ಈ ರಾಶಿಯವರಿಗೆ ಆರಂಭವಾಗಿದೆ ಶುಭ ಸಮಯ

Published : Sep 29, 2018, 06:55 AM IST
ಈ ರಾಶಿಯವರಿಗೆ ಆರಂಭವಾಗಿದೆ ಶುಭ ಸಮಯ

ಸಾರಾಂಶ

ಈ ರಾಶಿಯವರಿಗೆ ಆರಂಭವಾಗಿದೆ ಶುಭ ಸಮಯ

ಮೇಷ
ನಿಮ್ಮ ನಿಲುವುಗಳಿಗೆ ಎಂದೂ ಬದ್ಧರಾಗಿರಿ.
ಯಾವುದೇ ಆಮಿಷಗಳಿಗೆ ಒಳಗಾಗದಿರಿ.
ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ.

ವೃಷಭ
ನಿಮ್ಮ ರಾಶಿಯವರು ಇಂದು ಹೆಚ್ಚು ಹಣ
ಗಳಿಸಲಿದ್ದೀರಿ. ವ್ಯಯ ಮಾಡದಿರುವುದೇ
ಸೂಕ್ತ. ಕೂಡಿಡುವ ಬುದ್ಧಿ ಈಗ ಬೇಕು.

ಮಿಥುನ
ರಾಜಕಾರಿಣಿಗಳಿಗೆ ಒಳ್ಳೆಯ ಕಾಲ.
ಆದಾಯ ಹೆಚ್ಚಲು ಸರಿಯಾದ ಸಮಯ.
ಹಾಗಂತ ಅಡ್ಡದಾರಿಗೆ ಕೈ ಹಾಕದಿರಿ. ಜೋಕೆ.

ಕಟಕ
ಸಂಬಂಧಿಕರ ಆಗಮನ ಆಗಲಿದೆ. ಆ ಕಾರಣ
ಮನಃಶಾಂತಿ ಲಭಿಸಲಿದೆ. ಅವರು ನಿಮಗೆ
ಬೆಂಬಲವಾಗಿ ನಿಂತು ಸಹಕಾರ ನೀಡಲಿದ್ದಾರೆ.

ಸಿಂಹ
ಇಂದು ಎದ್ದಾಗಿನಿಂದ ಮನಸ್ಸು ನಿಮ್ಮ
ಮಾತನ್ನು ಕೇಳುತ್ತಿಲ್ಲ. ಯಾವುದೋ ಚಿಂತೆ
ಕಾಡುತ್ತಿದೆ. ಪ್ರಾಣಾಯಮ ಮಾಡಿರಿ.

ಕನ್ಯಾ
ಕಷ್ಟದ ದಿನಗಳು ಇದ್ದವೆಂದೂ ತಿಳಿಯದಂತಹ
ಒಳ್ಳೆಯ ಸುದ್ದಿ ಇಂದೇ ಬರಲಿವೆ. ಎಲ್ಲವೂ
ಶುಭವಾಗಲಿದೆ. ಆರೋಗ್ಯ ಸುಧಾರಿಸಲಿದೆ.

ತುಲಾ 
ಹಣಕಾಸಿನ ಬಗ್ಗೆ ಚಿಂತಿಸದಿರಿ. ನಿಮ್ಮ ಶ್ರಮ
ಹಾಗೂ ಏಕಾಗ್ರತೆಯೇ ನಿಮ್ಮನ್ನು ಕಾಯಲಿದೆ.
ಬಾಕಿ ಉಳಿದ ಕೆಲಸಗಳೂ ಮುಗಿಯಲಿವೆ.

ವೃಶ್ಚಿಕ
ನಿಮ್ಮ ಕಣ್ಣು ಕ್ಯಾಲೆಂಡರ್‌ನ ಯಾವುದೋ
ಒಂದು ದಿನಾಂಕದಲ್ಲೇ ನೆಟ್ಟಿದೆ. ಆ ಬಾಬ್ತಿನ
ಹಣವು ವಾಪಸ್ ಆಗುವ ಸಂಭವವೂ ಇದೆ. 

ಧನುಸ್ಸು
ಮನೆಯ ಜಗಳ ಹೊರಗೆ ಬರದಂತೆ ಎಚ್ಚರ
ವಹಿಸಿ. ಅದಕ್ಕಾಗಿಯೇ ಹೊರಗೆ ಹದ್ದುಗಳಂತೆ
ಕೆಲರು ಕಾದಿದ್ದಾರೆ. ಅವರಿಗೆ ಆಹಾರವಾದೀರಿ.

ಮಕರ
ಸಿನಿಮಾ, ರಂಗಭೂಮಿಯ ನಂಟಿನ ನಿಮಗೆ
ಮನಸ್ಸಿಗಷ್ಟೇ ಖುಷಿ. ಆದರೆ ಜೇಬು ತುಂಬುವ
ಕಾಲಕ್ಕಾಗಿ ಸ್ವಲ್ಪ ದಿನಗಳು ಕಾಯಲೇಬೇಕು.

ಕುಂಭ
ಮಗಳ ಮದುವೆಯ ವಿಚಾರವಾಗಿ ಹೆಚ್ಚು
ಯೋಚಿಸದಿರಿ. ಈಗ ಕಾಲ ಕೂಡಿ ಬರಲಿದೆ.
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ 
ತಲೆಗೂದಲಿನ ಸಮಸ್ಯೆಗೆ ತಜ್ಞರು
ಪರಿಹಾರ ಸೂಚಿಸಲಿದ್ದಾರೆ. ನಿಮ್ಮ ಈ ದಿನದ
ಕೆಲಸಗಳಲ್ಲೂ ಹುರುಪು ಉತ್ಸಾಹಗಳಿವೆ.

PREV
click me!

Recommended Stories

ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ