ನಿಮ್ಮ ಪ್ರಯತ್ನಕ್ಕೆ ಸಿಗಲಿದೆ ತಕ್ಕ ಫಲ

Published : Nov 14, 2018, 06:51 AM IST
ನಿಮ್ಮ ಪ್ರಯತ್ನಕ್ಕೆ ಸಿಗಲಿದೆ ತಕ್ಕ ಫಲ

ಸಾರಾಂಶ

ನಿಮ್ಮ ಪ್ರಯತ್ನಕ್ಕೆ ಸಿಗಲಿದೆ ತಕ್ಕ ಫಲ

ನಿಮ್ಮ ಪ್ರಯತ್ನಕ್ಕೆ ಸಿಗಲಿದೆ ತಕ್ಕ ಫಲ

ಮೇಷ
ಪಟ್ಟ ಪ್ರಯತ್ನಕ್ಕೆ ಖಂಡಿತವಾಗಿಯೂ ಫಲ
ದೊರೆಯಲಿದೆ. ಸುಮ್ಮನೆ ಕೂರುವುದಕ್ಕೆ
ಬದಲಾಗಿ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಿ.

ವೃಷಭ
ಮನಸ್ಸು ಏಕಾಂತ ಬಯಸುತ್ತದೆ. ಸುಮ್ಮನೆ
ಮೌನಕ್ಕೆ ಶರಣಾಗಿ. ಯಾರ ಬಗ್ಗೆಯೂ
ಕೆಟ್ಟದಾಗಿ ಮಾತನಾಡುವುದು ಬೇಡ.

ಮಿಥುನ
ನಿಮ್ಮ ಉಡುಪು ನಿಮ್ಮ ಆತ್ಮವಿಶ್ವಾಸ
ಹೆಚ್ಚಿಸಲಿದೆ. ಮತ್ತೊಬ್ಬರ ಶಕ್ತಿಯನ್ನು
ಪರಿಗಣಿಸಿ ಅವರಿಗೆ ಸಹಾಯ ಮಾಡುವಿರಿ.

ಕಟಕ
ಮತ್ತೊಬ್ಬರ ಸಹಾಯದಿಂದ ಕಾರ್ಯ ಸಿದ್ಧಿ.
ಅಂದುಕೊಂಡದ್ದಕ್ಕಿಂತ ಹೆಚ್ಚಿನ ಫಲ
ದೊರೆಯಲಿದೆ. ಸಂಜೆಗೆ ಶುಭ ಸುದ್ದಿ.

ಸಿಂಹ
ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ದಲ್ಲಾಳಿಗಳಿಗೆ
ಒಳ್ಳೆಯ ಲಾಭವಾಗಲಿದೆ. ತಾಯಿಯ
ಇಡುಗಂಟು ಇಂದು ನಿಮಗೆ ನೆರವಾಗಲಿದೆ.

ಕನ್ಯಾ
ಮಕ್ಕಳ ಆರೋಗ್ಯದ ಕಡೆಗೆ ಸೂಕ್ತ ಗಮನ
ಹರಿಸುವುದು ಒಳಿತು. ಕಿರು ಪ್ರವಾಸ
ಮಾಡಲಿದ್ದೀರಿ. ಗಣ್ಯರ ವ್ಯಕ್ತಿಗಳ ಭೇಟಿ.

ತುಲಾ 
ಬುದ್ದಿ ಹೇಳುವ ಮಂದಿ ಸಾಕಷ್ಟು ಸಿಗುತ್ತಾರೆ.
ಎಲ್ಲವನ್ನೂ ಕೇಳಿಸಿಕೊಳ್ಳಿ. ಆದರೆ ನಿಮಗೆ ಸರಿ
ಎನ್ನಿಸಿದ್ದನ್ನು ಕಾರ್ಯರೂಪಕ್ಕೆ ತನ್ನಿ.

ವೃಶ್ಚಿಕ
ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು
ಸಂಜೆಯ ವೇಳೆಗೆ ತುಸು ಪ್ರಗತಿ ಕಾಣಲಿದೆ.
ಹಿಡಿದ ಕಾರ್ಯದಲ್ಲಿ ಮುನ್ನಡೆ ಸಿಗಲಿದೆ. 

ಧನುಸ್ಸು
ಅಪರಿಚಿತ ಜಾಗದಲ್ಲಿ, ಅಪರಿಚಿತ
ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ತಾಳ್ಮೆ
ಇರಲಿ. ಹೆಚ್ಚು ಓಡಾಟ ಸಾಧ್ಯವಾಗಲಿದೆ.

ಮಕರ
ಸಿಡುಕಿನಿಂದ ಏನೂ ಮಾಡಲು ಸಾಧ್ಯವಿಲ್ಲ.
ಮಕ್ಕಳು ನಿಮ್ಮನ್ನು ಕಂಡರೆ ಭಯಪಡುವುದು
ಬೇಡ. ಎಲ್ಲರೊಡನೆ ಪ್ರೀತಿಯಿಂದ ವರ್ತಿಸಿ.

ಕುಂಭ
ಒಳ್ಳೆಯ ಸಂಗೀತ ಕೇಳುವಿರಿ. ಮನಸ್ಸಿಗೆ
ನೆಮ್ಮದಿ ದೊರೆಯಲಿದೆ. ಮತ್ತು ಪ್ರೀತಿ
ಪಾತ್ರರ ಜೊತೆ ನಾಲ್ಕು ಒಳ್ಳೆಯ ಮಾತನಾಡಿ.

ಮೀನ 
ನೀವು ಹೆಚ್ಚಾಗಿ ನಂಬಿದ ವ್ಯಕ್ತಿಗಳಿಂದ
ಸಹಾಯವಾಗಲಿದೆ. ಹಣಕಾಸಿನ ವ್ಯವಹಾರ
ದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು.

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ