ನಿಮ್ಮ ಎಷ್ಟೋ ದಿನಗಳ ಕನಸು ನನಸಾಗುವ ಸಂದರ್ಭ

Published : Jul 21, 2018, 07:02 AM IST
ನಿಮ್ಮ ಎಷ್ಟೋ ದಿನಗಳ ಕನಸು ನನಸಾಗುವ ಸಂದರ್ಭ

ಸಾರಾಂಶ

ನಿಮ್ಮ ಎಷ್ಟೋ ದಿನಗಳ ಕನಸು ನನಸಾಗುವ ಸಂದರ್ಭ

ಮೇಷ
ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಉತ್ತಮ
ಸಮಯ. ನಿರಂತರ ಶ್ರಮವೀಗ ಸಾರ್ಥಕ
ವಾಗಲಿದೆ. ಗೌರವಗಳಿಗೂ ಪಾತ್ರರಾಗುತ್ತೀರಿ.

ವೃಷಭ
ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸ್ಥಿಮಿತಕ್ಕೆ
ಬರುವ ದಿನವು ಹತ್ತಿರದಲ್ಲಿದೆ. ನಿರೀಕ್ಷೆಯು
ಎಂದೂ ಹುಸಿಯಾಗದು ತಾಳ್ಮೆಯಿರಬೇಕಷ್ಟೆ.

ಮಿಥುನ
ವ್ಯವಹಾರದಲ್ಲಿ ಪ್ರಗತಿ. ಪಾಲುದಾರರನ್ನು
ನಂಬಿ. ಅವರೇ ನಿಮ್ಮ ಶ್ರೀರಕ್ಷೆಯಾಗಲಿದ್ದಾರೆ.
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ.

ಕಟಕ
ನೀವು ಕಷ್ಟಪಟ್ಟು ದುಡಿದದ್ದೇ ಮೂರಾಬಟ್ಟೆ
ಯಾಗಿದೆ. ಅಂಥದ್ದರಲ್ಲಿ ನಿಮಗೆ ಬೇರೊಬ್ಬರು
ಪುಕ್ಕಟ್ಟೆ ಕೊಡುವ ಹಣ ಬೇಕಾ? ಯೋಚಿಸಿ.

ಸಿಂಹ
ಮನರಂಜನೆಯ ಕ್ಷೇತ್ರದಲ್ಲಿರುವವರಿಗೆ ಸರಿ
ಯಾದ ನಿದ್ದೆ ಇರದೆ ಆರೋಗ್ಯದಲ್ಲಿ ಸ್ವಲ್ಪ
ವ್ಯತ್ಯಯ ಬರಲಿದೆ. ದುಡ್ಡು ನೋಡಲಿದ್ದೀರಿ.

ಕನ್ಯಾ
ನಿಮ್ಮ ಮನೆಯ ವಾಸ್ತುವಿನ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ಜೀವನವು ಸುಖ
ಮಯವಾಗಿದೆ. ಚಿಂತೆಗಳು ಸುಳಿಯದು.

ತುಲಾ 
ಎಲ್ಲರೊಂದಿಗೂ ಬೆರೆಯಿರಿ, ಧನಾತ್ಮಕವಾದ
ಆಲೋಚನೆಗಳಿಂದ ನಿಮ್ಮ ಕೆಲಸಗಳಲ್ಲಿ ಈಗ
ಯಶಸ್ಸು ದೊರೆಯಲಿದೆ. ನೆಮ್ಮದಿಯಿಂದಿರಿ.

ವೃಶ್ಚಿಕ
ತಂದೆ- ತಾಯಿಗಳಿಗೆ ಖುಷಿ ವಿಷಯಗಳನ್ನು
ತಿಳಿಸಲಿದ್ದೀರಿ. ತೀರ್ಥಯಾತ್ರೆ ಕೈಗೊಂಡು
ದೂರ ಪ್ರಯಾಣಕ್ಕೆ ಯೋಜನೆ ಹಾಕಲಿದ್ದೀರಿ.

 ಧನುಸ್ಸು
ಸಮಾಜ ಸೇವೆಯಲ್ಲಿ ಆಸಕ್ತಿ ಮೂಡಲಿದೆ.
ವಾಹನ ವಿಲೇವಾರಿಯಲ್ಲಿ ಗಣನೀಯವಾದ
ಆದಾಯವನ್ನು ಗಳಿಸುವಿರಿ. ಲಾಭ ಹೆಚ್ಚಿಲ್ಲ.

ಮಕರ
ನೀವಂದುಕೊಂಡಂತೆ ನಿಮ್ಮ ಎಲ್ಲ ಕೆಲಸಗಳೂ
ನಿರಾತಂಕವಾಗಿ ನೆರವೇರುವವು. ಗ್ರಹಗತಿಗೆ
ಮನೆಯ ವಾತಾವರಣವೂ ಪೂರಕವಾಗಿದೆ.

ಕುಂಭ
ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು
ಯೋಚಿಸಿ. ಸ್ನೇಹಿತರ ಸಹಕಾರವು ನಿಮಗಿದೆ.
ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಜೋಕೆ.

ಮೀನ 
ಅನುಚಿತ ಮಾತುಗಳಿಂದ ವಿವಾದಗಳಿಗೆ ಎಡೆ
ಕೊಡದಿರಿ. ಮಾತಿನಲ್ಲಿ ಆದಷ್ಟು ತೂಕವಿರಲಿ.
ಶುಭ ಸಮಾಚಾರವು ನಿಮ್ಮ ಕಿವಿಗೆ ಬೀಳಲಿದೆ.

PREV
click me!

Recommended Stories

ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ