Asianet Suvarna News Asianet Suvarna News

'ಗಂಭೀರ್‌ಗೆ ಚಿಕಿತ್ಸೆ ಅಗತ್ಯವಿದೆ, ನಾನೇ ವೀಸಾ ಕೊಡಿಸುವೆ'

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹಾಗೂ ಗೌತಮ್ ಗಂಭೀರ್ ನಡುವಿನ ವಾಕ್ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಗಂಭೀರ್ ಟ್ವೀಟ್’ಗೆ ಅಫ್ರಿದಿ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಏನೇನಾಯ್ತು ನೀವೇ ನೋಡಿ...

Will arrange his Pakistan visa for treatment Shahid Afridi reacts to Gautam Gambhir statement
Author
Islamabad, First Published May 6, 2019, 2:23 PM IST

ಇಸ್ಲಾಮಾಬಾದ್[ಮೇ.6]: ಶಾಹಿದ್ ಅಫ್ರಿದಿ ಮತ್ತು ಗೌತಮ್ ಗಂಭೀರ್ ನಡುವಿನ ವಾಕ್ ಸಮರ ಮುಂದುವರಿದಿದ್ದು, ಗಂಭೀರ್ ಟ್ವೀಟ್’ಗೆ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ತಿರುಗೇಟು ನೀಡಿದ್ದಾರೆ.

ಮಾನಸಿಕ ಚಿಕಿತ್ಸೆ ಕೊಡಿಸುತ್ತೇನೆ, ಭಾರತಕ್ಕೆ ಬನ್ನಿ: ಅಫ್ರಿದಿಗೆ ಗಂಭೀರ್ ಆಹ್ವಾನ

ಇದೀಗ ಗಂಭೀರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಫ್ರಿದಿ, ‘ಗಂಭೀರ್‌ಗೆ ಏನೋ ಸಮಸ್ಯೆ ಇದೆ ಅನಿಸುತ್ತದೆ. ಅವರು ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು. ಬೇಕಾದರೆ ನಾನೇ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತೇನೆ. ಪಾಕಿಸ್ತಾನದಲ್ಲಿಯೇ ಒಳ್ಳೆಯ ಚಿಕಿತ್ಸೆ ಕೊಡಿಸುತ್ತೇನೆ. ಅವರಿಗೆ ನಾನೇ ಪಾಕ್ ವೀಸಾವನ್ನೂ ಕೊಡಿಸುತ್ತೇನೆ’ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ಮತ್ತೆ ತುಪ್ಪ ಸುರಿದಿದ್ದಾರೆ.

ಟೀಂ ಇಂಡಿಯಾ ವಿಶ್ವಕಪ್ ಹೀರೋ ಕಾಲೆಳೆದ ಅಫ್ರಿದಿ

ಶಾಹಿದ್ ಅಫ್ರಿದಿ ತಮ್ಮ ಆತ್ಮಕತೆ ’ಗೇಮ್ ಚೇಂಜರ್’ನಲ್ಲಿ ಟೀಂ ಇಂಡಿಯಾ ವಿಶ್ವಕಪ್ ಹೀರೋ ಗೌತಮ್ ಗಂಭೀರ್’ಗೆ ಹೇಳಿಕೊಳ್ಳುವಂತಹ ಯಾವುದೇ ಶ್ರೇಷ್ಠ ದಾಖಲೆಗಳನ್ನು ಬರೆಯದಿದ್ದರೂ, ಅಹಂಕಾರಕ್ಕೇನೂ ಕಡಿಮೆಯಿಲ್ಲ ಎಂದು ಹೇಳುವ ಮೂಲಕ ಗೌತಿ ಕಾಲೆಳೆದಿದ್ದರು. ಇದು ವಾಕ್ಸಮರಕ್ಕೆ ಕಾರಣವಾಗಿದೆ. 
 

Follow Us:
Download App:
  • android
  • ios