ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗುವುದು ಒಳಿತು

Published : Nov 03, 2018, 07:08 AM IST
ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗುವುದು ಒಳಿತು

ಸಾರಾಂಶ

ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗುವುದು ಒಳಿತು

ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗುವುದು ಒಳಿತು

ಮೇಷ
ನಿಮ್ಮ ಸಾಧನೆ ಬಗ್ಗೆ ನೀವೇ ಹೇಳಿಕೊಳ್ಳುವುದು
ಬೇಡ. ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು
ಮಾಡಿ. ಕೆಲಸವೇ ನಿಮ್ಮನ್ನು ಪರಿಚಯಿಸಲಿದೆ.

ವೃಷಭ
ಅನಾವಶ್ಯಕ ವಿಚಾರಗಳಲ್ಲಿ ಭಾಗಿಯಾಗು
ವುದು ಕೂಡದು. ನಿಮ್ಮ ಬಗ್ಗೆ ಎಲ್ಲರಿಂದಲೂ
ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿದೆ.

ಮಿಥುನ
ನಿಮ್ಮಿಂದ ಮತ್ತೊಬ್ಬರಿಗೆ ತೊಂದರೆಯಾದರೂ
ಅದು ಕ್ಷಣಿಕ ಮಾತ್ರ. ನಿಮಗೆ ಅನ್ನಿಸಿದ್ದನ್ನು
ಧೈರ್ಯವಾಗಿ ಮಾಡಿರಿ. ಒಳಿತಾಗಲಿದೆ.

ಕಟಕ
ಸಮಯಕ್ಕೆ ಸರಿಯಾಗಿ ನಿರ್ಧಾರ ಕೈಗೊಳ್ಳು
ವಿರಿ. ಆತ್ಮೀಯರ ಮಾತಿಗೆ ತಾಳ್ಮೆಯಿಂದ
ಪ್ರತಿಕ್ರಿಯೆ ನೀಡಿ. ನೋವಲ್ಲೂ ನಗುವಿರಿ.

ಸಿಂಹ
ನಿಮ್ಮದೇ ನಿಮಗೆ ದೊಡ್ಡ ಸಮಸ್ಯೆ
ಎಂದುಕೊಳ್ಳಬಹುದು. ಆದರೆ ನಿಮಗಿಂತಲೂ
ಹೆಚ್ಚು ಸಮಸ್ಯೆ ಇರುವವರನ್ನು ಕಾಣುವಿರಿ.

ಕನ್ಯಾ
ತುಂಬಿದ ಕೊಡ ತುಳುಕುವುದಿಲ್ಲ. ಹಾಗೆಯೇ
ಇಡೀ ದಿನ ನಿಮ್ಮ ವ್ಯಕ್ತಿತ್ವ ಇರಲಿದೆ. ಒಳ್ಳೆಯ
ದ್ದನ್ನು ಮಾಡುವಿರಿ. ಮೆಚ್ಚುಗೆ ಸಿಗಲಿದೆ.

ತುಲಾ
ಭಾಷೆಗೆ ಸಂಬಂಧಿಸಿದಂತೆ ಹೆಚ್ಚು ಕೆಲಸ
ಮಾಡುವಿರಿ. ನಿಮ್ಮ ಕಾರ್ಯಕ್ಕೆ ಹಿರಿಯರಿಂದ
 ಹೆಚ್ಚು ಮೆಚ್ಚುಗೆ ದೊರೆಯಲಿದೆ.

ವೃಶ್ಚಿಕ
ಒಳ್ಳೆಯ ಸಿನಿಮಾ ನೋಡುವಿರಿ. ಹೆಚ್ಚು
ಏಕಾಂತಕ್ಕೆ ಒಳಗಾಗುವಿರಿ. ಮತ್ತೊಬ್ಬರ ಬಗ್ಗೆ
ಹಗುರವಾಗಿ ಮಾತನಾಡುವುದು ಬೇಡ. 

ಧನುಸ್ಸು
ನಿಮಗೆ ತಿಳಿದ ವಿಚಾರಗಳೇ ಅಂತಿಮವಲ್ಲ.
ನಿಮ್ಮಗಿಂತಲೂ ಹೆಚ್ಚು ತಿಳಿದುಕೊಂಡಿರುವವರ
ಜೊತೆ ಹೆಚ್ಚು ಸಮಾಲೋಚನೆ ಮಾಡಿ.

ಮಕರ
ಮುಂದೆ ಏನಾಗುತ್ತದೆ ಎನ್ನುವ ಚಿಂತೆ ಬೇಡ.
ವಾಸ್ತವದಲ್ಲಿ ಬದುಕು ಸಾಗಿಸಲು ಪ್ರಯತ್ನ
ಮಾಡಿ. ಮನರಂಜನೆ ಹೆಚ್ಚಾಗಲಿದೆ.

ಕುಂಭ
ದೀರ್ಘ ಕಾಲ ಜೊತೆಗೆ ಸಾಗುವ ಗೆಳೆಯರು
ಸಿಗಲಿದ್ದಾರೆ. ದಿನಾಂತ್ಯದಲ್ಲಿ ಹೆಚ್ಚು ಒತ್ತಡ
ನಿರ್ಮಾಣವಾಗಲಿದೆ. ಬಂಧುಗಳ ಆಗಮನ.

ಮೀನ 
ಮತ್ತೊಬ್ಬರ ದೌರ್ಬಲ್ಯದ ಬಗ್ಗೆ ಹೆಚ್ಚು
ಮಾತನಾಡುವುದು ಬೇಡ. ನಿಮ್ಮ ಶಕ್ತಿಯ
ಅರಿವು ನಿಮಗಾಗಲಿದೆ. ಅದರಿಂದಲೇ ಪ್ರಗತಿ.

PREV
click me!

Recommended Stories

ಜಾತಕ 27 ಸೆಪ್ಟೆಂಬರ್: ಮೇಷ, ಮಿಥುನ ಮತ್ತು ಕುಂಭ ರಾಶಿಯವರಿಗೆ ಹೊಸ ಅವಕಾಶಗಳು ಸಿಗಬಹುದು
ಜಾತಕ ಸೆಪ್ಟೆಂಬರ್ 25: ಮೇಷ, ಧನು ಮತ್ತು ಕುಂಭ ರಾಶಿಗೆ ಬಲವಾದ ಆರ್ಥಿಕ ಲಾಭ, ಬಡ್ತಿಯ ಸೂಚನೆ ಇರಬಹುದು