Asianet Suvarna News Asianet Suvarna News

ಮಾರಾಟಕ್ಕಿದೆ ಸುಂದರ ದ್ವೀಪದ ಐಷಾರಾಮಿ ಬಂಗಲೆ, ಬೆಲೆ ಎಷ್ಟು ಗೊತ್ತಾ?

ಕೈನಲ್ಲಿ ಕೋಟಿ ಕೋಟಿ ಹಣವಿದೆ, ಎಲ್ಲಾದ್ರೂ ಇನ್ವೆಸ್ಟ್ ಮಾಡಬೇಕು ಅನ್ನೋರು ಈ ಸುದ್ದಿ ಓದಿ. ಐಲ್ಯಾಂಡ್ ನಲ್ಲಿ ಬಂಗಲೆ ಖರೀದಿ ಮಾಡುವ ಅವಕಾಶ ನಿಮಗಿದೆ. ಅತ್ಯಂತ ಶಾಂತ ಪರಿಸರದಲ್ಲಿ ಸಮುದ್ರದ ಮಧ್ಯೆ ನಿಮ್ಮದೊಂದು ಮನೆ ಖರೀದಿ ಮಾಡಿ.

Blacks Island Eleven Bungalows For Sale roo
Author
First Published Apr 13, 2024, 3:06 PM IST

ಸ್ವಂತ ಮನೆ ಹೊಂದಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದೆ. ಇದೇ ಆಸೆ ಈಡೇರಿಸಿಕೊಳ್ಳಲು ಜನರು ಬೆವರು ಸುರಿಸಿ ಕೆಲಸ ಮಾಡ್ತಾರೆ. ಒತ್ತಡದಲ್ಲಿ ಜೀವನ ನಡೆಸ್ತಾರೆ. ಸಾಲ ಮಾಡಿ ಮನೆ ಖರೀದಿ ಮಾಡಿದ್ರೂ ಕೆಲವೊಮ್ಮೆ ನೆಮ್ಮದಿ ಇರೋದಿಲ್ಲ. ಈಗ ಹಳ್ಳಿಗಳು ನಗರವಾಗ್ತಿದ್ದರೆ, ನಗರಗಳು ಮಹಾನಗರವಾಗ್ತಿದೆ. ಕಾಲು ಹಾಕಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದರ ಮೇಲೆ ಒಂದರಂತೆ ಸಣ್ಣ ಸಣ್ಣ ಮನೆಗಳು ನಮಗೆ ಸಿಗ್ತಿದ್ದು, ಅದ್ರ ಬೆಲೆ ಕೂಡ ತುಂಬಾ ದುಬಾರಿ. ನೀವು ಪ್ರಶಾಂತ ಸ್ಥಳದಲ್ಲಿ ನೆಮ್ಮದಿ ಜೀವನ ನಡೆಸಬೇಕು ಅಂದ್ರೆ ಇಲ್ಲಿನ ನೀಡುವ ಹಣಕ್ಕಿಂತ ಸ್ವಲ್ಪ ಹಣವನ್ನು ಹೆಚ್ಚಿಗೆ ಹೊಂದಿಸಿ ಸುಂದರ ದ್ವೀಪದಲ್ಲಿ ಮನೆ ಖರೀದಿ ಮಾಡಬಹುದು. ಈಗ ನಾವು ಹೇಳ್ತಿರೋ ದ್ವೀಪದಲ್ಲಿ 11 ಬಂಗಲೆ ಖಾಲಿ ಇದೆ. ಆ ದ್ವೀಪದಲ್ಲಿ 26 ಬಂಗಲೆಯಿದ್ದು ಅದ್ರಲ್ಲಿ 11 ಬಂಗಲೆ ಮಾರಾಟಕ್ಕಿದೆ. 

ಬಂಗಲೆ (Bungalow) ಮಾರಾಟಕ್ಕಿರೋದು ಬ್ಲ್ಯಾಕ್ಸ್ ಐಲ್ಯಾಂಡ್ (Island) ನಲ್ಲಿ.  ಇದು ಅಮೆರಿಕದ ಫ್ಲೋರಿಡಾ (Florida) ದಲ್ಲಿದೆ. 18ನೇ ಶತಮಾನದಲ್ಲಿ ಕುಖ್ಯಾತ ದರೋಡೆಕೋರನೊಬ್ಬ ಇಲ್ಲಿ ವಾಸ ಮಾಡ್ತಿದ್ದನಂತೆ. ಆತನ ಹೆಸರು ಬ್ಲ್ಯಾಕ್ ಸ್ಯಾಮ್. ಮುಂದೆ ಅದೇ ಹೆಸರು ಈ ದ್ವೀಪಕ್ಕೆ ಬಂದಿದೆ.

ಭೂಮಿ ಮೇಲಿನ ಪಾತಾಳ ಲೋಕ ನೋಡಿದ್ದೀರಾ? ಇಲ್ಲಿ 100ಕ್ಕೂ ಅಧಿಕ ಜನ ವಾಸಿಸ್ತಾರೆ!

ಏಳು ಎಕರೆ ಪ್ರದೇಶದಲ್ಲಿ ಈ ಸುಂದರ ದ್ವೀಪವಿದೆ. ಆ ದ್ವೀಪದ 11 ಬಂಗಲೆ ಈಗ ಮಾರಾಟಕ್ಕಿದೆ. ಸೇಂಟ್ ಜೋಸೆಫ್ ಕೊಲ್ಲಿಯ ಸುಂದರವಾದ ನೀರಿನಿಂದ ಈ ಐಲ್ಯಾಂಡ್ ಆವೃತವಾಗಿದೆ. 

ಎರಡು ಬೆಡ್ ರೂಮ್ ಜೊತೆ ಒಂದು ಕಿಂಗ್ ಬೆಡ್ ಹೊಂದಿರುವ ಒಂದು ಅಂತಸ್ತಿನ ಬಂಗಲೆ ಬೆಲೆ 1,500,000 ಡಾಲರ್. ಇನ್ನು ಎರಡು ಅಂತಸ್ತಿನ ಬಂಗಲೆಯಲ್ಲಿ ಕಿಂಗ್ ಬೆಡ್‌ಗಳೊಂದಿಗೆ 2 ಮಲಗುವ ಕೋಣೆ ಮತ್ತು ಬಂಕ್‌ಬೆಡ್‌ಗಳೊಂದಿಗೆ ಒಂದು ಮಲಗುವ ಕೋಣೆ ಇದೆ. ಅದ್ರ ಬೆಲೆ 1,600,000 ಡಾಲರ್. ಬಂಗಲೆ ಜೊತೆ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ಲಿನಿನ್‌ಗಳು, ಅಡುಗೆ ಸಾಮಗ್ರಿಗಳು, ವಾಷರ್ ಮತ್ತು ಡ್ರೈಯರ್‌ಗಳೊಂದಿಗೆ ಟರ್ನ್‌ಕೀ ನೀಡಲಾಗುತ್ತದೆ. ಲಾಂಡ್ರಿ ರೂಮ್, ಲಿವಿಂಗ್ ರೂಮ್, ಡೈನಿಂಗ್ ರೂಮ್ ಮತ್ತು ಬಾಲ್ಕನಿಯಿಂದ ನೀವು ಬೀಚ್ ಅನ್ನು ವೀಕ್ಷಿಸಬಹುದು.

ಇದು ಬಂಗಲೆ ವಿಷ್ಯವಾದ್ರೆ ಇನ್ನು ದ್ವೀಪದಲ್ಲಿ ಐಷಾರಾಮಿ ನಾಲ್ಕು ಅಂತಸ್ತಿನ ಕ್ಲಬ್ಹೌಸ್, ಗಿಫ್ಟ್ ಶಾಪ್, ಕಬಾನಾ ಬಾರ್, ಈಜುಕೊಳ, ಖಾಸಗಿ ಬಿಳಿ ಮರಳಿನ ಬೀಚ್ ವ್ಯವಸ್ಥೆ ಇದೆ. ಅಲ್ಲದೆ, ಮೀನುಗಾರಿಕೆ, ಬೋಟಿಂಗ್, ಕಯಾಕಿಂಗ್, ಜೆಟ್ ಸ್ಕೀಯಿಂಗ್, ಪ್ಯಾಡಲ್-ಬೋರ್ಡಿಂಗ್, ಬೀಚ್ ವಾಲಿಬಾಲನ್ನು ನೀವು ಎಂಜಾಯ್ ಮಾಡಬಹುದು. 

ಬ್ಲ್ಯಾಕ್ಸ್ ಐಲ್ಯಾಂಡ್ ಗೆ ತಲ್ಲಹಸ್ಸಿಯಿಂದ ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಸಬೇಕು. ನೀವು ದೋಣಿ, ಹಡಗು ಅಥವಾ ಜೆಟ್ ವಿಮಾನದ ಮೂಲಕ ಪ್ರಯಾಣಿಸಬಹುದು. ಖಾಸಗಿ ಹಡಗು ಹೊಂದಲು ಅನುಮತಿ ಇದೆ. 50 ಅಡಿವರೆಗಿನ ದೊಡ್ಡ ದೋಣಿಯನ್ನು ನೀವು ಇಲ್ಲಿಗೆ ತರಬಹುದು. ನಿಮ್ಮ ಬಂಗಲೆಗೆ ಒಬ್ಬ ಸಹಾಯಕನನ್ನು ನೇಮಿಸಲಾಗುತ್ತದೆ. ಆತ ನಿಮಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುತ್ತಾನೆ. ಈ ದ್ವೀಊಪ ಸುರಕ್ಷಿತವಾಗಿದ್ದು, ಗೌಪ್ಯತೆಗೆ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಇಲ್ಲಿಗೆ ಬರಲು ಜನರು ಆಸಕ್ತಿ ತೋರುತ್ತಾರೆ. ಅಟ್ಲಾಂಟಾ ಬ್ರೇವ್ಸ್ ಆಟಗಾರ ರಯಾನ್ ಕ್ಲೆಸ್ಕೊ ಕೂಡ ಇಲ್ಲಿ ವಾಸಿಸುತ್ತಿದ್ದರು. 

ಸಫಾರಿ ಮಾಡುತ್ತಾ ಹುಲಿಗಳನ್ನು ನೋಡಬಹುದಾದ ಭಾರತದ ಪ್ರಮುಖ ತಾಣಗಳಿವು

ಹಡಗೊಂದು ಈ ಬ್ಲ್ಯಾಕ್ ಐಲ್ಯಾಂಡ್  ಪತ್ತೆ ಮಾಡಿತ್ತು. ಕ್ಯಾಪ್ಟನ್ ಲೀ ಡಿಪಾಲೊ ಈ ಬಗ್ಗೆ 2018 ರಲ್ಲಿ ಹೇಳಿದ್ದರು. ಅವರು  ಮೂರು ಹಡಗುಗಳ ಕಮೋಡೋರ್ ಆಗಿದ್ದರು. ನ್ಯೂ ಇಂಗ್ಲೆಂಡ್‌ಗೆ ಮೂರು ಹಡಗನ್ನು ತೆಗೆದುಕೊಂಡು ಹೋಗ್ತಿದ್ದರು. ಆಗ ಭೀಕರ ಚಂಡಮಾರುತ ಬಂದಿತ್ತು.  ಎಲ್ಲಾ ಹಡಗುಗಳು ಸಮುದ್ರದಲ್ಲಿ ಕಳೆದುಹೋದವು. ನಂತರ ಈ ದ್ವೀಪದಲ್ಲಿ ಕಡಲ್ಗಳ್ಳರು ಲೂಟಿ ಮಾಡಿದ ಒಂದು ಹಡಗು ನಮಗೆ ಸಿಕ್ಕಿತ್ತು. ಅಲ್ಲಿದ್ದವರು ಅಪಾಯಕಾರಿಯಾಗಿದ್ದರು ಎಂದು  ಲೀ ಡಿಪಾಲೊ ಹೇಳಿದ್ದರು. 

Follow Us:
Download App:
  • android
  • ios