ಧನ ತ್ರಯೋದಶಿಯಂದು ಈ 6 ವಸ್ತು ಖರೀದಿ ನಿಮ್ಮ ಜೀವನವನ್ನೇ ಬದಲಾಯಿಸಬಲ್ಲದು: ಸಮೃದ್ಧಿ, ಸುಖ ನಿಮ್ಮದಾಗುವುದು

Published : Oct 24, 2026, 01:19 PM IST
Dhan Trayodashi

ಸಾರಾಂಶ

ದೀಪಾವಳಿಯ ಆರಂಭದ ದಿನವಾದ ಧನ ತ್ರಯೋದಶಿಯಂದು ಹೊಸ ವಸ್ತುಗಳನ್ನು ಖರೀದಿಸುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಈ ಶುಭ ದಿನದಂದು ಪೊರಕೆ, ಧನಿಯಾ, ಹಿತ್ತಾಳೆ ಪಾತ್ರೆ, ಉಪ್ಪು ಹಾಗೂ ಲಕ್ಷ್ಮೀ-ಗಣಪತಿ ಮೂರ್ತಿಗಳನ್ನು ಖರೀದಿಸುವುದು ಅತ್ಯಂತ ಶುಭದಾಯಕ. ಇದರಿಂದ ಮನೆಯಲ್ಲಿ ಬಡತನ ತೊಲಗಿ ಅದೃಷ್ಟ ಒಲಿಯುತ್ತದೆ.

ಇನ್ನೇನು ದೀಪಾವಳಿ ಹಬ್ಬದ ಸಡಗರ ಆರಂಭವಾಗಿಬಿಟ್ಟಿದೆ. ಬರುವ ನವೆಂಬರ್​ 8ರಂದು ಲಕ್ಷ್ಮೀ ಪೂಜೆ ನಡೆಯುತ್ತಿದ್ದು, ಅದಕ್ಕೂ ಮುನ್ನ ಅಂದರೆ ದೀಪಾವಳಿಯ ಆರಂಭದ ದಿನ ಅರ್ಥಾತ್​ ನವೆಂಬರ್​ 6ರಂದು ಧನ ತ್ರಯೋದಶಿ ಆರಂಭವಾಗುತ್ತದೆ. ಇದನ್ನು ಹೆಚ್ಚಾಗಿ ಧಂತೇರಸ್​ ಎಂದೂ ಕರೆಯಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಬರುವ ದಿನವಾದ ಈ ಶುಭದಿನದಂದು ಹೊಸ ವಸ್ತುಗಳನ್ನು ಖರೀದಿ ಮಾಡುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಇದು ಅದೃಷ್ಟ, ಸಮೃದ್ಧಿಯ ಬಾಗಿಲು ಕೂಡ ತೆರೆಯುತ್ತದೆ. ಧನ ತ್ರಯೋದಶಿ ಹಬ್ಬವು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಈ ದಿನದಂದು, ಧನ್ವಂತರಿ ಮತ್ತು ಕುಬೇರನನ್ನು ಮನೆಗಳಲ್ಲಿ ಪೂಜಿಸಲಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಏನನ್ನು ಖರೀದಿ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

1) ಮೊದಲನೆಯ ಸ್ಥಾನದಲ್ಲಿ ಇರುವುದು ಪೊರಕೆ. ಹೌದು. ಪೊರಕೆಯನ್ನು ಹೆಚ್ಚಿನ ಸಂದರ್ಭಗಳಲ್ಲಿ ಅಪಶಕುನ ಎಂದೇ ಭಾವಿಸಲಾಗುತ್ತದೆ.ಆದರೆ ಪೊರಕೆಗೆ ಧಾರ್ಮಿಕ ನಂಬಿಕೆಗಳಲ್ಲಿ ವಿಶೇಷ ಸ್ಥಾನವಿದೆ. ಧಂತೇರಸ್​ ದಿನದಂದು ಇದನ್ನು ಖರೀಸಿದರೆ ಅತ್ಯಂತ ಶುಭವಾಗುವುದು ಎನ್ನುವ ನಂಬಿಕೆ ಇದೆ.

2) ಈ ದಿನದಂದು ಧನಿಯಾ (ಕೊತ್ತಂಬರಿ ಕಾಳು) ಖರೀದಿಸುವುದು ಕೂಡ ಅದೃಷ್ಟದ ಬಾಗಿಲು ತೆರೆದಂತೆ ಎನ್ನುವ ನಂಬಿಕೆ ಇದೆ.

3) ಈ ದಿನದಂದು ಚಿನ್ನ, ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆಯ ಪಾತ್ರೆ ಖರೀದಿಸಿದರೆ ಅದೃಷ್ಟ ಸದಾ ಮನೆಯ ಬಾಗಿಲಿನಲ್ಲಿಯೇ ನೆಲೆಸಿರುತ್ತದೆ. ಈ ದಿನಗಳಲ್ಲಿ ಚಿನ್ನ, ಬೆಳ್ಳಿಯ ಪಾತ್ರೆ ಖರೀದಿ ಜನಸಾಮಾನ್ಯರಿಗೆ ಬಹಳ ದೂರವೇ ಬಿಡಿ. ಆದ್ದರಿಂದ ಹಿತ್ತಾಳೆ ಅಥವಾ ತಾಮ್ರದ ಪಾತ್ರೆಯನ್ನು ಖರೀದಿಸಿ ಅದೃಷ್ಟವನ್ನು ತರಿಸಿಕೊಳ್ಳಿ.

4) ಭತ್ತದ ಅರಳು, ಭತಾಶೆ, ಬತ್ತಾಸು ಎಂದೆಲ್ಲಾ ಕರೆಸಿಕೊಳ್ಳುವ ಅರಳು-ಬತ್ತಾಸು ಖರೀದಿಯಿಂದಲೂ ಜೀವನದಲ್ಲಿ ನೆಮ್ಮದಿ, ಶಾಂತಿ ಸಿಗುತ್ತದೆ.

5) ಈ ದಿನದಂದು ಉಪ್ಪನ್ನು ಖರೀದಿಸಿ, ಪ್ರತಿನಿತ್ಯವೂ ಆಹಾರದಲ್ಲಿ ಸೇವಿಸಬೇಕು. ಸಾಮಾನ್ಯವಾಗಿ ಉಪ್ಪನ್ನು ಶುಕ್ರವಾರದಂದು ಖರೀದಿ ಮಾಡಬೇಕು ಎನ್ನುವ ಪ್ರತೀತಿ ಇದೆ. ಆದರೆ ಧಂತೇರಸ್​ ದಿನ ಯಾವುದೇ ವಾರ ಬಂದರೂ ಅದು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಬಡತನ ತೊಲಗುತ್ತದೆ ಎಂದೇ ಹೇಳಲಾಗುತ್ತದೆ.

6) ಈ ದಿನದಂದು ಲಕ್ಷ್ಮೀ ಮತ್ತು ಗಣಪತಿಯ ಚಿಕ್ಕ ಮೂರ್ತಿಯನ್ನು ಖರೀದಿ ಮಾಡುವುದರಿಂದ ಅತ್ಯಂತ ಶುಭದಾಯಕವಾಗಲಿದೆ.

PREV
Read more Articles on
click me!

Recommended Stories

417 ವರ್ಷಗಳ ಐತಿಹಾಸಿಕ ವಜ್ರಮುಷ್ಠಿ ಕಾಳಗಕ್ಕೆ ತಡೆಯೊಡ್ಡಿದ್ದು ಪೊಲೀಸ್, ಪತ್ರಿಕಾಗೋಷ್ಠಿಯಲ್ಲಿ ಜಟ್ಟಿಗಳ ಆರೋಪ
ಅಕ್ಟೋಬರ್ 24 ರ ಜಾತಕ: ಶನಿವಾರ ಇಂದು ವ್ಯಾಘಾತ ಯೋಗ, ಕುಂಭ ರಾಶಿಯವರಿಗೆ ವೃದ್ಧಿ ಮತ್ತು ವೃಷಭ ರಾಶಿಯವರಿಗೆ ಉದ್ಯೋಗ