Asianet Suvarna News Asianet Suvarna News

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪತನ: ದೇವೇಗೌಡ

ದೇಶದ ಪ್ರಧಾನಮಂತ್ರಿಯಾಗುವ ಯೋಗ್ಯತೆ ಐಎನ್‌ಡಿಐಎ ನಲ್ಲಿ ಯಾರಿಗೂ ಇಲ್ಲ ಎಂಬುದು ನನಗೆ ಗೊತ್ತಿರೋ ವಿಚಾರ. ಅದಕ್ಕಾಗಿ ಎಲ್ಲರ ಬಳಿಯೂ ಹೋಗಿ ಬರಿಗೈಲಿ ವಾಪಸ್ಸು ಬರುತ್ತಿದ್ದೆ. ಇಡೀ ದೇಶದಲ್ಲಿ ಸತ್ಯ ಹೇಳೋದಾದ್ರೆ ಕರ್ನಾಟಕ ಸೇರಿದಂತೆ 3 ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು ಉಳಿದೆಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ ದಿನೇ ದಿನೇ ಕಾಂಗ್ರೆಸ್ ಕುಸಿಯುತ್ತಿದೆ. ಇದನ್ನ ಮೇಲೆತ್ತಲು ಯಾರಿಂದಲೂ ಸಾಧ್ಯವಿಲ್ಲ. ಈ ಲೋಕಸಭಾ ಚುನಾವಣೆ ಕಳೆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದ ಎಚ್.ಡಿ. ದೇವೇಗೌಡ 

Congress Collapse after Lok Sabha Elections 2024 Says HD Devegowda grg
Author
First Published Apr 17, 2024, 6:38 AM IST

ಬೇಲೂರು(ಏ.17):  ಈ ಬಾರಿ ಲೋಕಸಭಾ ಚುನಾವಣೆ ಕಳೆದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದರು.

ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು. ದೇಶದ ಪ್ರಧಾನಮಂತ್ರಿಯಾಗುವ ಯೋಗ್ಯತೆ ಐಎನ್‌ಡಿಐಎ ನಲ್ಲಿ ಯಾರಿಗೂ ಇಲ್ಲ ಎಂಬುದು ನನಗೆ ಗೊತ್ತಿರೋ ವಿಚಾರ. ಅದಕ್ಕಾಗಿ ಎಲ್ಲರ ಬಳಿಯೂ ಹೋಗಿ ಬರಿಗೈಲಿ ವಾಪಸ್ಸು ಬರುತ್ತಿದ್ದೆ. ಇಡೀ ದೇಶದಲ್ಲಿ ಸತ್ಯ ಹೇಳೋದಾದ್ರೆ ಕರ್ನಾಟಕ ಸೇರಿದಂತೆ 3 ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು ಉಳಿದೆಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ ದಿನೇ ದಿನೇ ಕಾಂಗ್ರೆಸ್ ಕುಸಿಯುತ್ತಿದೆ. ಇದನ್ನ ಮೇಲೆತ್ತಲು ಯಾರಿಂದಲೂ ಸಾಧ್ಯವಿಲ್ಲ. ಈ ಲೋಕಸಭಾ ಚುನಾವಣೆ ಕಳೆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಕುಮಾರಸ್ವಾಮಿ V/S ಡಿಕೆಶಿ ಮಧ್ಯೆ ನಿಲ್ಲದ ಮಾತಿನ ಸಮರ! ನನ್ನ ಜಮೀನಿನ ಬಂಡೆ ಒಡೆದು ಬದುಕಿದ್ದೇನೆಂದ ಡಿಸಿಎಂ!

ಪ್ರಜ್ವಲ್‌ ಗೆಲ್ಲಿಸಿಕೊಡಿ:

ಹೆಣ್ಣು ಮಕ್ಕಳ ಬಗ್ಗೆ ಕುಮಾರಸ್ವಾಮಿ ಹೇಳಿಕೆಯನ್ನ ಕಾಂಗ್ರೆಸ್‌ನವರು ತಿರುಚಿ ಗೊಂದಲ ಸೃಷ್ಟಿಸಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಬೇಸತ್ತು ಕ್ಷಮೆ ಯಾಚಿಸಿದ್ದಾರೆ. ಅವರು ಹೇಳಿರುವ ಅರ್ಥ ಬೇರೇನೇ ಇದ್ದು ಈ ಸಂದರ್ಭ ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ನಾನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಧಿಕಾರದಲ್ಲಿ ಇದ್ದಂತ ಸಂದರ್ಭ ರಾಜ್ಯದ ಎಲ್ಲಾ ಕಡೆ ಅಭಿವೃದ್ಧಿ ಪರ ಕೆಲಸ ಮಾಡಿದ್ದೇನೆ. ಈ ಬಾರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಅಂದರೆ ಅವರ ಕೈ ಬಲಪಡಿಸಬೇಕು. ಆದ್ದರಿಂದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಿ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.

ನಾನು ಇಲ್ಲಿಗೆ ಮತ್ತೆ ಬರುತ್ತೇನೆ:

ಈ ಬಾರಿ ೨೮ ಕ್ಷೇತ್ರಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯ ಬೇಡ. ನನಗೆ 92 ವರ್ಷ ಆಗಿದೆ, ಇನ್ನು ಬದುಕುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ನಿಮ್ಮೆಲ್ಲರ ಆರ್ಶಿರ್ವಾದದಿಂದ ಮತ್ತೊಮ್ಮೆ ಇಲ್ಲಿಗೆ ಬಂದೇ ಬರುತ್ತೇನೆ. ಇಲ್ಲಿ ಯಾರೂ ಸಹ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ಒಳ ಪಿತೂರಿಗೂ ಸಹ ನೀವುಗಳು ಬಲಿಯಾಗದಿರಿ. ನಿಮ್ಮೆಲ್ಲರ ಆರ್ಶಿರ್ವಾದ ಪ್ರಜ್ವಲ್‌ ರೇವಣ್ಣ ಮೇಲಿರಲಿ ಎಂದರು.

ಕಾಂಗ್ರೆಸ್‌ ಐಸಿಯುನಲ್ಲಿದೆ:

ವಿಧಾನ ಪರಿಷತ್ ಸದಸ್ಯ ಹಾಗೂ ಛಲವಾದಿ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದ್ದು ಈಗಾಗಲೇ ಕಾಂಗ್ರೆಸ್ ಪಕ್ಷ ಕತ್ತಿನ ತನಕ ಮುಳುಗಿಹೋಗಿದೆ ತಲೆ ಮುಳುಗುವುದು ಒಂದು ಬಾಕಿ ಇದೆ ಎಂದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯು ನಲ್ಲಿದೆ ಸ್ವಲ್ಪ ಎದೆ ಡವ ಡವ ಅಂತ ಬಡಿತ ಇದೇ ಈ ಲೋಕಸಭಾ ಚುನಾವಣೆ ಕಳೆದ ಮೇಲೆ ಅದು ಸಹ ನಿಂತು ಹೋಗುತ್ತದೆ.

ಕಾಂಗ್ರೆಸ್‌ ಗ್ಯಾರಂಟಿಯಿಂದ ದಾರಿ ತಪ್ಪಿಸುತ್ತಿದ್ದಾರೆ:

ಈಗ ನಡೆಯುತ್ತಿರುವ ಚುನಾವಣೆ ದೇಶದ ಚುನಾವಣೆಯಾಗಿದ್ದು ದೇಶದ ಅಳಿವು ಉಳಿವುಗಳ ಬಗ್ಗೆ ಮತ್ತು ಅಂತರಾಷ್ಟ್ರೀಯ ಬಗ್ಗೆ ಹಾಗೂ ದೇಶದ ಸುಭದ್ರತೆ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆದರೆ, ಕಾಂಗ್ರೆಸ್ ಬರೀ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಇದರಿಂದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ.

ದೇಶದ ಭವಿಷ್ಯ ಬರೆಯುವ ವಿಶ್ವ ನಾಯಕ ನರೇಂದ್ರ ಮೋದಿ ನಾಯಕತ್ವವನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕು ಹಾಗಾಗಿ ಪ್ರಜ್ವಲ್ ಮುಂದಿನ ಭವಿಷ್ಯ ನಾಯಕ ಅವರನ್ನ ಗೆಲ್ಲಿಸಿ ಪಾರ್ಲಿಮೆಂಟಿಗೆ ಕಳುಹಿಸಿ ಕೊಡಿ. ನಮ್ಮ ರಾಷ್ಟ್ರಪತಿಯನ್ನು ಏಕವಚನದಲ್ಲಿ ಕರೆಯುವ ಸಿಎಂ ಅವರಿಗೆ ನಿಜವಾದ ನೈತಿಕತೆ ಇದ್ದರೆ ಸೋನಿಯಾ ಗಾಂಧಿಯವರನ್ನು ಹೆಸರಿಡಿದು ಕರೆಯಲಿ. ಕೇವಲ ಗ್ಯಾರಂಟಿ ಹಿಡಿದು ಈ ಬಾರಿ ಚುನಾವಣೆ ಮಾಡುತ್ತಿದ್ದಾರೆ. ಅವರ ಸ್ವ ಕ್ಷೇತ್ರದಲ್ಲಿ ಅವರ ಗೆಲುವು ಅನುಮಾನವಾಗಿದ್ದು ಎನ್‌ಡಿಎ ಅಭ್ಯರ್ಥಿಗಳ ಬಗ್ಗೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇನ್ನು ಡಿಕೆಶಿಯವರ ಕನಸು ತಿರುಕನ ಕನಸಾಗಿದೆ. ಅವರ ಮುಖ್ಯಮಂತ್ರಿ ಆಸೆ ದೂರುಉಳಿಯಲಿದೆ. ಅಲ್ಲದೆ ಕಾಂಗ್ರೆಸ್ ಪಕ್ಷ ದಲ್ಲಾಳಿಗಳ ಹಾಗೂ ಭ್ರಷ್ಟಾಚಾರ ಪಕ್ಷವಾಗಿದ್ದು ಇದನ್ನು ಕಿತ್ತೊಗೆಯಬೇಕೆಂದರು.

ಕಾಂಗ್ರೆಸ್‌ಗೆ ಮತ ಕೇಳುವ ನೈತಿಕತೆಯಿಲ್ಲ: 

ಪ್ರಜ್ವಲ್‌ ರೇವಣ್ಣ ಮಾತನಾಡಿ, ಕಾಂಗ್ರೆಸ್‌ ಬರಿ ಗ್ಯಾರಂಟಿಗಳ ಮೇಲೆ ರಾಜ್ಯದಲ್ಲಿ ರಾಜಕಾರಣ ಮಾಡುತ್ತ ಬಂದಿದ್ದಾರೆ ಇವರಿಗೆ ಮತ ಕೇಳಲು ನೈತಿಕತೆ ಇಲ್ಲ ಅಭಿವೃದ್ಧಿಯಲ್ಲಿ ಶೂನ್ಯ. ನಾನು ಈ ತಾಲೂಕಿನ 350ಕ್ಕೂ ಹೆಚ್ಚು ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ ಈಗಾಗಲೇ ಕಾಂಗ್ರೆಸ್ ವಿರುದ್ಧದ ಕೂಗು ಹೊರಬಿದ್ದಿದೆ. ಹೆಣ್ಣು ಮಕ್ಕಳಿಗೆ 2 ಸಾವಿರ ಗ್ಯಾರಂಟಿ ಹಣ ಸರಿಯಾಗಿ ತಲುಪಿಲ್ಲ. ಹಣವನ್ನು ಅವರ ಅಪ್ಪನ ಮನೆಯಿಂದ ತಂದು ಕೊಡುತ್ತಿಲ್ಲ ನಿಮ್ಮ ಗಂಡಂದಿರ ಜೇಬಿನಿಂದ ಕಿತ್ತು ನಿಮಗೆ ಕೊಡುತ್ತಿದ್ದಾರೆ ಇವರಿಗೆ ಮತ ಕೇಳಲುಯಾವ ನೈತಿಕತೆ ಇದೆ ಎಂದು ಕಿಡಿ ಕಾರಿದರು.

HDD VS DKShi: ಬೆಂಗಳೂರು ಸುತ್ತ 1 ಸಾವಿರ ಎಕರೆ ಇದೆ: ಕಡಲೆಕಾಯಿ, ಆಲೂಗಡ್ಡೆ ಬೆಳೆದಿದ್ರಾ? ಹೆಚ್‌ಡಿಡಿಗೆ ಡಿಕೆಶಿ ಪ್ರಶ್ನೆ

ಕಾಂಗ್ರೆಸ್ ಪಕ್ಷ ಯಾವಾಗ ಅಧಿಕಾರಕ್ಕೆ ಬರುತ್ತದೆ ಆ ಸಂದರ್ಭದಲ್ಲಿ ಬರಗಾಲ ತಾಂಡವವಾಡುತ್ತಿದೆ ಎಂಬುವುದಕ್ಕೆ ಇಲ್ಲಿರುವ ತಾಯಂದಿರು ಹಾಗೂ ಹಿರಿಯರೇ ಸಾಕ್ಷಿ, ಅವರು ಗದ್ದುಗೆ ಏರಿದಾಗಲೆಲ್ಲಾ ನೀರಿಗೆ ಹಾಹಾಕಾರ ಪಡುವ ಸ್ಥಿತಿಯಾಗಿದೆ. ಇಂತಹ ಪಕ್ಷವನ್ನು ಬುಡ ಸಮೇತ ಕಿತ್ತುಹಾಕಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಮೋದಿ ಪ್ರಧಾನಿ ಆಗಬೇಕಾದ್ರೆ ಪ್ರಜ್ವಲ್‌ ಗೆಲ್ಲಬೇಕು: 

ಶಾಸಕ ಹುಲ್ಲಳ್ಳಿ ಸುರೇಶ್ ಮಾತನಾಡಿ ಮತ್ತೊಮ್ಮೆ ದೇಶಕ್ಕೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕಾದರೆ ಮತ್ತೊಮ್ಮೆ ಹಾಸನ ಜಿಲ್ಲೆಗೆ ಪ್ರಜ್ವಲ್ ರೇವಣ್ಣ ಸಂಸದರಾಗಬೇಕು ಎಂಬ ಭಾವನೆಯಿಂದ ಯಾವುದೇ ಜಾತಿ ಭೇದ ಅಂತರವಿಲ್ಲದೆ ಪ್ರೀತಿಯಿಂದ ಈ ಚುನಾವಣೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ದಯವಿಟ್ಟು ದೇವೇಗೌಡರಲ್ಲಿ ಮಾತು ಕೊಡುತ್ತೇವೆ ಈ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಕೊಡಿಸುವ ಮೂಲಕ ಈ ಬಾರಿ ಎನ್‌ಡಿಎ ಅಭ್ಯರ್ಥಿಯನ್ನ ಗೆಲ್ಲಿಸಿ ಕಳುಹಿಸಿ ಕೊಡುತ್ತೇವೆ ಎಂದರು.

ಈ ವೇಳೆ ಮಾಜಿ ಶಾಸಕ ಕೆ ಎಸ್ ಲಿಂಗೇಶ್. ಜೆಡಿಎಸ್ ತಾಲೂಕು ಅಧ್ಯಕ್ಷ ಅನಂತ ಸುಬ್ಬರಾಯ. ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಎ ನಾಗರಾಜ್. ಜಿಪಂ ಮಾಜಿ ಅಧ್ಯಕ್ಷ ಬಿ. ಡಿ ಚಂದ್ರೇಗೌಡ. ಜಿಪಂ ಮಾಜಿ ಸದಸ್ಯ ಸಿ.ಎಸ್ ಪ್ರಕಾಶ್. ಜಿಪಂ ಮಾಜಿ ಸದಸ್ಯ ಲತಾ ದಿಲೀಪ್. ಲತಾ ಮಂಜೇಶ್ವರಿ , ಪಿಎಂ ದೇವರಾಜು. ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿಸಿ ಉಮೇಶ್ ಹಾಗೂ ಇತರರು ಹಾಜರಿದ್ದರು.

Follow Us:
Download App:
  • android
  • ios