Asianet Suvarna News Asianet Suvarna News

ಗೊತ್ತಿರುವುದೆಲ್ಲಾ ಮಾತನಾಡಬೇಡಿ; ಕಾಮನ್ ಸೆನ್ಸ್ ಇದ್ದರೆ ಮನಸ್ಸು ಗೆಲ್ಲಬಹುದು!

ಮಾತನಾಡುವಾಗ ಕೆಲ ಅಲಿಖಿತ ನಿಯಮಗಳಿವೆ. ನಿಯಮಗಳಿಗಿಂತ ಹೆಚ್ಚಾಗಿ ಕಾಮನ್ ಸೆನ್ಸ್ ಎಂದರೂ ಸರಿಯೇ. ಆದರೆ, ಈ ಕಾಮನ್ ಸೆನ್ಸನ್ನು ಬಳಸುವವರು ಕಡಿಮೆ. ಹೀಗಾಗಿ, ಈ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಅಗತ್ಯ. 

Things You Should Never Do During a Conversation
Author
Bangalore, First Published Oct 22, 2019, 3:43 PM IST

ಪ್ರತಿಯೊಬ್ಬರಿಗೂ ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಅವರದೇ ಆದ ಮಾತಿನ ಶೈಲಿ ಇರುತ್ತದೆ. ಆದರೆ, ಮಾತುಕತೆಯೊಂದು ಉತ್ತಮವಾಗಿ, ಸುಗಮವಾಗಿ ಸಾಗಬೇಕೆಂದರೆ ಏನು ಮಾತನಾಡಬೇಕೆಂದಷ್ಟೇ ಅಲ್ಲ, ಹೇಗೆ ಮಾತನಾಡಬೇಕೆಂಬ ಪ್ರಜ್ಞೆಯೂ ಇರುವುದು ಮುಖ್ಯ. ನೀವು ಸಹೋದ್ಯೋಗಿಯೊಂದಿಗೆ, ಮನೆಯವರೊಂದಿಗೆ, ಆಗಷ್ಟೇ ಪರಿಚಯವಾದವರೊಂದಿಗೆ- ಯಾರ ಬಳಿಯೇ ಮಾತನಾಡಿ. ಆ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಏನು ಮಾತನಾಡಬಾರದು ಎಂಬುದಕ್ಕೆ ಕೆಲವೊಂದಿಷ್ಟು ಕಾಮನ್ ಸೆನ್ಸ್ ನಿಯಮಗಳನ್ನು ಪಾಲಿಸಬೇಕು. ಅವೆಂದರೆ,

- ಅವರು ಹೇಗೆ ಫೀಲ್ ಮಾಡಬೇಕು, ಮಾಡಬಾರದೆಂದು ಹೇಳುವುದು

ಯಾರಾದರೂ ನಿಮ್ಮ ಬಳಿ ಮಾತನಾಡುವಾಗ ಅವರಿಗೆ ಯಾವುದೋ ಸನ್ನಿವೇಶದಲ್ಲಿ ಹೇಗೆನಿಸಿತ್ತು ಎಂದು ಹೇಳುತ್ತಿದ್ದರೆ, ಮಧ್ಯೆ ಬಾಯಿ ಹಾಕಿ ಅವರು ಹಾಗೆ ಫೀಲ್ ಮಾಡಿದ್ದು ತಪ್ಪು, ಅವರಿಗೆ ಬೇರೆ ತರ ಅನಿಸಬೇಕಿತ್ತು ಎಂದು ಹೇಳಿ ಅವರ ಭಾವನೆಗಳನ್ನು ಅವಮಾನಿಸಬೇಡಿ. ನಿಮಗೆ ಅವರು ಹೇಗೇ ಯೋಚಿಸಬೇಕಿತ್ತು ಎಂದೆನಿಸಿದರೂ, ಆ ಸಂದರ್ಭದಲ್ಲಿ ಅವರಿಗೆ ಅನಿಸುವ ಭಾವನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ವ್ಯಕ್ತಿಯನ್ನು ಅವರ ಸೆಂಟಿಮೆಂಟ್ ಇಟ್ಟುಕೊಂಡು ಅಳೆಯುವುದರಿಂದ ಅವರು ಇನ್ನೂ ಕುಗ್ಗುತ್ತಾರೆ. ಹಾಗಾಗಿ, ಯಾರಾದರೂ ಏನಾದರೂ ಹೇಳಿಕೊಳ್ಳುತ್ತಿದ್ದರೆ ಅದಕ್ಕೆ ಕಿವಿಯಾಗಿ, ಅತ್ತರೆ ಹೆಗಲು ಕೊಡಿ. ಅಷ್ಟು ಸಾಕು, ಅವರು ಸಮಾಧಾನವಾಗಲು. ನಿಮ್ಮ ತೀರ್ಪು, ಅಭಿಪ್ರಾಯ ಅವರಿಗೆ ಖಂಡಿತಾ ಬೇಕಿರುವುದಿಲ್ಲ.

ಆರೋಗ್ಯಕರವಾಗಿರಲಿ ಮಕ್ಕಳ ಡಯಟ್‌, ದೂರವಿರಲಿ ಬ್ರೆಡ್ ಬಿಸ್ಕೇಟ್ ಡೋನಟ್! 

- ನಿಮಗೆ ತಪ್ಪೆನಿಸದಿದ್ದರೂ ಸಾರಿ ಕೇಳುವುದು

ನಮಗೆ ಸಾರಿ ಕೇಳುವುದು ಚಟವಾಗಿ ಬಿಟ್ಟಿದೆ. ಸುಮ್ಮನೆ ಬೇಡದ ಸಂದರ್ಭದಲ್ಲೆಲ್ಲ ಸಾರಿ ಕೇಳಿ ಎದುರಿರುವವರನ್ನು ಮುಜುಗರಕ್ಕೀಡು ಮಾಡಿಬಿಡುತ್ತೇವೆ. ನಿಮ್ಮ ಆದರ್ಶ, ನೈತಿಕತೆಗೆ ವಿರುದ್ಧ ಹೋಗಿದ್ದೀರಿ ಎನಿಸದಿದ್ದಲ್ಲಿ ಸಾರಿ ಕೇಳಬೇಡಿ. ಬದಲಿಗೆ ನೀವು ತಡವಾಗಿ ಹೋಗಿದ್ದಕ್ಕೆ ಸಾರಿ ಎನ್ನುವ ಬದಲು ನನಗಾಗಿ ಕಾದಿದ್ದಕ್ಕೆ ಥ್ಯಾಂಕ್ಸ್ ಎನ್ನಬಹುದಲ್ಲ... ಇಂಥ ಸಣ್ಣ ಬದಲಾವಣೆಗಳು ಸಂಭಾಷಣೆಯ ನಡುವೆ ಉತ್ತಮ ಸಂಬಂಧ ಏರ್ಪಡಿಸುತ್ತವೆ. 

- ಇನ್ನೊಬ್ಬರ ಮಾತು ತಪ್ಪೆಂದು ಹೇಳುವುದು

ಇನ್ನೊಬ್ಬರು ಹೇಳುತ್ತಿರುವುದು ತಪ್ಪು ಎಂದು ನಿಮಗೆ ಗೊತ್ತಿದ್ದರೂ, ಅವರು ಹೇಳಿದ್ದು ತಪ್ಪು ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಡುವುದು ಸರಿಯಲ್ಲ. ಯಾರಿಗೆ ಕೂಡಾ ಅವರು ಹೇಳಿದ್ದು ತಪ್ಪೆಂದು ಹೇಳಿದರೆ ಇಷ್ಟವಾಗುವುದಿಲ್ಲ. ಜತೆಗೆ ಅವಮಾನವೆನಿಸುತ್ತದೆ. ಕಾಮ್ ಆಗಿದ್ದು, ಸಾಕ್ಷಿ ಸಮೇತ ವಿಷಯ ಹೇಳಿ, ಮತ್ತೊಬ್ಬರು ಹೇಳುವ ಅಭಿಪ್ರಾಯವನ್ನೂ ಸಮಚಿತ್ತದಿಂದ ಕೇಳಿಸಿಕೊಳ್ಳುವುದು ಉತ್ತಮ ಸಂವಹನ ಕ್ರಮ.

ಕಾಲ ಕೆಟ್ಟೋಗಿಲ್ಲ ಸ್ವಾಮಿ, ನಮ್ಮ ಕಾಲನೇ ಬೆಸ್ಟ್!

- ನೀವೆಷ್ಟು ಬ್ಯುಸಿ ಎಂಬುದನ್ನು ವಿವರವಾಗಿ ಹೇಳುವುದು

ನಿಮ್ಮದು ಕೊನೆಯೇ ಇರದ ಟು ಡು ಲಿಸ್ಟ್ ಇರಬಹುದು. ಆದರೆ, ಅದನ್ನು ಮಾತಿನ ಮಧ್ಯೆ ತರುವುದು ಸರಿಯಲ್ಲ. ನೀವು ಅದೆಷ್ಟು ಬ್ಯುಸಿ, ಎಷ್ಟು ಕೆಲಸ ಮಾಡಿದ್ದೀರಿ, ಎಷ್ಟೊಂದು ಮಾಡಲಿದೆ ಎಂಬುದೆಲ್ಲ ನೆಗೆಟಿವ್ ಮಾತುಕತೆ ಎನಿಸುತ್ತದೆ. ಇನ್ನೊಬ್ಬರೊಂದಿಗೆ ಮಾತನಾಡುವಾಗ ಅವರು ಬಹಳ ಮುಖ್ಯ ವ್ಯಕ್ತಿ ಎಂದು ಅವರಿಗೆನಿಸುವಂತೆ ಮಾತನಾಡಬೇಕೇ ಹೊರತು, ನೀವೇ ಬಹಳ ಪ್ರಮುಖ ವ್ಯಕ್ತಿ ಎಂದು ಹೇಳಿಕೊಳ್ಳುವಂತಿರಬಾರದು. 

- ಕೇಳುವ ಬದಲು ಮಧ್ಯೆ ಬಾಯಿ ಹಾಕುವುದು\

ಮಾತೇ ಆಡದವರೊಂದಿಗೆ ಮಾತನಾಡಲು ಯಾರಿಗೂ ಇಷ್ಟವಿರುವುದಿಲ್ಲ. ಹಾಗಂಥ ಮತ್ತೊಬ್ಬರಿಗೆ ಮಾತನಾಡಲು ಬಿಡದಷ್ಟು ಮಾತನಾಡುವವರ ಬಳಿ ಕೂಡಾ ಮಾತನಾಡುವ ಆಸಕ್ತಿ ಯಾರಿಗೂ ಇರುವುದಿಲ್ಲ. ಜನರು ತಾವು ಮಾತನಾಡುವುದಕ್ಕಿಂತ ಹೆಚ್ಚು ಕೇಳುವ ಅಭ್ಯಾಸ ಇಟ್ಟುಕೊಳ್ಳಬೇಕು. ಸಂವಹನವೊಂದರಲ್ಲಿ ಇಬ್ಬರ ಸಮ ಸಂಭಾಷಣೆ ಇರಬೇಕೇ ಹೊರತು, ಯಾರೊಬ್ಬರೂ ಡಾಮಿನೇಟ್ ಮಾಡಿ ಮಾತನಾಡುವುದು ಸರಿಯಲ್ಲ. 

- ಮೇಲರಿಮೆಯಿಂದ ಒರಿಜಿನಲ್ ಪ್ರನೌನ್ಸಿಯೇಶನ್ ಬಳಕೆ

ಇಂಗ್ಲಿಷ್ನಲ್ಲಿ ಕೆಲವೊಂದು ಪದಗಳು ಬರೆದಂತೆ ಓದಲಿರುವುದಿಲ್ಲ. ಆದರೆ, ಹಲವರು ಅದನ್ನು ಹಾಗೆಯೇ ಆಡುಭಾಷೆಯಲ್ಲಿ ಬಳಸುತ್ತಿರುತ್ತಾರೆ. ಅವರ ನಡುವೆ ನೀವು ಹೋಗಿ ಆ ಪದಗಳ ಪ್ರನೌನ್ಸಿಯೇಶನ್ ಇರುವಂತೆಯೇ ಪದೇ ಪದೇ ಒತ್ತಿ ಹೇಳುವುದರಿಂದ ಅವರಿಗೆ ಅವಮಾನಿಸಿದಂತಾಗುತ್ತದೆ. ಬದಲಿಗೆ ಆ ಪದಗಳ ಬಳಕೆ ಸಾಧ್ಯವಾದಷ್ಟು ಮಿತಿಗೊಳಿಸಿ. 

ನಿಮ್ಮ ಮಗು ತಿರುಗಿ ಹೇಳುತ್ತದೆಯೇ? ಹೀಗ್ ಮಾಡಿ!

- ಬದುಕೋಕೆ ಏನು ಮಾಡ್ತಿದೀರಾ ಎಂದು ಕೇಳುವುದು

ಕೆಲವರು ಅವರಾಯ್ಕೆಯೋ, ಅಥವಾ ಕೆಲಸ ಸಿಗದ್ದಕ್ಕೋ ಏನೂ ಮಾಡುತ್ತಿರುವುದಿಲ್ಲ. ಅಂಥವರ ಬಳಿ ಬದುಕುವುದಕ್ಕೆ ಏನು ಮಾಡ್ತಿದೀರಾ ಎಂಬ ಪ್ರಶ್ನೆ ಉಚಿತವಲ್ಲ. ಅಪರಿಚಿತರ ಬಳಿ ಈ ಪ್ರಶ್ನೆ ಅವಾಯ್ಡ್ ಮಾಡಿ. ಒಂದು ವೇಳೆ ನೀವು ಕೇಳಿ ಅವರು ಹೇಳಲು ತಡವರಿಸುತ್ತಿದ್ದರೆ ಅದನ್ನಲ್ಲಿಗೇ ಬಿಡಿ. 

- ವೈಯಕ್ತಿಕ ವಿಷಯಗಳ ಕುರಿತ ಪ್ರಶ್ನೆಯನ್ನು ಒತ್ತಿ ಒತ್ತಿ ಕೇಳಬೇಡಿ

ನೀ ಮದುವೆ ಆಗೋದು ಯಾವಾಗ, ಮಗು ಹೊಂದೋದು ಯಾವಾಗ, ನೀನು ಪ್ರಗ್ನೆಂಟಾ ಎಂಬ ಪ್ರಶ್ನೆಗಳನ್ನೆಲ್ಲ ಅಪರೂಪಕ್ಕೆ ಸಿಕ್ಕವರಿಗೆ ಪ್ರಶ್ನಿಸಬೇಡಿ. ಅದನ್ನೆಲ್ಲ ಕಟ್ಟಿಕೊಂಡು ನಿಮಗೆ ಆಗಬೇಕಾದುದಾದರೂ ಏನು? ಅವರಾಗೇ ಮಾತನಾಡುವಾಗ ಆ ಬಗ್ಗೆ ಏನಾದರೂ ಹೇಳಿದರೆ ಮಾತು ಮುಂದುವರಿಸುವುದು ಸರಿ.

- ನೀವು ಅವರಿಗೆ ಬೋರ್ ಹೊಡೆಸುತ್ತಿದ್ದೀರಾ ಎಂದು ಕೇಳುವುದು

ಯಾರಿಗಾದರೂ 'ನಾನು ನಿಮಗೆ ಬೋರ್ ಹೊಡೆಸುತ್ತಿದ್ದೀನಾ' ಎಂದು ಪ್ರಶ್ನಿಸಿದರೆ 'ಹೌದು'  ಎಂದು ಮನಸ್ಸಿನಲ್ಲಿದ್ದರೂ ಅದನ್ನು ಬಾಯಿ ಬಿಟ್ಟು ಹೇಳುವವರಾರೂ ಇಲ್ಲ. ಒಂದು ವೇಳೆ ನಿಮಗೆ ಈ ಪ್ರಶ್ನೆ ಕೇಳಬೇಕೆನಿಸಿದರೆ ಬಹುಷಃ ನೀವು ಬೋರ್ ಹೊಡೆಸುತ್ತಿದ್ದೀರಾ ಎನಿಸುತ್ತದೆ. 

- ನಿಮ್ಮ ಆಸ್ತಿಪಾಸ್ತಿಗಳ ಬಗ್ಗೆ, ಹೊಸದಾಗಿ ಕೊಂಡ ವಸ್ತುವಿನ ಬಗ್ಗೆ ಹೇಳಿಕೊಳ್ಳುವುದು

ನೀವು ಹೊಸತಾಗಿ ಕೊಂಡ ಕಾರು ನಿಮಗೆ ಸೂಪರ್ ಎಕ್ಸೈಟ್‌ಮೆಂಟ್ ತಂದಿರಬಹುದು, ಆದರೆ ಅದರ ಬಗ್ಗೆಯೇ ಗಂಟೆಗಟ್ಟಲೆ ಬಡಾಯಿ ಕೊಚ್ಚಿಕೊಳ್ಳುತ್ತಾ ಕುಳಿತರೆ ಕೇಳುವವರಿಗೆ ಹಿಂಸೆ ಎನಿಸಲಾರಂಭಿಸುತ್ತದೆ. ಮಾತನ್ನು ನಿಮ್ಮ ಸ್ವತ್ತು, ಸಂಪತ್ತು, ಬೆಲೆ ಕುರಿತಾಗಿ ವಿವರ ನೀಡುವತ್ತ ತಿರುಗಿಸಿದರೆ ಅದು ಬಹಳ ಬೋರಿಂಗ್ ಎನಿಸುತ್ತದೆ. 

- ಹೂಂ,, ಊಹೂಂವಿನಲ್ಲಿ ಉತ್ತರ ಮುಗಿಸುವುದು

ಯಾರಾದರೂ ಏನಾದರೂ ಪ್ರಶ್ನಿಸಿದರೆ, ಹೇಳಿಕೊಂಡರೆ ಕೇವಲ ತಲೆಯಾಡಿಸುವುದು, ಹೂಂ ಅಥವಾ ಊಹೂಂವಿನಲ್ಲೇ ಉತ್ತರ ಮುಗಿಸುವುದು ಸರಿಯಲ್ಲ. ಇದರಿಂದ ಮಾತನಾಡಿಸಿದವರನ್ನು ನೀವು ನೆಗ್ಲೆಕ್ಟ್ ಮಾಡಿದಂತೆನಿಸುತ್ತದೆ. 

Follow Us:
Download App:
  • android
  • ios