನೀಯವಾಗಿ ಹೆಚ್ಚಾಗುವುದಂತೂ ಖಚಿತ ಎನ್ನುತ್ತಾರೆ ಅಜಯ್ ಕೇಡಿಯಾ.

ಅವರ ಮುನ್ಸೂಚನೆಯ ಪ್ರಕಾರ, 2027ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ₹1.80 ಲಕ್ಷದ ಆಸುಪಾಸಿಗೆ ತಲುಪುವ ಸಾಧ್ಯತೆಯಿದೆ. ಇದು ಇಂದಿನ ಮಾರುಕಟ್ಟೆ ಮೌಲ್ಯಕ್ಕಿಂತ ಸುಮಾರು 18% ರಷ್ಟು ಅಧಿಕ ಬೆಳವಣಿಗೆಯಾಗಿದೆ.

ಭಾರತೀಯರ ಬಳಿ ಇರುವ ಚಿನ್ನದ ಸಂಪತ್ತು ಎಷ್ಟು ಗೊತ್ತಾ?

ವಿಶ್ವ ಗೋಲ್ಡ್ ಕೌನ್ಸಿಲ್ (World Gold Council) ವರದಿಯ ಪ್ರಕಾರ:

  • ಭಾರತೀಯ ಮನೆಗಳಲ್ಲಿ ಸಾರ್ವಜನಿಕರ ಬಳಿ ಬರೋಬ್ಬರಿ 22,000 ಟನ್ ಚಿನ್ನ ಇದೆ.
  • ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಳಿ ಸುಮಾರು 841 ಟನ್ ಬಂಗಾರದ ನಿಲ್ವ ಇದೆ.
  • ದೇಶದ ಪ್ರಮುಖ 13 ದೇವಾಲಯಗಳಲ್ಲೇ 3 ರಿಂದ 4 ಟನ್ ಚಿನ್ನವಿದ್ದು, ಇದು ಜಗತ್ತಿನ ಎಷ್ಟೋ ಬಿಲಿಯನೇರ್‌ಗಳ ಒಟ್ಟು ಸಂಪತ್ತಿಗಿಂತಲೂ ಹೆಚ್ಚು!

ಬಾಬಾ ವಂಗಾ ಅವರ ₹3 ಲಕ್ಷದ ಭವಿಷ್ಯವಾಣಿ ವದಂತಿಯಂತೆ ಕಂಡರೂ, ಜಾಗತಿಕ ಬಿಕ್ಕಟ್ಟುಗಳು ಮುಂದುವರಿದರೆ ಚಿನ್ನದ ದರ ಮುಂದಿನ ವರ್ಷಗಳಲ್ಲಿ ₹1.80 ಲಕ್ಷ ಮುಟ್ಟುವುದು ನಿಶ್ಚಿತ ಎನ್ನುತ್ತವೆ ಮಾರುಕಟ್ಟೆ ವರದಿಗಳು. ಹಾಗಾಗಿ ಹೂಡಿಕೆದಾರರು ಗಾಸಿಪ್‌ಗಳಿಗೆ ಕಿವಿಗೊಡದೆ, ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸಿ ಯೋಜಿತವಾಗಿ ಹೂಡಿಕೆ ಮಾಡುವುದು ಸೂಕ್ತ.

PREV
Read more Articles on
click me!

Recommended Stories

ಇಂದು ವಿಷ್ಕಂಭ ಮತ್ತು ಪ್ರೀತಿ ಯೋಗದಿಂದ 6 ರಾಶಿಗಳಿಗೆ ಒಲಿಯಲಿದೆ ಶಿವನ ಕೃಪೆ, ಅದೃಷ್ಟ
ಅಕ್ಟೋಬರ್ 12 ರ ಜಾತಕ: ತುಲಾ, ಮಕರ ಮತ್ತು ಕುಂಭ ರಾಶಿಯವರು ಉತ್ತಮ ಯಶಸ್ಸನ್ನು ಪಡೆಯಬಹುದು