Asianet Suvarna News Asianet Suvarna News

ಭಾರತದ ಎಲ್ಲ ರೈಲ್ವೆ ನಿಲ್ದಾಣದ ಗಡಿಯಾರ ಒಂದೇ ಟೈಂ ತೋರಿಸುತ್ತಾ?

ರೈಲಲ್ಲಿ ಪ್ರಯಾಣ ಬೆಳೆಸುವ ನಾವು 12 ಗಂಟೆ ಬದಲು 24 ಗಂಟೆ ಲೆಕ್ಕಾಚಾರ ತಿಳಿದಿರಬೇಕು. ಹಾಗೆ ಸಮಯಕ್ಕೆ ಸರಿಯಾಗಿ ರೈಲ್ವೆ ನಿಲ್ದಾಣಕ್ಕೆ ಹೋದ್ರೆ ಮಾತ್ರ ರೈಲು ಹಿಡಿಯಲು ಸಾಧ್ಯ. ರೈಲ್ವೆ ನಿಲ್ದಾಣದಲ್ಲಿ ನಾವು ಸಮಯ ನೋಡ್ಬಹುದು. ಎಲ್ಲ ನಿಲ್ದಾಣದಲ್ಲಿರುವ  ಗಡಿಯಾರ ಒಂದೇ ಟೈಂ ತೋರಿಸುತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
 

Indian Railway Stations Show Same Time Know How Clocks Work roo
Author
First Published Apr 26, 2024, 1:11 PM IST

ರೈಲ್ವೆ ನಿಲ್ದಾಣಕ್ಕೆ ತಲುಪುವ ಜನರು ಮೊದಲು ಮಾಡುವ ಕೆಲಸ ರೈಲ್ವೆ ನಿಲ್ದಾಣದಲ್ಲಿರುವ ಗಡಿಯಾರದಲ್ಲಿ ಎಷ್ಟು ಟೈಂ ಆಗಿದೆ ಎಂದು. ನಮ್ಮ ಬಳಿ ವಾಚ್, ಮೊಬೈಲ್ ಏನೇ ಇರಲಿ ಜನರು ರೈಲಿನ ಟೈಂ ಪತ್ತೆ ಮಾಡಲು ರೈಲ್ವೆ ನಿಲ್ದಾಣದಲ್ಲಿರುವ ಗಡಿಯಾರವನ್ನೇ ನೋಡ್ತಾರೆ. ಸಾಮಾನ್ಯವಾಗಿ ಜನರ ವಾಚ್ ಅಥವಾ ಮೊಬೈಲಲ್ಲಿ ತೋರಿಸುವ ಟೈಂನಲ್ಲಿ ಸಣ್ಣಪುಟ್ಟ ಬದಲಾವಣೆ ಇರುತ್ತದೆ. ನನ್ನ ವಾಚ್ ನಲ್ಲಿ ಟೈಂ ಇಷ್ಟಾಗಿದೆ, ನಿನ್ನಲ್ಲಿ ಎಂದು ಜನರು ಪ್ರಶ್ನೆ ಮಾಡ್ತಿರುತ್ತಾರೆ. ವಾಚ್, ಮೊಬೈಲ್ ನಂತೆಯೇ ದೇಶದಲ್ಲಿ ಸಣ್ಣ ಹಾಗೂ ದೊಡ್ಡ ರೈಲ್ವೆ ನಿಲ್ದಾಣದಲ್ಲಿರುವ ಗಡಿಯಾರದಲ್ಲೂ ಈ ಬದಲಾವಣೆ ಇರುತ್ತಾ ಎನ್ನುವ ಪ್ರಶ್ನೆ ಜನರಲ್ಲಿರಬಹುದು. ಒಂದ್ವೇಳೆ ಒಂದೇ ಆಗಿದ್ದರೆ ಅದನ್ನು ಹೇಗೆ ಸೆಟ್ ಮಾಡಿರ್ತಾರೆ ಎಂಬ ಪ್ರಶ್ನೆ ಕೂಡ ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ದೇಶದಲ್ಲಿ ಸಣ್ಣ ಹಾಗೂ ದೊಡ್ಡ ರೈಲ್ವೆ (Railway) ನಿಲ್ದಾಣಗಳ ಸಂಖ್ಯೆ ಸುಮಾರು 7000ಕ್ಕೂ ಹೆಚ್ಚಿದೆ. ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ತೋರಿಸುವ ಟೈಂ (Time) ಒಂದೇ ಆಗಿದೆ. ಬೇಕಾದಲ್ಲಿ ನೀವು ಒಂದು ರೈಲ್ವೆ ನಿಲ್ದಾಣಕ್ಕೆ ಹೋಗಿ ನಿಮ್ಮ ಸ್ನೇಹಿತರನ್ನು ಇನ್ನೊಂದು ರೈಲ್ವೆ ನಿಲ್ದಾಣಕ್ಕೆ ಕಳುಹಿಸಿ ಚೆಕ್ ಮಾಡಬಹುದು. 

INTERESTING FACTS : ಇಲ್ಲಿನ‌ ಜನ‌ ಕಾರ್ ಲಾಕ್ ಮಾಡೋದೇ ಇಲ್ಲ, ಕಾರಣ ಹೇಳ್ತೀವಿ ಕೇಳಿ!

ರೈಲ್ವೆ ನಿಲ್ದಾಣದ ಎಲ್ಲ ಗಡಿಯಾರ (Clock) ಒಂದೇ ಟೈಂ ತೋರಿಸಲು ಇದು ಕಾರಣ : ಬಹುತೇಕ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಡಿಜಿಟಲ್ ಗಡಿಯಾರವಿದೆ. ಅದು ಗಂಟೆಗಳು ಮತ್ತು ನಿಮಿಷಗಳು ಮತ್ತು ಸೆಕೆಂಡುಗಳನ್ನು ತಿಳಿಸುತ್ತದೆ. ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಗಡಿಯಾರಗಳು ರೈಲ್ವೇಯ ಪಿಎಸ್ಯು ಸೆಂಟರ್ ಫಾರ್ ರೈಲ್ವೇ ಮಾಹಿತಿ ವ್ಯವಸ್ಥೆಗೆ (CRIS) ಸಂಪರ್ಕ ಹೊಂದಿವೆ. ಸಿಆರ್ ಐಎಸ್ ರೈಲ್ವೆಗಾಗಿ ಸಾಫ್ಟ್‌ವೇರ್ ತಯಾರಿಸುತ್ತದೆ.  ಆನ್‌ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಅಪ್ಲಿಕೇಷನ್ ಕೂಡ ಇದೇ ತಯಾರಿಸುತ್ತದೆ. ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಎಲ್ಲ ಡಿಜಿಟಲ್ ಗಡಿಯಾರಕ್ಕೆ ಸಾಫ್ಟವೇರ್ ಇದೆ. ಈ ಸಾಫ್ಟವೇರ್ ಸಹಾಯದಿಂದ ಎಲ್ಲ ಗಡಿಯಾರ ಒಂದೇ ಟೈಂ ತೋರಿಸುತ್ತದೆ. 

ಕೀ ಗಡಿಯಾರ : ಈಗ ಭಾರತದ ಒಂದು ರೈಲ್ವೆ ನಿಲ್ದಾಣವನ್ನು ಹೊರತುಪಡಿಸಿ ಎಲ್ಲ ರೈಲ್ವೆ ನಿಲ್ದಾಣದಲ್ಲಿ ಡಿಜಿಟಲ್ ಗಡಿಯಾರವಿದೆ. ಒಂದು ರೈಲ್ವೆ ನಿಲ್ದಾಣದಲ್ಲಿ ಮಾತ್ರ ಕೀ ಗಡಿಯಾರವನ್ನು ನೀವು ನೋಡ್ಬಹುದು. ಮುಂಬೈನ ಸಿಎಸ್ಟಿ ರೈಲು ನಿಲ್ದಾಣದಲ್ಲಿ ಕೀ ಗಡಿಯಾರ ನೋಡಬಹುದು. ಬೆಳಿಗ್ಗೆ ಸಿಬ್ಬಂದಿ ಅದಕ್ಕೆ ಕೀ ಕೊಡುತ್ತಾರೆ.  

ಹೀಗೂ ಉಂಟೇ?! ಈ ಮನೆಯ 6 ಕೋಣೆಗಳು ರಾಜಸ್ಥಾನದಲ್ಲಿದ್ದರೆ, 4 ಕೋಣೆಗಳಿರೋದು ಹರಿಯಾಣದಲ್ಲಿ!

ರೈಲಿನ ಗಡಿಯಾರ 12 ಗಂಟೆ ಬದಲು 24 ಗಂಟೆ ತೋರಿಸಲು ಕಾರಣ ಏನು? : ರೈಲ್ವೆ ನಿಲ್ದಾಣದಲ್ಲಿ ಹಾಕಿರುವ ಎಲ್ಲ ಡಿಜಿಟಲ್ ಗಡಿಯಾರ ನಿಮಗೆ 12 ಗಂಟೆ ಬದಲು 24 ಗಂಟೆ ತೋರಿಸುತ್ತದೆ. ಇದಕ್ಕೂ ಮಹತ್ವದ ಕಾರಣವಿದೆ. ರೈಲು ತನ್ನದೇ ಆದ ಸಮಯವನ್ನು ಪಾಲಿಸುತ್ತದೆ. ರೈಲ್ವೇ ಟೈಮ್ ಟೇಬಲ್ ಅಥವಾ ರೈಲಿನ ಸಮಯವನ್ನು ಅರ್ಥಮಾಡಿಕೊಳ್ಳಲು ಪ್ರಯಾಣಿಕರು ಕಷ್ಟಪಡುತ್ತಾರೆ. ರೈಲುಗಳು ದಿನದ 24 ಗಂಟೆಗಳ ಕಾಲ ಚಲಿಸುತ್ತವೆ. ರೈಲ್ವೇ 12 ಗಂಟೆಗಳ ಕಾಲಾವಧಿಯನ್ನು ಬಳಸಿದ್ದರೆ, ಹಗಲು ರಾತ್ರಿಯ ಸಮಯವನ್ನು ಹೇಳಲು, ಸಂಖ್ಯೆಗಳ ಮುಂದೆ AM ಅಥವಾ PM ಎಂದು ಬರೆಯಬೇಕಾಗಿತ್ತು. ಜನರಿಗೆ ಇದು ಮತ್ತಷ್ಟು ಗೊಂದಲವನ್ನುಂಟು ಮಾಡುತ್ತದೆ. ರಾತ್ರಿ ಮತ್ತು ಹಗಲನ್ನು ಅವರು ನೋಡದೆ ರೈಲನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. 24 ಗಂಟೆಗಳ ಸಮಯದ ಸ್ವರೂಪವು ಗೊಂದಲವನ್ನು ತಪ್ಪಿಸುತ್ತದೆ. ವೇಳಾಪಟ್ಟಿ, ಟಿಕೆಟಿಂಗ್ ವ್ಯವಸ್ಥೆ, ಕಾಯ್ದಿರಿಸುವಿಕೆ ಪ್ರಕ್ರಿಯೆಗಳು ಮತ್ತು ಇತರ ಸ್ವಯಂಚಾಲಿತ ಕಾರ್ಯಗಳ ಸಮರ್ಥ ಕಾರ್ಯಾಚರಣೆಯಲ್ಲಿ ಇದು ತುಂಬಾ ಉಪಯುಕ್ತವಾಗಿದೆ. ಎಎಂ, ಪಿಎಂ ಇರದ ಕಾರಣ ಸಮಯವನ್ನು ವೇಳಾಪಟ್ಟಿಯಲ್ಲಿ ಹಾಕುವುದು ಸುಲಭ. 

Follow Us:
Download App:
  • android
  • ios