Asianet Suvarna News Asianet Suvarna News

ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ!

  • ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳಿಂದ ಪದಕ ಬೇಟೆ
  • ಹೈ ಜಂಪ್‌ನಲ್ಲಿ ನಿಶಾದ್ ಕುಮಾರ್‌ ಬೆಳ್ಳಿ ಪದಕ ಸಾಧನೆ
  • ನಿಶಾದ್ ಕುಮಾರ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ
Tokyo Paralympics PM Modi congratulate Mens High Jump T47 Sliver medalist Nishad Kumar ckm
Author
Bengaluru, First Published Aug 29, 2021, 7:28 PM IST

ನವದೆಹಲಿ(ಆ.29): ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್‌ಗಳ ಪದಕ ಬೇಟೆ ಮುಂದುವರಿದಿದೆ. ಟೇಬಲ್ ಟೆನಿಸ್‌ನಲ್ಲಿ ಭವಿನಾ ಪಟೇಲ್ ಬೆಳ್ಳಿ ಗೆದ್ದ ಬೆನ್ನಲ್ಲೇ ಇದೀಗ ಹೈಜಂಪ್‌ನಲ್ಲಿ ನಿಶಾದ್ ಕುಮಾರ್  ಬೆಳ್ಳಿ ಪದಕ ಗೆದ್ದಿದ್ದಾರೆ.ಪದಕ ಗೆದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನಿಶಾದ್ ಕುಮಾರ್‌ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Tokyo Paralympics, ಬೆಳ್ಳಿ ತಂದ ಭಾರತಾಂಬೆಯ ಮಗಳು, ಭವಿನಾ ಪಟೇಲ್‌ಗೆ ಶುಭ ಹಾರೈಸಿದ ಮೋದಿ!

ನಿಶಾದ್ ಕುಮಾರ್ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ಕೋಟ್ಯಾಂತರ ಭಾರತೀಯರಿಗೆ ಸ್ಪೂರ್ತಿಯಾಗಿದ್ದೀರಿ. ದೇಶದ ಕೀರ್ತಿ ಪತಾಕೆ ಹಾರಿಸಿದ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ದೂರವಾಣಿ ಕರೆ ಮೂಲಕ ಮೋದಿ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನಿರಂತರ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ನಿಶಾದ್ ಕುಮಾರ್ ಧನ್ಯವಾದ ಹೇಳಿದ್ದಾರೆ.

ನಿಶಾದ್ ಕುಮಾರ್ ಬೆಳ್ಳಿ ಪದಕ ಸಾಧನೆ ಸಂತಸವನ್ನ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಟೋಕಿಯೋದಿಂದ ಸಂತಸದ ಸುದ್ದಿ ಬಂದಿದೆ. ಪುರುಷರ ಹೈ ಜಂಪ್ ಟಿ47 ವಿಭಾಗದಲ್ಲಿ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿರುವುದು ಸಂತೋಷ ತಂದಿದೆ. ನಿಶಾದ್ ಕುಮಾರ್ ಅತ್ಯುತ್ತಮ ಕೀಡಾಪಟು. ಉತ್ತಮ ಕೌಶಲ್ಯ, ಸ್ಥಿರ ಪ್ರದರ್ಶನ ನೀಡುತ್ತಿದ್ದು, ಫಲಿತಾಂಶ ದೊರಕಿದೆ. ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಪ್ಯಾರಾ ಒಲಿಂಪಿಕ್ಸ್; ಬೆಳ್ಳಿ ಗೆದ್ದ ಭವಿನಾ ಪಟೇಲ್‌ಗೆ 3 ಕೋಟಿ ರೂ ಬಹುಮಾನ ಘೋಷಣೆ!

ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಹೈಜಂಪ್‌ ಅಂತಿಮ ಸುತ್ತಿನಲ್ಲಿ ನಿಶಾದ್ ಕುಮಾರ್ 2.06 ಮೀಟರ್ ಎತ್ತರಕ್ಕೆ ಹಾರಿ ತಮ್ಮದೇ ಏಷ್ಯನ್ ಗೇಮ್ಸ್ ದಾಖಲೆ ಸರಿಗಟ್ಟಿದರು. ಅಮೆರಿಕದ ರೋಡ್ರಿಕ್ ಟೌನ್ಸೆಡ್ 2.15 ಮೀಟರ್ ಎತ್ತರ ಹಾರೋ ಮೂಲಕ ಚಿನ್ನದ ಪದಕ ಗೆದ್ದುಕೊಂಡರು.

ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡರೆ ಮತ್ತೊರ್ವ ಭಾರತೀಯ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ರಾಮ್ ಪಾಲ್ 1.94 ಮೀಟರ್ ಎಚ್ಚರ ಹಾರೋ ಮೂಲಕ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

Follow Us:
Download App:
  • android
  • ios